ಗಜೇಂದ್ರಗಡ: ತಾಲ್ಲೂಕು ಕುಂಬಾರ ಸಂಘ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದ ಕುಂಬಾರ ಓಣಿಯಲ್ಲಿರುವ ಕುಂಬಾರ ಸಮುದಾಯ ಭವನದಲ್ಲಿ ತ್ರಿಪದಿ ಕವಿ ಸರ್ವಜ್ಞನ 501ನೇ ಜಯಂತಿ ಕಾರ್ಯಕ್ರಮ ಫೆ.28 ರಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.

ಯಲಬುರ್ಗಾ ಶ್ರೀಧರ ಮುರಡಿ ಮಠದ ಬಸವಲಿಂಗೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದು, ಶಾಸಕ ಕಳಕಪ್ಪ ಬಂಡಿ ಉದ್ಘಾಟಿಸಲಿದ್ದಾರೆ. ಗಜೇಂದ್ರಗಡ ತಾಲ್ಲೂಕು ಕುಂಬಾರ ಸಂಘದ ಅಧ್ಯಕ್ಷ ಬಸಪ್ಪ ಮಲ್ಲೇಶಪ್ಪ ಕುಂಬಾರ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಮಲ್ಲಿಕಾರ್ಜುನ ಕುಂಬಾರ ಉಪನ್ಯಾಸ ನೀಡುವರು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಜಿ.ಎಸ್.ಪಾಟೀಲ, ಬಿ.ಎಂ.ಸಜ್ಜನರ, ಪುರಸಭೆ ಅಧ್ಯಕ್ಷ ವೀರಣ್ಣ ಪಟ್ಟಣಶೆಟ್ಟಿ, ಸದಸ್ಯೆ ಲೀಲಾವತಿ ಸವಣೂರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ರೈತರಿಗೆ ಖಾರವಾಯ್ತು ಮೆಣಸಿನಕಾಯಿ: ಕಂಗಾಲದ ಬೆಳೆಗಾರರು

ಜಿಲ್ಲೆಯಲ್ಲಿ ಮುಖ್ಯ ಬೆಳೆಯೇ ಮೆಣಸಿನ ಕಾಯಿ ಬೆಳೆ. ಆದರೆ ಮೆಣಸಿನಕಾಯಿ ಬೆಳೆದ ರೈತರಿಗೆ ಈ ಭಾರಿ ಮೆಣಸಿನಕಾಯಿ ಖಾರವಾಗಿ ಮಾರ್ಪಟ್ಟಿದೆ. ಈ ಕಾರಣದಿಂದ ಬೆಲೆ ಇಲ್ಲದ ಕಾರಣ ಬೆಳೆದ ಬೆಳೆಯನ್ನು ಅನ್ನದಾತ ನಾಶಪಡಿಸುತ್ತಿದ್ದಾನೆ.

ಗ್ರಾಮ ಪಂಚಾಯತಿ ಚುನಾವಣೆ: ಅಭಿಪ್ರಾಯ ಸಲ್ಲಿಕೆಗೆ ಚುನಾವಣಾ ಆಯೋಗ ನಿರ್ದೇಶನ

ಪಂಚಾಯತಿ ಅವಧಿ ಮುಕ್ತಾಯಗೊಳ್ಳುವ ಮುಂಚಿತವಾಗಿ ಹೊಸದಾಗಿ ಪಂಚಾಯತಿಗಳನ್ನು ರಚಿಸಲು ಚುನಾವಣೆ ನಡೆಸಬೇಕಾಗಿರುತ್ತದೆ. ಕರ್ನಾಟಕ ಗ್ರಾಮ್ ಸ್ವರಾಜ್ ಅಧಿನಿಯಮದ ಪ್ರಕಾರ ರಾಜ್ಯ ಚುನಾವಣಾ ಆಯೋಗವು ಪಂಚಾಯತಿಯ ಅವಧಿಯು ಪೂರ್ಣಗೊಳ್ಳುವುದಕ್ಕೆ ಮೊದಲು ಚುನಾವಣಾ ಪ್ರಕ್ರಿಯೇಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ.

ಜೂನ್ 30 ರವರೆಗೆ ಲಾಕ್ಡೌನ್ ಕೇಂದ್ರ ಸರ್ಕಾರ ಹೇಳಿದ್ದೇನು? : ಸಚಿವ ಶೆಟ್ಟರ್ ಸ್ಪಷ್ಟನೆ

ಹುಬ್ಬಳ್ಳಿ: ರಾಜ್ಯದಲ್ಲಿ ಜೂನ್ 7 ರವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಅಲ್ಲಿಯವರೆಗೆ ಲಾಕ್ ಡೌನ್ ಬಗ್ಗೆ ವಿಚಾರ ಬೇಡಾ. ಅಲ್ಲದೇ ಕೇಂದ್ರ ಸರ್ಕಾರ ಜೂನ್ 30 ರವರೆಗೆ ಲಾಕ್ ಡೌನ್ ಘೋಷಣೆ ಮಾಡಲಾಗುವುದು ಎಂದು ಹೇಳಿಲ್ಲಾ.

ಶರಣೇಗೌಡ ಬಯ್ಯಾಪುರ ಗೆಲುವಿಗೆ ಮಸ್ಕಿಯಲ್ಲಿ ಸಂಭ್ರಮ

 ಉತ್ತರಪ್ರಭ ವರದಿ:ವಿಠ್ಠಲ ಕೆಳೊತ ಮಸ್ಕಿ: ರಾಯಚೂರು ಕೊಪ್ಪಳ ವಿಧಾನ ಪರಿಷತ್ ಚುನಾವಣೆಯಲ್ಲಿ ಶರಣೇಗೌಡ ಪಾಟೀಲ್ ಬಯ್ಯಾಪೂರು…