ಗದಗ: ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಛಬ್ಬಿ ತಾಂಡ ಹಾಗೂ ಗುಡ್ಡದಪೂರ ಮತ್ತು ರಣತೂರ ಗ್ರಾ.ಪಂ ವ್ಯಾಪ್ತಿಯ ದೇವಿಹಾಳ ತಾಂಡಾಗಳಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ತಾಂಡಾ ರೋಜಗಾರ್ ಮಿತ್ರ ಆಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ತಾಂಡಾಗಳಲ್ಲಿನ ಪ್ರತಿ 250 ರಿಂದ 300 ಮನೆಗಳಿಗೆ ಒಬ್ಬರಂತೆ ತಾಂಡಾ ರೋಜಗಾರ್ ಮಿತ್ರರನ್ನು ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು 10 ನೇ ತರಗತಿ ಉತ್ತೀರ್ಣರಾಗಿರಬೆಕು. ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಮಹಿಳೆಯರು ಲಬ್ಯವಿಲ್ಲದಿದ್ದಲ್ಲಿ ಪುರುಷರನ್ನು ಆಯ್ಕೆಗೆ ಪರಿಗಣಿಸಲಾಗುವುದು. ನರೇಗಾ ಕಾಮಗಾರಿಗಳಲ್ಲಿ ಕೆಲಸ ಮಾಡಿರುವವರಿಗೆ ಆದ್ಯತೆ ನೀಡಲಾಗುವುದು. ವಯೋಮಿತಿ 45 ವರ್ಷ ಮೀರಿರಬಾರದು. ತಾಂಡಾ ನಿವಾಸಿ ಆಗಿರಬೇಕು. ಕನ್ನಡ ಮತ್ತು ಲಂಬಾಣಿ ಭಾಷೆ ತಿಳಿದಿರಬೇಕು. ಅಭ್ಯರ್ಥಿಯು ಪರಿಣಾಮಕಾರಿ ಸಂವಹನ ಕೌಶಲ್ಯ, ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಸ್ಪಂದಿಸುವ ಗುಣಲಕ್ಷಣಗಳನ್ನು ಹೊಂದಿರಬೇಕು.

ತಾಂಡಾ ರೋಜಗಾರ್ ಮಿತ್ರರನ್ನು ಮನರೇಗಾ ಯೋಜನೆಯ ಐ.ಇ.ಸಿ. ಚಟುವಟಿಕೆಯ ಭಾಗವಾಗಿ 6 ತಿಂಗಳ ಅವಧಿಗೆ ಮಾತ್ರ ತೊಡಗಿಸಿಕೊಳ್ಳಲಾಗುತ್ತದೆ.

ತಾಂಡಾ ರೋಜಗಾರ್ ಮಿತ್ರರರಿಗೆ ರಾಜ್ಯ ಅಭಿವೃದ್ಧಿ ನಿಗಮದಿಂದ ಮಾಸಿಕ 3 ಸಾವಿರ ರೂ ಹಾಗೂ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 3000 ರೂ ಪ್ರೋತ್ಸಾಹ ಧನ ನೀಡಲಾಗುತ್ತದೆ. ತಾಂಡಾ ರೋಜಗಾರ್ ಮಿತ್ರರು ಸ್ವಯಂ ಪ್ರೇರಿತ ಕಾರ್ಯಕರ್ತರು ಮಾತ್ರ ಆಗಿದ್ದು ಗ್ರಾಮ ಪಂಚಾಯತಿಯ ಖಾಯಂ ಅಥವಾ ತಾತ್ಕಾಲಿಕ ನೌಕರರಾಗಿರುವುದಿಲ್ಲ. ಅರ್ಹ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿಯಲ್ಲಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸಲು ಮಾ.15 ಕೊನೆಯ ದಿನವಗಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾ.ಪಂ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

You May Also Like

ಗದಗ-ಬೆಟಗೆರಿ ನಗರ ಸಭೆ ಕಾಂಗ್ರೆಸ್ ರಿಟ್ ಅರ್ಜಿ ವಜಾ ಉಷಾ ದಾಸರ ಅಧ್ಯಕ್ಷರಾಗಿ ಮುಂದುವರಿಕೆ

ಉತ್ತರಪ್ರಭ ಗದಗ: ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷವು ನ್ಯಾಯಾಲಯದಲ್ಲಿ…

ದುಷ್ಕರ್ಮಿಗಳ ದುಷ್ಕೃತ್ಯಕ್ಕೆ ಕೈಸೇರಬೇಕಿದ್ದ ಲಕ್ಷಾಂತರ ಆದಾಯದ ಬೆಳೆ ನಾಶ ನಾಶ!

ರೈತರಿಗೆ ಭೂತಾಯಿಯೇ ಎಲ್ಲವೂ. ಆದರೆ ಭೂತಾಯಿಯನ್ನು ನಂಬಿ ಇನ್ನೇನು ಮೆಣಸಿನಕಾಯಿ, ಈರುಳ್ಳಿ ಬೆಳೆ ಕೈಸೇರುತ್ತೆ ಎನ್ನುವ ಲೆಕ್ಕಾಚಾರದಲ್ಲಿದ್ದ ಅನ್ನದಾತನಿಗೆ ಬುಧುವಾರದ ಬೆಳಕು ಆಘಾತದ ಸುದ್ದಿಯನ್ನು ಹೊತ್ತು ತಂದಿತ್ತು.

ರಾಜ್ಯದಲ್ಲಿಂದು 2496 ಪಾಸಿಟಿವ್, ಸಾವಿನ ಸಂಖ್ಯೆಯಲ್ಲೂ ಏರಿಕೆ: ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು 2496 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 44077 ಕ್ಕೆ ಏರಿಕೆಯಾದಂತಾಗಿದೆ.

ಡಿಸಿಎಂ ಸವದಿ ಹೇಳಿಕೆಯಿಂಮಹಾರಾಷ್ಟ್ರದಲ್ಲಿ ಮೂಡಿದ ಸಂಚಲನ

ನಮಗೆ ಮುಂಬೈ ಮೇಲೆ ಹಕ್ಕು ಇದೆ. ಮುಂಬೈಯನ್ನು ರಾಜ್ಯಕ್ಕೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಡಲಿದ್ದು, ಅಲ್ಲಿವರೆಗೂ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸುವು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.