ದೆಹಲಿ: ನ್ಯೂಜಿಲೆಂಡ್ ಮತ್ತು ಫ್ರಾನ್ಸ್ ನಂತ್ರ ಈಗ ಬುರ್ಖಾ ನಿಷೇಧಕ್ಕೆ ಶ್ರೀಲಂಕಾ ರಾಷ್ಟ್ರ ಮುಂದಾಗಿದೆ. ಅದ್ರಂತೆ, ಬುರ್ಖಾ ಧರಿಸಿದ, ಸಾವಿರಕ್ಕೂ ಹೆಚ್ಚು ಇಸ್ಲಾಮಿಕ್ ಶಾಲೆಗಳನ್ನ ನಿಷೇಧಿಸಲು ಶ್ರೀಲಂಕಾ ಸರ್ಕಾರ ಸಿದ್ಧತೆ ನಡೆಸುತ್ತಿದೆ.

ಸಾರ್ವಜನಿಕ ಭದ್ರತಾ ಸಚಿವ ಶರತ್ ವೆರಸೆಕೇರಾ ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ್ದು, ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಮುಸ್ಲಿಂ ಮಹಿಳೆಯರು ಧರಿಸುವ ಬಟ್ಟೆಗಳ ಮೇಲೆ ನಿಷೇಧ ಹೇರುವುದು ಅವಶ್ಯಕವಾಗಿದೆ. ಇನ್ನು ನಮ್ಮ ಆರಂಭದ ದಿನಗಳಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಹುಡುಗಿಯರು ಬುರ್ಖಾ ಧರಿಸಿರಲಿಲ್ಲ ಎಂದು ಹೇಳಿದರು.

2019ರಲ್ಲಿ ತಾತ್ಕಾಲಿಕ ಬುರ್ಖಾ ನಿಷೇಧ..!

ಇದು ಇತ್ತೀಚೆಗೆ ಬಹಿರಂಗಗೊಂಡ ಧಾರ್ಮಿಕ ಉಗ್ರವಾದದ ಸಂಕೇತವಾಗಿದ್ದು, ನಾವು ಖಂಡಿತವಾಗಿಯೂ ಅದನ್ನ ನಿಷೇಧಿಸುತ್ತೇವೆ ಎಂದು ವೆರಕೇರಾ ಹೇಳಿದರು. ಶ್ರೀಲಂಕಾದ ಜನಸಂಖ್ಯೆಯ ಬಹುಪಾಲು ಬೌದ್ಧ ಧರ್ಮೀಯರು ಇರೋದ್ರಿಂದ 2019ರಲ್ಲಿ ಇಲ್ಲಿನ ಚರ್ಚ್ ಗಳು ಮತ್ತು ಹೋಟೆಲ್‌ಗಳ ಮೇಲೆ ಇಸ್ಲಾಮಿಕ್ ಉಗ್ರರು ದಾಳಿ ನೆಸಿದ್ರು. ಈ ದಾಳಿಯಲ್ಲಿ ಉಗ್ರರು 250ಕ್ಕೂ ಹೆಚ್ಚು ಜನರನ್ನ ಬಲಿ ತೆಗೆದುಕೊಂಡ ಹಿನ್ನೆಲೆಯಲ್ಲಿ ಶ್ರೀಲಂಕಾ ತಾತ್ಕಾಲಿಕವಾಗಿ ಬುರ್ಖಾ ನಿಷೇಧ ಹೇರಿತ್ತು.

Leave a Reply

Your email address will not be published. Required fields are marked *

You May Also Like

ಅಬ್ಬಾ…! ಮಹಾರಾಷ್ಟ್ರದಲ್ಲಿ ಎಷ್ಟು ಜನ ಪೊಲೀಸರಿಗೆ ಕೊರೊನಾ ಬಂದಿದೆ ಗೊತ್ತಾ?

ಮುಂಬಯಿ: ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಹಾವಳಿ ಮಿತಿ ಮೀರುತ್ತಿದೆ. ಕೊರೊನಾ ವಾರಿಯರ್ಸ್ ನ್ನು ಅದು…

ಟಿಕ್ ಟಾಕ್ ಸೇರಿ 59 App ಬ್ಯಾನ್ ಮಾಡಿದ ಕೇಂದ್ರ ಸರ್ಕಾರ

ದೆಹಲಿ: ದೇಶದ ಸಮಗ್ರತೆ, ಏಕತೆ ಹಾಗೂ ದೇಶದ ರಕ್ಷಣೆಯ ಹಿತದೃಷ್ಟಿಯಿಂದ ರಾಜ್ಯಗಳ ಭದ್ರತೆಯ ಜೊತೆಗೆ ಸಾರ್ವಜನಿಕರ…

ಒಂದೇ ದಿನಕ್ಕೆ ರಾಜ್ಯದಲ್ಲಿ 50 ಪಾಸಿಟಿವ್

ಒಂದೇ ದಿನಕ್ಕೆ ರಾಜ್ಯದಲ್ಲಿ 50 ಪಾಸಿಟಿವ್ ಬೆಂಗಳೂರು: ರಾಜ್ಯದಲ್ಲಿ ಒಂದೇ ದಿನದಲ್ಲಿ 50 ಪಾಸಿಟಿವ್ ಪ್ರಕರಣಗಳು…

ಅಮೆರಿಕದ ಚುನಾವಣೆಯಲ್ಲಿ ನೆಕ್ ಟು ನೆಕ್ ಫೈಟ್ ನೀಡುತ್ತಿರುವ ಬಿಡೆನ್!

ವಾಷಿಂಗ್ಟನ್ : ಅಮೆರಿಕದ ಚುನಾವಣೆಯಲ್ಲಿ ನಿಕಟ ಪೈಪೋಟಿ ಕಂಡು ಬರುತ್ತಿದೆ. ಹೀಗಾಗಿ ಗೆಲುವು ಯಾರ ಪಾಲಿಗೆ ಧಕ್ಕಲಿದೆ ಎಂಬುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.