ಗದಗ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸಹಯೋಗದಲ್ಲಿ ಮಾ.11 ರಿಂದ 13ರ ವರೆಗೆ ಸಂಜೆ 4 ರಿಂದ ರಾತ್ರಿ 10ರ ವರೆಗೆ ನಗರದ ಮುನ್ಸಿಪಲ್ ಪದವಿ ಪೂರ್ವ ಕಾಲೇಜ ಮೈದಾನದಲ್ಲಿ ದಿನಗಳಲ್ಲಿ ವಿಶ್ವದಲ್ಲಿ ಅವತರಿಸಿದ ವಿಶ್ವೇಶ್ವರನ ದರ್ಶನ, ಸಹಸ್ರಲಿಂಗ ದರ್ಶನ ಮತ್ತು ದ್ವಾದಶ ಜ್ಯೋತಿರ್ಲಿಂಗ ದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಕುಮಾರಿ ಬಿ.ಕೆ.ಜಯಂತಿಅಕ್ಕ ಹೇಳಿದರು.

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಅಂದು ಸಂಜೆ 6ಕ್ಕೆ ಮಹಾಶಿವರಾತ್ರಿ ಮಹೋತ್ಸವದ ಉದ್ಘಾಟನೆ ನಡೆಯಲಿದ್ದು, ಜಿಲ್ಲೆಯ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ನೆರವೇರಿಸಲಿದ್ದಾರೆ. ಸಹಸ್ರಲಿಂಗ ದರ್ಶನವನ್ನು ಜಿ.ಪಂ ಸಿಇಒ ಭರತ್‌ ಎಸ್, ಜಿಲ್ಲಾ ಪೊಲೀಸ್‌ ಅಧೀಕ್ಷಕ ಯತೀಶ.ಎನ್ ಉದ್ಘಾಟಿಸಲಿದ್ದಾರೆ.

ತಹಶೀಲ್ದಾರರು ಶ್ರೀನಿವಾಸಮೂರ್ತಿ ಕುಲಕರ್ಣಿ, ನಗರ ಸಭೆಯ ಪೌರಾಯುಕ್ತ ರಮೇಶ ಪಾಂಡುರಂಗ ಜಾಧವ, ಪ್ರಾಚಾರ್ಯ ಎಸ್.ಎಸ್.ಕುಲಕರ್ಣಿ ಪಾಲ್ಗೊಳ್ಳಲಿದ್ದಾರೆ.

ಅಭಿನವ ನೃತ್ಯ ಅಕಾಡೆಮಿಯ ಯಶೋಧಾರಾವ್‌ ಅವರಿಂದ ಕತಕ್ ನೃತ್ಯ ಹಾಗೂ ಕಲಾವಿದ ಮಕ್ಕಳಿಂದ ಜಾನಪದ ನೃತ್ಯ ಮತ್ತು ಮಹಾ ಶಿವರಾತ್ರಿ ಪ್ರಯುಕ್ತ ಗುರುವಾರ ಬೆಳಗ್ಗೆ 21 ಜ್ಯೋತಿರ್ಲಿಂಗಗಳ ಮೆರವಣಿಗೆಯ ಹಮ್ಮಿಕೊಳ್ಳಲಾಗಿದೆ. ಸಹೋದರ-ಸೋದರಿಯರು ಸದ್ಭಾವನಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಕನ್ನಡ ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಹಿರೇಮಠ ಸದ್ಭಾವನಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಮಾ.12 ರಂದು ಸಂಜೆ 6ಕ್ಕೆ ಮಹಿಳಾ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸವಿತಾ ಶಿಗ್ಲಿ, ಪಬ್ಲಿಕ್ ಪ್ರಾಸಿಕ್ಯೂಟರ್,ರೋಟರಿ ಕ್ಲಬ್‌ ಅಧ್ಯಕ್ಷೆ ಡಾ.ರಾಧಿಕಾ ಕುಲಕರ್ಣಿ, ಇನ್ನರ್‌ ವ್ಹೀಲ್‌ ಕ್ಲಬ್ ಹಾಗೂ ಅಕ್ಕಮಹಾದೇವಿ ಯೋಗ ವಿಜ್ಞಾನಕೇಂದ್ರ ಭಾಗ-1 ಅಧ್ಯಕ್ಷೆ ಸುಮಾ.ಎಸ್.ಪಾಟೀಲ, ಅಕ್ಕನ ಬಳಗದ ಅಧ್ಯಕ್ಷೆ ಸುಜಾತಾ ಮಾನ್ವಿ, ಸಮಾಜ ಕಾರ್ಯಕರ್ತೆ ಸುಮಿತ್ರಾ ಪಾಟೀಲ, ಅಕ್ಕಮಹಾದೇವಿ ಯೋಗ ವಿಜ್ಞಾನಕೇಂದ್ರ ಅನ್ನಪೂರ್ಣ.ಎಸ್.ವರವಿ, ಜ್ಯೋತಿಶ್ರೀ, ಗಾಯತ್ರೀ ರಂಗಣ್ಣವರ್ ಮುಂತಾದವರು ಉಪಸ್ಥಿತರಿರುವರು.

ಕಾರ್ಯಕ್ರಮದ ಪ್ರಾರಂಭದಲ್ಲಿ 6 ರಿಂದ 6.30 ರವರೆಗೆ ಜ್ಯೋತಿಶ್ರೀ ತಂಡದವರಿಂದ ಶಿವನ ಮಹಿಮಾ ನೃತ್ಯ ಪ್ರದರ್ಶನವಾಗಲಿದೆ. ಮಾ.13 ರಂದುಸಂಜೆ 6ಕ್ಕೆ ರಾಷ್ಟಿಯ ಭಾವೈಕ್ಯತಾ ಮಹೋತ್ಸವಕ್ಕೆ ಶಾಸಕ ಎಚ್.ಕೆ.ಪಾಟೀಲ ಆಗಮಿಸಲಿದ್ದಾರೆ.

ಸರ್ವಧರ್ಮದ ಪ್ರತಿನಿಧಿಗಳಾಗಿ ಧಾರವಾಡದ ವಿದ್ವಾನ್ ವಾಚಸ್ಪತಿ ಶಾಸ್ತಿಗಳು, ಹುಲಕೋಟಿ ಗ್ರಾ.ಪಂ ಮಾಜಿ ಅಧ್ಯಕ್ಷ ಹಸೀಮ್‌ ಸಾಬ ತಹಸೀಲ್ದಾರ್, ಪಿ ಫೆಡ್ಲಿಸ್ ಸೇರಿದಂತೆ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ನಟವರಿ ಕಲಾ ತಂಡದವರಿಂದ ಭಾವೈಕ್ಯತಾ ಸಂದೇಶ ನೀಡುವಜ್ಞಾನ ನೃತ್ಯ ಜರುಗಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಬ್ರಹ್ಮಕುಮಾರಿ ರೇಖಾ, ಸಾವಿತ್ರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ರಾಹುಲ್ ಗಾಂಧಿ ಬಟಾಟೆಯಲ್ಲಿ ಚಿನ್ನ ತೆಗೆದಂತೆ ಸಿದ್ದರಾಮಯ್ಯ ಹೂವಿನಲ್ಲಿ ಚಿನ್ನ ತೆಗೆಯುತ್ತಿದ್ದಾರೆ : ಕಟೀಲ್

ರಾಹುಲ್ ಗಾಂಧಿ ಬಟಾಟೆಯಲ್ಲಿ ಚಿನ್ನ ತೆಗೆದ ರೀತಿಯಲ್ಲಿ, ಸಿದ್ದರಾಮಯ್ಯ ಹೂವಿನಲ್ಲಿ ಚಿನ್ನ ತೆಗೆಯಲು ಹೊರಟಿದ್ದಾರೆ. ಸಂಕಷ್ಟದ ಈ ಸಂದರ್ಭದಲ್ಲಿ ರಾಜಕೀಯ ಮಾಡುವ ಹೇಯ ಕೃತ್ಯ ಸಿದ್ದರಾಮಯ್ಯ ನಡೆಸಿದ್ದಾರೆ.

ಗೋರಸೇನಾ ರಾಜ್ಯಾಧ್ಯಕ್ಷ ರವಿಕಾಂತ ಒತ್ತಾಯ: ಲಂಬಾಣಿ ಸಮಾಜದ ಅಪ್ರಾಪ್ತ ಬಾಲಕಿ ಹತ್ಯೆಗೈದ ಆರೋಪಿಗಳನ್ನು ಗಲ್ಲಿಗೇರಿಸಲು ಆಗ್ರಹ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುರಗಲವಾಡಿ ಗ್ರಾಮದಲ್ಲಿ ಗುಳೆಹೋದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಘಟನೆ ಅತ್ಯಂತ ಖಂಡನಾರ್ಹ. ಲಂಬಾಣಿ ಸಮಾಜದವರು ಬಹಳಷ್ಟು ಸ್ವಾಭಿಮಾನಿಗಳು. ಆದರೆ ತುತ್ತಿನ ಚೀಲ ತುಂಬಿಕೊಳ್ಳಲು ಗುಳೆಹೋಗುವುದು ನಮಗೆ ಅನಿವಾರ್ಯವಾಗಿದೆ. ಆದರೆ ಗುಳೆಹೋದಂತಹ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ದುಷ್ಟರನ್ನು ಗಲ್ಲಿಗೇರಿಸಬೇಕು ಎಂದು ಗೋರಸೇನಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಆಗ್ರಹಿಸಿದರು.

ಪೋಲಿಸ್ ಸಬ್‌ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸ್ಥಳೀಯ ಮತ್ತು ಇನ್ನೂಳಿದ ವೃಂದಗಳ ಪೊಲೀಸ್ ಸಬ್‌ಇನ್ಸ್ಪೆಕ್ಟರ್ (ಸಿವಿಲ್) (ಪುರುಷ, ಮಹಿಳೆ ಮತ್ತು ಸೇವೆಯಲ್ಲಿರುವವರು) ಒಟ್ಟು 545 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.