ಡಂಬಳ : ಹೋಬಳಿ ವ್ಯಾಪ್ತಿಯ ಶಿಂಗಟರಾಯನಕೇರಿ ತಾಂಡೆ, ಡೋಣಿ ತಾಂಡೆ ಗ್ರಾಮಗಳಲ್ಲಿ ಉತ್ತರ ಕರ್ನಾಟಕ ಮಹಾಸಭಾದಿಂದ ಬಗರ್ ಹುಕುಂ ಸಾಗುವಳಿದಾರರ ಹಕ್ಕಿಗಾಗಿ ಜಾಗೃತಿ ಅಭಿಯಾನ ನಡೆಸಲಾಯಿತು.
ಈ ವೇಳೆ ಶಿಂಗಟರಾಯನಕೇರಿ ತಾಂಡೆಯಲ್ಲಿ ನರೇಗಾ ವ್ಯಾಪ್ತಿಯ ಕಾರ್ಯದಲ್ಲಿ ತೊಡಗಿಕೊಂಡಿದ್ದ ಬಗರ್ ಹುಕುಂ ಸಾಗುವಳಿದಾರರಿದ್ದಲ್ಲಿಗೆ ತೆರಳಿದ ಮಹಾಸಭಾ ಪದಾಧಿಕಾರಿಗಳು, ಅರಣ್ಯ ಭೂಮಿಯ ಹಕ್ಕಿಗಾಗಿ ಹಕ್ಕೊತ್ತಾಯದ ಬಗೆಗೆ ಜಾಗೃತಿ ಮೂಡಿಸಿದರು. ಈ ವೇಳೆ ಮಾತನಾಡಿದ ಮಹಾಸಭಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ಈಗಾಗಲೇ ಜಿಲ್ಲೆಯಾದ್ಯಂತ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಅಭಿಯಾನ ಆರಂಭಿಸಲಾಗಿದೆ. ರೈತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು. ಅರಣ್ಯ ಹಾಗೂ ಹುಲ್ಲುಗಾವಲು ಪ್ರದೇಶದಲ್ಲಿ ತಲೆತಲಾಂತರದಿಂದ ಉಳುಮೆ ಮಾಡುತ್ತಿರುವ ರೈತರ ಭೂಮಿಯನ್ನು ಕಸಿದುಕೊಂಡರೆ ಅದು ಅರಣ್ಯ ಇಲಾಖೆ ಬಡವರ ಮೇಲೆ ದೌರ್ಜನ್ಯ ಎಸಗಿದಂತೆಯೇ ಸರಿ ಎಂದರು.
ಇದೇ ವೇಳೆ ಮಾತನಾಡಿದ ಗ್ರಾಮಸ್ಥರು ಅರಣ್ಯ ಇಲಾಖೆ ಹಕ್ಕುಪತ್ರ ನೀಡಲು ಮೀನಮೇಷ ಎಣಿಸುತ್ತಿರುವುದರ ಬಗ್ಗೆ ಕಿಡಿಕಾರಿದರು. ತದ ನಂತರ ಡೋಣಿ ತಾಂಡೆಯಲ್ಲೂ ಅಭಿಯಾನ ಕೈಗೊಳ್ಳಲಾಯಿತು.
ಗಣೇಶ ರಾಠೋಡ, ಭೀಮಸೇನ ಪವಾರ, ವಿನಾಯಕ ರಾಠೋಡ, ಶಂಕರ ಲಮಾಣಿ, ಎಲ್.ಎಲ್.ಚವ್ಹಾಣ, ಪಾಂಡಪ್ಪ ಮೇಘಾವತ್, ಪ್ರಕಾಶ ಬಮ್ಮನಪಾಡ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

You May Also Like

ಸಿನಿಮಾ ಮಂದಿರದಲ್ಲಿ ಪ್ರೇಕ್ಷಕರ ಕಡಿತವಿಲ್ಲ

ಕೊರೊನಾ ಸಂಖ್ಯೆ ಮತ್ತೆ ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ಸಿನಿಮಾ ಮಂದಿರಗಳು ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಿಎಂ ಯಡಿಯೂರಪ್ಪ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಟ್ವೀಟ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ಅಧಿಕಾರ ಸ್ವೀಕರಿಸಿದ ಡಿಸಿ ಸುಂದರೇಶ್ ಬಾಬು ಪರಿಚಯ

ಗದಗ: ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಸುಂದರೇಶಬಾಬು ಎಂ ಅವರನ್ನು ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿರುವ…

ಹಸಿರು ಮತ್ತು ಕೆಂಪು ವರ್ಣಗಳು ಸಿಡಿದ್ದೆದ್ದರೆ ಸರ್ಕಾರಕ್ಕೆ ಉಳಿಗಾಲವಿಲ್ಲ: ಪೀರು ರಾಠೋಡ್

ರೈತರು ಮತ್ತು ಕಾರ್ಮಿಕರ ಶಕ್ತಿಯನ್ನು ಈ ಸರ್ಕಾರಕ್ಕೆ ತೋರಿಸಬೇಕಾಗುತ್ತದೆ. ಹಸಿರು ಬಣ್ಣದ ಸಂಕೇತ ಹೊಂದಿರುವ ರೈತರು, ಕೆಂಪು ಬಣ್ಣದ ಸಂಕೇತ ಹೊಂದಿರುವ ಕಾರ್ಮಿಕರ ಶಕ್ತಿ ಒಂದಾದರೆ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಕಾರ್ಮಿಕ ಮುಖಂಡ ಪೀರು ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.

ವಾಲಿಬಾಲ್ ಪಂದ್ಯಾಟ : ಹಳಕಟ್ಟಿ ಶಾಲೆ ಬಾಲಕಿಯರ ತಂಡ ಸಾಧನೆ

ಆಲಮಟ್ಟಿ : ಸ್ಥಳೀಯ ಎಸ್.ವಿ.ವಿ.ಅಸೋಸಿಯೇಷನ್ ಶಿಕ್ಷಣ ಸಂಸ್ಥೆಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯ ಬಾಲಕಿಯರ ವಾಲಿಬಾಲ್ ತಂಡ  2022-23…