ಕಲಬಬುರಗಿ : ದೇಶದಲ್ಲೇ ಮೊದಲಬಾರಿಗೆ ಕೋರೊನಾ ಸಂಕಿನಿಂದ ಮೃತಪಟ್ಟ ಮೊಹಮದ್ದ ಹುಸೇನ್ ಸಿದ್ದಿಕ (76) ಅವರ ಕೊವಿಡ್ ಪಾಸಿಟಿವ್ ವರದಿ ಇನ್ನೂ ಅವರ ಕುಟುಂಬದ ಕೈಗೆ ತಲುಪಿಲ್ಲ.
ಸೌದಿ ಅರೇಬಿಯಾದ ಮೆಕ್ಕಾ ಯಾತ್ರೆಗೆ ತೆರಳಿದ್ದ ಅವರು 2020ರ ಫೆಬ್ರುವರಿ 29ರಂದು ಕಲಬುರಗಿಗೆ ಮರಳಿದ್ದರು. ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಮಾರ್ಚ 9ರಂದು ಹೈದರಾಬಾದ್‌ಗೆ ಕರೆದೊಯ್ಯಲಾಗಿತ್ತು. ಅಲ್ಲಿಯೂ ಸರಿಯಾದ ಚಿಕಿತ್ಸೆ ಸಿಗಲಿಲ್ಲ ಎಂದು ಕಲಬುರಗಿಗೆ ಕರೆತರುವಾಗ ಮಾರ್ಗ ಮಧ್ಯೆ ಮಾರ್ಚ 10 ರಂದು ಮೃತಪಟ್ಟರು. ಅವರಿಗೆ ಕೋವಿಡ್‌-19 ತಗುಲಿದ್ದು ದೃಢಪಟ್ಟಿದ್ದರಿಂದ ದೇಶದ ಗಮನ ಕಲಬುರಗಿಯತ್ತ ಹರಿದಿತ್ತು.

ಸಾವು ಸಂಭವಿಸಿದ ವೇಳೆಯೇ ಕುಟುಂಬದವರಿಗೆ ಅದರ ವರದಿ ನೀಡಲಾಗಿರುತ್ತದೆ. ಸಿದ್ದಿಕಿ ಅವರು ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಮೃತಪಟ್ಟರು. ಅವರ ಕೋವಿಡ್ ವರದಿ ಮಾರನೇ ದಿನ ಬಂದಿದೆ. ಹಾಗಾಗಿ, ಅವರಿಗೆ ವರದಿ ಸಿಕ್ಕಿರಲಿಕ್ಕಿಲ್ಲ. ಸಿದ್ದಿಕಿ ಅವರ ಎಸ್‌ಆರ್‌ಎಫ್‌ ಸಂಖ್ಯೆ ಸಮೇತ ಅರ್ಜಿ ಕೊಟ್ಟರೆ ಲಿಖಿತ ವರದಿ ನೀಡುತ್ತೇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ಪ್ರತಿಕ್ರಿಯಿಸಿದರು.

Leave a Reply

Your email address will not be published. Required fields are marked *

You May Also Like

ಭಾಷಣ ನಿಲ್ಲಿಸಿ, ಕೆಲಸ ಮಾಡಿ: ಸಿದ್ದರಾಮಯ್ಯ

ಬೆಂಗಳೂರು: ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತಾಗಿದೆ @PMOIndia ಭಾಷಣಗಳು. ನಿಯಂತ್ರಣ ಮೀರಿ ಹರಡುತ್ತಿರುವ ಕೊರೊನಾ ಸೋಂಕಿನಿಂದ…

ಪ್ಲಾಸ್ಮಾ ಚಿಕಿತ್ಸೆಯಿಂದ ಗಂಭೀರ ಪರಿಸ್ಥಿತಿಯ ಸೋಂಕಿತರ ರಕ್ಷಣೆ ಕಷ್ಟ: ಕೇಜ್ರಿವಾಲ್

ದೆಹಲಿ: ಗಂಭೀರ ಪರಿಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರ ಜೀವವನ್ನು ಪ್ಲಾಸ್ಮಾ ಚಿಕಿತ್ಸೆಯಿಂದ ಉಳಿಸುವುದು ತೀರಾ ಕಷ್ಟ ಎಂದು…

ಮಾಸ್ಕ್ ಧರಿಸದ್ದಕ್ಕೆ ಪ್ರಶ್ನೆ – ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಕಿಡಿಗೇಡಿಗಳು!

ಬೆಂಗಳೂರು : ಮಾಸ್ಕ್ ಧರಿಸದವರ ವಿರುದ್ಧ ದೂರು ದಾಖಲಿಸುತ್ತಿದ್ದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಮೂವರನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಪಾಪನಾಶಿ: ಟೋಲ್ ಗೇಟ್ ತೆರುವುಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಇಲ್ಲಿನ ಪಾಪನಾಶಿ ಹತ್ತಿರದಲ್ಲಿರುವ ಟೋಲ್ ಗೇಟ್ ಅವೈಜ್ಞಾನಿಕವಾಗಿ ಸ್ಥಾಪಿಸಲಾಗಿದೆ. ಸಂಪೂರ್ಣ ಎತ್ತರ ಹಾಗೂ ತಿರುವಿನಲ್ಲಿ ಟೋಲ್ ಗೇಟ್ ಇದೆ.