ದಾವಣಗೆರೆ: ದಾವಣಗೆರೆ ಮತ್ತು ಹೊನ್ನಾಳಿ ತಾಲ್ಲೂಕುಗಳಲ್ಲಿ ನಾಟಿಭತ್ತಕ್ಕಿಂತ ಚೆಲ್ಲುಭತ್ತಕ್ಕೆ ರೈತರು ಪ್ರಾಮುಖ್ಯ ನೀಡುತ್ತಿದ್ದು, ಕಡಿಮೆ ವೆಚ್ಚ, ಸುಲಭ ಕೃಷಿಗೆ ಹೇಳಿ ಮಾಡಿಸಿದಂತಿರುವ ಚೆಲ್ಲುಭತ್ತ ಪದ್ಧತಿ ಜಿಲ್ಲೆಯಲ್ಲಿ ನಿಧಾನಕ್ಕೆ ಕಾಲೂರುತ್ತಿದೆ.

ಎರಡು ಮೂರು ಬಾರಿ ಉಳುಮೆ ಮಾಡಿಕೊಳ್ಳಬೇಕು. ಭತ್ತದ ಗದ್ದೆಯನ್ನು ಸರಿಯಾಗಿ ಮಟ್ಟ ಮಾಡಿ ಒಂದೇ ಸಮವಾಗಿ ನೀರು ನಿಲ್ಲುವಂತೆ ನೋಡಿಕೊಳ್ಳಬೇಕು. ಭತ್ತ ಚೆಲ್ಲುವ ಎರಡು ವಾರಕ್ಕಿಂತ ಮೊದಲು ಕೊಟ್ಟಿಗೆ ಗೊಬ್ಬರವನ್ನು ಭೂಮಿಗೆ ಸೇರಿಸಬೇಕು.

ಬಿತ್ತನೆ ಬೀಜವನ್ನು ಒಂದು ದಿನ ನೆನೆಸಿಡಬೇಕು. ತೆಗೆದು ಮರುದಿನ ಮೊಳಕೆ ಕಟ್ಟಿದಾಗ ಗದ್ದೆಯಲ್ಲಿ ಸಮವಾಗಿ ಚೆಲ್ಲಬೇಕು. ಬಳಿಕ ತೇವ ಇರುವಂತೆ ನೋಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನರ್ದೇಶಕಿ (ಉಸ್ತುವಾರಿ ಮತ್ತು ಮೌಲ್ಯಮಾಪನ) ರೇಖಾ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಜಾನಪದ ಕಲಾವಿದ ಪಾಗದ ನಿಧನ

ಸಮೀಪದ ಕೂತಬಾಳ ಗ್ರಾಮದ ಬಸವ ಬಳಗ ಜಾನಪದ ಸಾಂಸ್ಕೃತಿಕ ಕಲಾತಂಡ ಅಧ್ಯಕ್ಷ ಹಾಗೂ ಸಗರ ಕಲಾ ಚಕ್ರವರ್ತಿ ಪ್ರಶಸ್ತಿ ಪುರಸ್ಕೃತ ಬಸವರಾಜ ಪಾಗದ ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.

ಕರ್ತವ್ಯ ನಿರತ ಸಾರಿಗೆ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವವರ ಮೇಲೆ ಕ್ರಮಕ್ಕೆ ಗದಗ ಡಿಸಿ ಸೂಚನೆ!

ವಾಕರಾರಸಾ ಸಂಸ್ಥೆಯ ನಿರ್ವಾಹಕರು ಹಾಗೂ ಚಾಲಕರು ಮತ್ತು ಸಿಬ್ಬಂದಿಗಳು ನೀಡಿದ ಅನಿರ್ದಿಷ್ಟಾವಧಿ ಮುಷ್ಕರದಿಂದ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ಕನಿಷ್ಟ ದರದಲ್ಲಿ ಸಾರಿಗೆ ಸೇವೆ ಒದಗಿಸಲು ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.

ನಾಗಾವಿ ತಾಂಡದಲ್ಲಿ ಜಲಜೀವನ ಯೋಜನೆಗೆ ಚಾಲನೆ

ತಾಲೂಕಿನ ನಾಗಾವಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗಾವಿ ತಾಂಡದಲ್ಲಿ ಹಾಗೂ ಬಿಂಕದಕಟ್ಟಿ, ಮಲ್ಲಸಮುದ್ರ ಗ್ರಾಮಗಳಲ್ಲಿ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗೆ ಭಾನುವಾರ ಶಾಸಕ ಎಚ್.ಕೆ.ಪಾಟೀಲ ಭೂಮಿ ಪೂಜೆ ನೆರವೇರಿಸಿದರು.

ನಾಳೆಯಿಂದ 14 ದಿನ ರಾಜ್ಯಾದ್ಯಂತ ಲಾಕ್

ನಾಳೆ ರಾತ್ರಿಯಿಂದಲೇ ರಾಜ್ಯಾದ್ಯಂತ 14 ದಿನಗಳವರೆಗೆ ಲಾಕ್ ಡೌನ್ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.