ಬೆಂಗಳೂರು :  ಮಾಸ್ಕ್ ಧರಿಸದವರ ವಿರುದ್ಧ ದೂರು ದಾಖಲಿಸುತ್ತಿದ್ದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಮೂವರನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕಾರ್ಲ್ ಮಾರ್ಕ್ಸ್(25), ಶಿವಕುಮಾರ್(54), ಎಸ್ ಬಾಬು(40) ಬಂಧಿತರು ಎಂದು ತಿಳಿದು ಬಂದಿದೆ. ಬಿಬಿಎಂಪಿ ಮಾರ್ಷಲ್ ಮುನಿರಾಜು ಅವರೊಂದಿಗೆ ಗೋಕುಲದಲ್ಲಿ ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಗೋಕುಲ ಬ್ರಿಡ್ಜ್ ಕೆಳಗಡೆ ಹಳೆ ರೈಲ್ವೆ ಗೇಟ್ ಹತ್ತಿರ ಇರುವ ಬಾಬು ಮೋಟಾರ್ಸ್ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಓರ್ವ ವ್ಯಕ್ತಿ ಗ್ಯಾರೇಜ್ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ. ಈ ಸಂದರ್ಭದಲ್ಲಿ ಮಾಸ್ಕ್ ಧರಿಸದಿರುವುದನ್ನು ಬಿಬಿಎಂಪಿ ಮಾರ್ಷಲ್ ಪ್ರಶ್ನಿಸಿದ್ದಾರೆ. ಆಗ ಗ್ಯಾರೇಜ್ ಬಳಿ ಇದ್ದ ಶಿವಕುಮಾರ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ಯಾರೇಜ್ ನಲ್ಲಿದ್ದ ಕಾರ್ಲ್ ಮಾರ್ಕ್ಸ್ ಎಂಬ ವ್ಯಕ್ತಿ, ನಮಗೇನು ಕೊರೊನಾ ಇದೆಯೇ? ನಾವು ಮಾಸ್ಕ್ ಹಾಕುವುದಿಲ್ಲ. ದಂಡವನ್ನೂ ಕಟ್ಟುವುದಿಲ್ಲ ಎಂದು ಪೊಲೀಸರನ್ನೇ ದಬಾಯಿಸಿದ್ದಾನೆ. ಗ್ಯಾರೇಜ್ ಮಾಲೀಕ ಬಾಬು ಎಂಬ ವ್ಯಕ್ತಿ ಬಂದು ಪೊಲೀಸರ ಕೈ ಹಿಡಿದುಕೊಂಡಿದ್ದಾನೆ. ಆಗ ಕಾರ್ಲ್ ಮಾರ್ಕ್ಸ್ ಪೊಲೀಸರ ಕೆನ್ನೆಗೆ ಬಾರಿಸಿದ್ದಾನೆ ಎಂದು ಪೊಲೀಸ್ ಎಎಸ್ ಐ ಅಶ್ವಥಯ್ಯ ಆರೋಪಿಸಿದ್ದಾರೆ. 

Leave a Reply

Your email address will not be published. Required fields are marked *

You May Also Like

ಸಿಎಂ ರಾಜೀನಾಮೆ ಕೊಡಿಸುವ ಪ್ರಶ್ನೆ ಪಕ್ಷದ ಮುಂದಿಲ್ಲ ಎಂದ ಜೋಶಿ…!

ಹುಬ್ಬಳ್ಳಿ: ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಸಿಎಂ ರಾಜೀನಾಮೆ ಕೊಡಿಸುವ ಯಾವ ಪ್ರಶ್ನೆ ಪಕ್ಷದ ಮುಂದಿಲ್ಲ‌ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ರಾಜ್ಯದಲ್ಲಿ ಇನ್ನೆಷ್ಟು ದಿನ ಲಾಕ್ ಡೌನ್?

ಬಹುತೇಕರು ಲಾಕ್ ಡೌನ್ ಯಾವಾಗ ಮುಕ್ತಾಯವಾಗುತ್ತದೆ? ಅಥವಾ ಮುಂದುವರೆಯುತ್ತಾ? ಒಂದು ವೇಳೆ ಮುಂದುವರೆದರೆ ಏನೆಲ್ಲ ಸಡಿಲಿಕೆ ಇರುತ್ತೆ ಎನ್ನುವ ಬಗ್ಗೆ ಸರ್ಕಾರದ ಆದೇಶಕ್ಕಾಗಿ ಜನಸಾಮಾನ್ಯರು ಎದುರು ನೋಡುತ್ತಿದ್ದರು. ಇದೀಗ ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.

ಸಂಗೀತಾಳಿಗೆ ಬೇಕಿದೆ ಸಹಾಯ: ಪಿಯಸಿಯಲ್ಲಿ ಶೇ.90 ಅಂಕ; ಬೆಂಬಿಡದ ಬಡತನದಿಂದ ಶಿಕ್ಷಣ ನಿಲ್ಲಿಸಲು ಮುಂದಾದ ವಿದ್ಯಾರ್ಥಿನಿ..!

ಪಿಯುಸಿ ಪರೀಕ್ಷೆಯಲ್ಲಿ ಶೇ.90 ಅಂಕ ಪಡೆದ ಪ್ರತಿಭಾವಂತೆಯ ಕಥೆ ಇದು. ಪಿಯುಸಿಯಲ್ಲಿನ ಹೆಚ್ಚು ಅಂಕದ ಉತ್ಸಾಹದಲ್ಲಿದ್ದ ವಿದ್ಯಾರ್ಥಿನಿಗೆ ಕುಟುಂಬದ ಆರ್ಥಿಕ ಸ್ಥಿತಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವ ಹಂತಕ್ಕೆ ತಂದಿದೆ. ಹೀಗಾಗಿ ಬದುಕಿನಲ್ಲಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹತ್ತು ಹಲವು ಕನಸು ಕಟ್ಟಿಕೊಂಡಿದ್ದ ವಿದ್ಯಾರ್ಥಿನಿ ಸಂಗೀತಾಳಿಗೆ ಓದು ಮುಂದುವರೆಸುವುದು ಕಷ್ಟವಾಗಿದೆ.

ಗದಗ ನಗರದಲ್ಲಿ ಕ್ಷೌರದ ಅಂಗಡಿಗಳು ಬಂದ್‌ಗೆ ನಿರ್ಧಾರ

ಸವಿತಾ ಸಮಾಜ ಶ್ರೀ ಗದ್ವಾಲ್ ಜಮಲಮ್ಮ ದೇವಿ ದೇವಸ್ಥಾನ ಟ್ರಸ್ಟ್ ಕಮೀಟಿಯ ವತಿಯಿಂದ ಗದಗ-ಬೆಟಗೇರಿಯಲ್ಲಿ ಮಾ.9 ರಂದು ಮಂಗಳವಾರ ಜರುಗಲಿರುವ ಗದ್ವಾಲ್ ಜಮಲಮ್ಮ ದೇವಿ ದೇವಸ್ಥಾನದ 14ನೇ ವಾರ್ಷಿಕೋತ್ಸವ ಕಾರ್ಯಕ್ರಮದ ನಿಮಿತ್ಯ ಪೂರ್ವಭಾವಿ ಸಭೆಯು ಟ್ರಸ್ಟ್ ಕಮೀಟಿ ಅಧ್ಯಕ್ಷ ಕೃಷ್ಣಾ ಎಚ್. ಹಡಪದ ಅಧ್ಯಕ್ಷತೆಯಲ್ಲಿ ಗದಗ-ಬೆಟಗೇರಿ ಸವಿತಾ ಸಮಾಜದ ಮೂರು ದೈವದ ಅಧ್ಯಕ್ಷರು ಹಾಗೂ ಪ್ರಮುಖ ಮುಖಂಡರು ಮತ್ತು ಸಮಾಜದ ಹಿರಿಯರ ಉಪಸ್ಥಿತಿಯಲ್ಲಿ ಜರುಗಿತು.