ಗದಗ: ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಛಬ್ಬಿ ತಾಂಡ ಹಾಗೂ ಗುಡ್ಡದಪೂರ ಮತ್ತು ರಣತೂರ ಗ್ರಾ.ಪಂ ವ್ಯಾಪ್ತಿಯ ದೇವಿಹಾಳ ತಾಂಡಾಗಳಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ತಾಂಡಾ ರೋಜಗಾರ್ ಮಿತ್ರ ಆಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ತಾಂಡಾಗಳಲ್ಲಿನ ಪ್ರತಿ 250 ರಿಂದ 300 ಮನೆಗಳಿಗೆ ಒಬ್ಬರಂತೆ ತಾಂಡಾ ರೋಜಗಾರ್ ಮಿತ್ರರನ್ನು ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು 10 ನೇ ತರಗತಿ ಉತ್ತೀರ್ಣರಾಗಿರಬೆಕು. ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಮಹಿಳೆಯರು ಲಬ್ಯವಿಲ್ಲದಿದ್ದಲ್ಲಿ ಪುರುಷರನ್ನು ಆಯ್ಕೆಗೆ ಪರಿಗಣಿಸಲಾಗುವುದು. ನರೇಗಾ ಕಾಮಗಾರಿಗಳಲ್ಲಿ ಕೆಲಸ ಮಾಡಿರುವವರಿಗೆ ಆದ್ಯತೆ ನೀಡಲಾಗುವುದು. ವಯೋಮಿತಿ 45 ವರ್ಷ ಮೀರಿರಬಾರದು. ತಾಂಡಾ ನಿವಾಸಿ ಆಗಿರಬೇಕು. ಕನ್ನಡ ಮತ್ತು ಲಂಬಾಣಿ ಭಾಷೆ ತಿಳಿದಿರಬೇಕು. ಅಭ್ಯರ್ಥಿಯು ಪರಿಣಾಮಕಾರಿ ಸಂವಹನ ಕೌಶಲ್ಯ, ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಸ್ಪಂದಿಸುವ ಗುಣಲಕ್ಷಣಗಳನ್ನು ಹೊಂದಿರಬೇಕು.

ತಾಂಡಾ ರೋಜಗಾರ್ ಮಿತ್ರರನ್ನು ಮನರೇಗಾ ಯೋಜನೆಯ ಐ.ಇ.ಸಿ. ಚಟುವಟಿಕೆಯ ಭಾಗವಾಗಿ 6 ತಿಂಗಳ ಅವಧಿಗೆ ಮಾತ್ರ ತೊಡಗಿಸಿಕೊಳ್ಳಲಾಗುತ್ತದೆ.

ತಾಂಡಾ ರೋಜಗಾರ್ ಮಿತ್ರರರಿಗೆ ರಾಜ್ಯ ಅಭಿವೃದ್ಧಿ ನಿಗಮದಿಂದ ಮಾಸಿಕ 3 ಸಾವಿರ ರೂ ಹಾಗೂ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 3000 ರೂ ಪ್ರೋತ್ಸಾಹ ಧನ ನೀಡಲಾಗುತ್ತದೆ. ತಾಂಡಾ ರೋಜಗಾರ್ ಮಿತ್ರರು ಸ್ವಯಂ ಪ್ರೇರಿತ ಕಾರ್ಯಕರ್ತರು ಮಾತ್ರ ಆಗಿದ್ದು ಗ್ರಾಮ ಪಂಚಾಯತಿಯ ಖಾಯಂ ಅಥವಾ ತಾತ್ಕಾಲಿಕ ನೌಕರರಾಗಿರುವುದಿಲ್ಲ. ಅರ್ಹ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿಯಲ್ಲಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸಲು ಮಾ.15 ಕೊನೆಯ ದಿನವಗಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾ.ಪಂ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

You May Also Like

ಹಾವೇರಿ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಮಾರಾಟವಾದ ಸಾರಿ ಎಷ್ಟು ಗೊತ್ತಾ?

ಒಂದೇ ದಿನ ಹಾವೇರಿಯಲ್ಲಿ ಕೊಟ್ಯಾಂತರ ಮದ್ಯ ಬಿಕರಿಯಾಗಿದ್ದು ಇದರಿಂದ ನಿನ್ನೆ ಒಂದೇ ದಿನಕ್ಕೆ ಅಬಕಾರಿ ಇಲಾಖೆಗೆ ಕೋಟ್ಯಾಂತರ ಕಮಾಯಿಯಾಗಿದೆ.

ದಿ. ಮಲ್ಲನಗೌಡ ಫ ಪಾಟೀಲ ಅವರ ದ್ವೀತಿಯ ಪುಣ್ಯಸ್ಮರಣೆಯಲ್ಲಿ ಪೂಜ್ಯ ಕಲ್ಲಯ್ಯಜ್ಜನವರ ತುಲಾಭಾರ

ಪುಣ್ಯಾಶ್ರಮದ ಗುರುಬಂಧುಗಳಾದ ಸಾಸರವಾಡ ಗ್ರಾಮದ ಮಲ್ಲನಗೌಡ ಪಾಟೀಲರು ಉತ್ತಮ ಸಂಗೀತ ಕಲಾವಿದರಾಗಿದ್ದರು. ಜೊತೆಗೆ ಸಾತ್ವಿಕ ಗುಣವುಳ್ಳವರಾಗಿದ್ದರು. ಅವರು ಸರಳತೆ ಹಾಗೂ ಆದರ್ಶಪ್ರಾಯ ವ್ಯಕ್ತಿತ್ವ ಉಳ್ಳವರಾಗಿದ್ದರು. ಅವರ ಪುಣ್ಯಸ್ಮರಣೆಯ ನಿಮಿತ್ಯವಾಗಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ಲಾಘನೀಯ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧೀಪತಿ ಪೂಜ್ಯ ಕಲ್ಲಯ್ಯಜ್ಜನವರು ಹೇಳಿದರು.

ಸಿಎಂ ಸಭೆಯ ಸಂಪೂರ್ಣ ಮಾಹಿತಿ: ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕಕ್ಕೆ ಸೂಚನೆ

ಸಿಎಂ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು. ಇನ್ನು ಈ ಸಭೆಯಲ್ಲಿ ನಡೆದ ಮಹತ್ವದ ಚರ್ಚಿತ ವಿಷಯಗಳ ಮುಖ್ಯಾಂಶೆಗಳು ಇಲ್ಲಿವೆ ನೋಡಿ.

ಚಿರಂಜೀವಿ ಸರ್ಜಾ ನೆನೆದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ ಮೇಘನಾ..!

ಬೆಂಗಳೂರು: ಇತ್ತಿಚೆಗಷ್ಟೆ ನಿಧನ ಹೊಂದಿದ ನಟ ಚಿರಂಜೀವಿ ಸರ್ಜಾ ಬಹುಬೇಗ ಮರೆಯುವಂತಹ ನಟನಲ್ಲ. ಅದರಲ್ಲೂ 10…