ನಿಂಗಪ್ಪ ಮಡಿವಾಳರ

ನರೇಗಲ್ಲ್: ರೈತರಿಗೆ ಭೂತಾಯಿಯೇ ಎಲ್ಲವೂ. ಆದರೆ ಭೂತಾಯಿಯನ್ನು ನಂಬಿ ಇನ್ನೇನು ಮೆಣಸಿನಕಾಯಿ, ಈರುಳ್ಳಿ ಬೆಳೆ ಕೈಸೇರುತ್ತೆ ಎನ್ನುವ ಲೆಕ್ಕಾಚಾರದಲ್ಲಿದ್ದ ಅನ್ನದಾತನಿಗೆ ಬುಧುವಾರದ ಬೆಳಕು ಆಘಾತದ ಸುದ್ದಿಯನ್ನು ಹೊತ್ತು ತಂದಿತ್ತು.

ನರೇಗಲ್ಲ ಸಮೀಪದ ಹಾಲಕೆರೆ ಗ್ರಾಮದಲ್ಲಿ ಬಸವರಾಜ ಅಂಗಡಿ ಅವರು 3 ಎಕರೆ ಜಮೀನಿನಲ್ಲಿ ಬೆಳೆದ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಯನ್ನು ದುಷ್ಕರ್ಮಿಗಳು ನಾಶಪಡಿಸಿದ್ದಾರೆ. ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಯನ್ನು ಬೇರು ಸಮೇತ ಟ್ರ್ಯಾಕ್ಟರ್ ಮೂಲಕ ನಾಶ ಪಡಿಸಿದ್ದಾರೆ. 3 ಎಕರೆ ಪ್ರದೇಶದಲ್ಲಿ ಈರುಳ್ಳಿ ಹಾಗೂ ಮೆಣಸಿನಕಾಯಿ ಉತ್ತಮ ಮಳೆಯಿಂದ ತುಂಬಾ ಚೆನ್ನಾಗಿ ಬೆಳೆದಿತ್ತು. 3 ಎಕರೆ ಈರುಳ್ಳಿಗೆ ಬೀಜ ಗೊಬ್ಬರ ಔಷಧ ಆಳು ಅಂತೆಲ್ಲ ಅಂದಾಜು ‌1,50,000 ಲಕ್ಷ ಹಣವನ್ನು ರೈತ ಖರ್ಚು ಮಾಡಿದ್ದಾರೆ.

ಪಾಪದ ಕೆಲಸಾ ಬೀಜ ಗೊಬ್ಬರ ಔಷಧ ಆಳು ಸೇರಿ ಸುಮಾರು.1,50,000 ಲಕ್ಷ ಖರ್ಚಾಗಿದೆ. ಬೆಳೆ ಉತ್ತಮವಾಗಿ ಬಂದಿದ್ದು.3,50,000 ಆದಾಯ ನಿರೀಕ್ಷೆಯಲ್ಲಿದ್ದೆ. ಆದರೆ ಯಾರೂ ಮಾಡಿದ ಪಾಪದ ಕೆಲಸಕ್ಕೆ ಬೆಳೆ ನಾಶವಾಗಿದೆ. ಈ ದುಷ್ಕೃತ್ಯವೆಸಗಿದವರು ಯಾರು ಅಂತ ಗೊತ್ತಾಗಿಲ್ಲ.  ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. -ಬಸವರಾಜ ಅಂಗಡಿ, ಬೆಳೆ ಹಾನಿಗೊಳಗಾದ ರೈತ

ಆದರೆ ಬೆಳೆದು ಇನ್ನೇನು ಈರುಳ್ಳಿ ಕೈಸೇರಿದ್ದರೆ 150 ಪಿಸಿ ಈರುಳ್ಳಿ ಸಿಗುತ್ತಿತ್ತು. ಈಗಿನ ಮಾರುಕಟ್ಟೆ ಧಾರಣೆಯ ಪ್ರಕಾರ 3 ಲಕ್ಷ ಆದಾಯ ಹಾಗೂ 2 ಕ್ವಿಂಟಲ್ ಮೆಣಸಿನಕಾಯಿಗೆ 50,000 ಆದಾಯ ಸಿಗುತ್ತಿತ್ತು. ಈಗಾಗಲೇ ಈರುಳ್ಳಿಯನ್ನು ಕಿತ್ತು ಹಾಕಲಾಗಿತ್ತು. ಇನ್ನು ವಾರದೊಳಗೆ ಮಾರುಕಟ್ಟೆಗೆ ಕಳಿಸುತ್ತಿದ್ದರು. ಆದರೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಟ್ರ್ಯಾಟಕ್ಟರ್ ನಿಂದ ಮೆಣಸಿನಕಾಯಿ ಬೆಳೆಯನ್ನು ಬೇರು ಸಮೇತ ನಾಶಪಡಿಸುವ ಜೊತೆಗೆ ಕಿತ್ತು ಸಾಲು ಹಾಕಿದ ಈರುಳ್ಳಿ ಬೆಳೆಯ ಮೇಲೆ ಟ್ರ್ಯಾಕ್ಟರ್ ಹಾಯಿಸಿ ಸಂಪೂರ್ಣ ನಾಶಪಡಿಸಿದ್ದಾರೆ. ಅಂದಾಜು  3,50,000 ಲಕ್ಷ ಆದಾಯ ಬರುವ ನಿರೀಕ್ಷೆಯಲ್ಲಿದ್ದ ರೈತ ಬಸುರಾಜ್ ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಚೆನ್ನಾಗಿ ಬಂದಿತ್ತು ಈ ವರ್ಷ ಸಂಪೂರ್ಣ ಮಳೆ ಆಗಿದ್ದರಿಂದ ಉತ್ತಮ ಬೆಳೆಯ ನಿರೀಕ್ಷೆ ಮಾಡಿದ್ದೆವು. ನಿರೀಕ್ಷೆ ಪ್ರಕಾರ ಬೆಳೆ ಚೆನ್ನಾಗಿ ಬಂದಿತ್ತು. ಆದರೆ ಯಾವ ದ್ವೇಷಕ್ಕೆ ಬೆಳೆದ ಬೆಳೆ ಹಾನಿಯಾಗಿದೆ ಎಂಬುದು ಮಾತ್ರ ಗೊತ್ತಾಗುತ್ತಿಲ್ಲ. ತಹ ಬೆಳವಣಿಗೆ ಸರಿಯಾದದ್ದಲ್ಲ. – ಮುತ್ತಣ್ಣ ರೊಟ್ಟಿ, ಸ್ಥಳೀಯರು.

ಈ ಕುರಿತು ನರೇಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬೆಳೆಯಲ್ಲಾ ಸಂಪೂರ್ಣ ನಾಶವಾಗಿದೆ. ವರ್ಷದ ತುತ್ತಿಗೆ ಬೆಳೆದ ಬೆಳೆಯನ್ನೆ ನಂಬಿಕೊಂಡಿದ್ದ ರೈತನಿಗೆ ಇದು ಬಹುದೊಡ್ಡ ಆಘಾತವಾಗಿದೆ. ದ್ವೇಷ ನೇ ಇರಲಿ, ಭಿನ್ನಾಭಿಪ್ರಾಯ ಯಾವುದೇ ಇರಲಿ. ಆದರೆ ಬೆಳೆಯನ್ನು ನಾಶ ಪಡಿಸಿದ್ದು ಎಷ್ಟು ಸರಿ? ಎನ್ನುವ ಪ್ರಶ್ನೆ ಸ್ಥಳೀಯರದ್ದು.

Leave a Reply

Your email address will not be published. Required fields are marked *

You May Also Like

ಅಬ್ಯರ್ಥಿ ಗೆದ್ದಿದ್ದಾರೆ ಆದರೆ ಗೆಲುವು ಸಂಭ್ರಮಿಸಲು ಅವರೆ ಇಲ್ಲ

ಬೆಳಗಾವಿ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಇನ್ನೇನು ಫಲಿತಾಂಶ ಹೊರಬರುವುದು ಬಾಕಿ ಇತ್ತು. ಆದರೆ ಫಲಿತಾಂಶ ನಾಯಿತು ಎಂದು ನೋಡಲು, ಕೇಳಲು ನಿಂತ ವ್ಯಕ್ತಿಯೇ ಇಲ್ಲ.

ಚೆಕ್ ಡ್ಯಾಂ ಕಾಮಗಾರಿ ನಿಲ್ಲಿಸುವಂತೆ ಹೈಕೋರ್ಟ್ ತಡೆ

ವರದಿ: ವಿಠ್ಠಲ ಕೆಳೂತ್ ಮಸ್ಕಿ: ತಾಲೂಕಿನ ದಿಗ್ಗನಾಯಕನಭಾವಿ ಹತ್ತಿರದ ಹಿರೇ ಹಳ್ಳದಲ್ಲಿ ನಿರ್ಮಿಸುತ್ತಿರುವ ಚೆಕ್ ಡ್ಯಾಂ…

ಗಜೇಂದ್ರಗಡ: ಹಣ ದೋಚಿ ಪರಾರಿಯಾದವರ ಬಂಧನ

ಗಜೇಂದ್ರಗಡ ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದವರನ್ನು ಯಾಮಾರಿಸಿ ಲಕ್ಷಾಂತರ ಹಣ ದೋಚಿ ಪರಾರಿಯಾಗಿದ್ದವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗದಗ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯ ಅಂಧಾ ದರ್ಬಾರ್…!

ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರೆ ಮರಳು ಗಣಿಗಾರಿಕೆಗೆ ಸಿಲುಕಿ ನರಳುವಂತಾಗಿದೆ. ನಿತ್ಯ ಲೆಕ್ಕವಿಲ್ಲದಷ್ಟು ತುಂಗಭದ್ರೆಯ ಒಡಲು ಬಗೆಯುತ್ತಿದ್ದರೂ ತುಂಗವ್ವಾ ಮರಳು ಗಣಿಗಳ್ಳರ ದಾಯಕ್ಕೆ ಅಸಹಾಯಕಳಾಗಿ ಮೈಯೊಡ್ಡಿದ್ದಾಳೆ.