ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಇದೀಗ ಮುಂದಿನ 15 ರಾಜ್ಯಾದ್ಯಂತ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ರಾಜ್ಯ ಸರ್ಕಾರ ಮೂರು ಮಹತ್ವದ ತೀರ್ಮಾಣಗಳು ಕೈಗೊಳ್ಳಲಿದೆ. ರಾಜ್ಯದ ಲಾಕ್ ಡೌನ್ ಭವಿಷ್ಯ, ಲಸಿಕೆಗೆ ಶುಲ್ಕ ನಿಗದಿ ತರ‍್ಮಾನದ ಜೊತೆಗೆ ಶಿಕ್ಷಕರ ವರ್ಗಾವಣೆ ಸಮಸ್ಯೆಗೆ ಪರಿಹಾರ ಏನೆಂಬ ಪ್ರಶ್ನೆಗೆ ಇಂದು ಸಭೆಯಲ್ಲಿ ಉತ್ತತರ ಸಿಗುವ ಸಾಧ್ಯತೆ ಇದೆ.

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕನಿಷ್ಠ 2 ವಾರ ನಗರವನ್ನು ಲಾಕ್ ಡೌನ್ ಮಾಡುವುದು ಅನಿವಾರ‍್ಯ ಇದೆ ಎಂದು ತಜ್ಞರು ಸಲಹೆ ನೀಡಿರುವುದರಿಂದ ಇಂದಿನ ಸಭೆ ಮೇಲೆ ರಾಜ್ಯದ ಜನರ ದೃಷ್ಟಿ ನೆಟ್ಟಿದೆ. ರಾಜ್ಯಾದ್ಯಂತ ಮುಂದಿನ 15 ದಿನ ಲಾಕ್ ಡೌನ್ ಮಾಡುವ ಕುರಿತಂತೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ. ವಾರಾಂತ್ಯದ ಕರ್ಫ್ಯೂ ಅಥವಾ ಲಾಕ್ ಡೌನ್ ಮಾಡುವ ಸಂಬಂಧ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಚಿವ ಸಹೋದ್ಯೋಗಿಗಳ ಜೊತೆ ಚರ್ಚಿಸಿದ್ದಾರೆ. ಬಹುತೇಕ ಸಚಿವರು ವಾರಂತ್ಯದ ಕರ್ಫ್ಯೂ ಮುಂದುವರಿಸಲು ಒಲವು ತೋರಿದ್ದಾರೆ. ಆದರೆ, ತಜ್ಞರು ಲಾಕ್ ಡೌನ್ ಗೆ ಸಲಹೆ ನೀಡಿದರೆ ಅದನ್ನು ಒಪ್ಪುವುದು ಸೂಕ್ತ ಎಂದು ಕೆಲವರು ಹೇಳಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You May Also Like

15 ದಿನದಲ್ಲಿ ಬಾಕಿ ತೆರಿಗೆ ವಸೂಲಿ ಮಾಡಿ : ನಗರಸಭೆಗೆ ಡಿಸಿ ಸೂಚನೆ

ಗದಗ ಬೆಟಗೇರಿ ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಎಂ. ಸುಂದರೇಶಬಾಬು ನಗರಸಭೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಅವಳಿ ನಗರದ ಎಲ್ಲ ಮುಖ್ಯ ರಸ್ತೆಗಳ ತೆರೆದ ಗುಂಡಿಗಳನ್ನು ತಕ್ಷಣವೇ ಮುಚ್ಚಲು ನಿರ್ದೇಶನ ನೀಡಿದರು.

ಕೊರೊನಾ ಪಾಸಿಟಿವ್ ಆರೋಗ್ಯ ಕೇಂದ್ರದ ನೌಕರ ಬಲಿ!

ಬಾಗಲಕೋಟೆ: ಬೆನ್ನ ಬಿಡದೆ ಕಾಡುತ್ತಿರುವ ಮಾಹಾಮಾರಿಗೆ ಕೊರೊನಾ ಸೋಂಕಿಗೆ ಸಮುದಾಯ ಆರೋಗ್ಯ ಕೇಂದ್ರದ ಡಿ ದರ್ಜೆ…

ಭೀಕರ ದುರಂತದಲ್ಲಿ ಮೃತಪಟ್ಟವರೆಲ್ಲ ನಿಡಗುಂದಿ ಭಾಗದವರು- ಕಾಶಿಗೆ ಹೋಗಿಬಂದವರೇ ಈಗ ರಾಮೇಶ್ವರಕ್ಕೆ ಹೊರಟಿದ್ದರು

ಆಲಮಟ್ಟಿ : ಅವರೆಲ್ಲರೂ ಕಾಶಿಗೆ ಹೋಗಿ ಬಂದಿದ್ದರು. ಕಾಶಿ ದರ್ಶನ ಬಳಿಕ ರಾಮೇಶ್ವರ ದರುಶನಕ್ಕೆ ಶೃದ್ಧಾಭಕ್ತಿ…

ನಾಳೆ ರಾಜ್ಯ ಬಂದ್ ಏನಿರುತ್ತೆ..? ಏನಿರಲ್ಲ..?

ಮಾರಾಟ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಸಂಘಟನೆಗಳಿಂದ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಕೆಲವು ಸೇವೆಗಳು ಸ್ಥಗಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸರ್ಕಾರಿ ಬಸ್ ಸಂಚಾರ ಎಂದಿನಂತೆ ಇರುತ್ತದೆ. ಇದರೊಂದಿಗೆ ಖಾಸಗಿ ಬಸ್, ಪ್ರಯಾಣಿಕರ ವಾಹನಗಳು, ಸರ್ಕಾರಿ ಕಚೇರಿ, ಮೆಟ್ರೋ ಸೇವೆ, ಆಸ್ಪತ್ರೆ ಮೆಡಿಕಲ್ ಸ್ಟೋರ್, ಅಂಬುಲೆನ್ಸ್, ರೈಲು ಸಂಚಾರ, ಹೋಟೆಲ್, ಹಣ್ಣು ತರಕಾರಿ ವ್ಯಾಪಾರ ಮೊದಲಾದವು ಇರುತ್ತವೆ.