ಜಿಲ್ಲೆಯಲ್ಲಿ ಚೆಲ್ಲುಭತ್ತ ನಿಧಾನಕ್ಕೆ ಕಾಲೂರಿದೆ

ದಾವಣಗೆರೆ: ದಾವಣಗೆರೆ ಮತ್ತು ಹೊನ್ನಾಳಿ ತಾಲ್ಲೂಕುಗಳಲ್ಲಿ ನಾಟಿಭತ್ತಕ್ಕಿಂತ ಚೆಲ್ಲುಭತ್ತಕ್ಕೆ ರೈತರು ಪ್ರಾಮುಖ್ಯ ನೀಡುತ್ತಿದ್ದು, ಕಡಿಮೆ ವೆಚ್ಚ, ಸುಲಭ ಕೃಷಿಗೆ ಹೇಳಿ ಮಾಡಿಸಿದಂತಿರುವ ಚೆಲ್ಲುಭತ್ತ ಪದ್ಧತಿ ಜಿಲ್ಲೆಯಲ್ಲಿ ನಿಧಾನಕ್ಕೆ ಕಾಲೂರುತ್ತಿದೆ.

ಎರಡು ಮೂರು ಬಾರಿ ಉಳುಮೆ ಮಾಡಿಕೊಳ್ಳಬೇಕು. ಭತ್ತದ ಗದ್ದೆಯನ್ನು ಸರಿಯಾಗಿ ಮಟ್ಟ ಮಾಡಿ ಒಂದೇ ಸಮವಾಗಿ ನೀರು ನಿಲ್ಲುವಂತೆ ನೋಡಿಕೊಳ್ಳಬೇಕು. ಭತ್ತ ಚೆಲ್ಲುವ ಎರಡು ವಾರಕ್ಕಿಂತ ಮೊದಲು ಕೊಟ್ಟಿಗೆ ಗೊಬ್ಬರವನ್ನು ಭೂಮಿಗೆ ಸೇರಿಸಬೇಕು.

ಬಿತ್ತನೆ ಬೀಜವನ್ನು ಒಂದು ದಿನ ನೆನೆಸಿಡಬೇಕು. ತೆಗೆದು ಮರುದಿನ ಮೊಳಕೆ ಕಟ್ಟಿದಾಗ ಗದ್ದೆಯಲ್ಲಿ ಸಮವಾಗಿ ಚೆಲ್ಲಬೇಕು. ಬಳಿಕ ತೇವ ಇರುವಂತೆ ನೋಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನರ್ದೇಶಕಿ (ಉಸ್ತುವಾರಿ ಮತ್ತು ಮೌಲ್ಯಮಾಪನ) ರೇಖಾ ಮಾಹಿತಿ ನೀಡಿದ್ದಾರೆ.

Exit mobile version