20ನೇ ಶತಮಾನದ ದೀರ್ಘಕಾಲಿಕ ವೈಜ್ಞಾನಿಕ ತಪಸ್ಸಿನಿಂದ ಹೊರಬಂದ ಅಮೂಲ್ಯ ಫಲಗಳು ರಾಮನ್ ಪರಿಣಾಮ ಹಾಗೂ ಸಾಪೇಕ್ಷವಾದ ರಾಮನ್ ಪರಿಣಾಮ ವಿಶ್ವದ ರಹಸ್ಯವನ್ನು ಬೇಧಿಸಿ ಮುಂದಿನ ಎಲ್ಲಾ ವೈಜ್ಞಾನಿಕ ಪ್ರಗತಿಗೆ ಸರಿಯಾದ ದಿಕ್ಕು ತೋರಿಸಿದ ಭೌತವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಹಾಗೆಯೇ ನಿಸರ್ಗದ ರಹಸ್ಯವನ್ನು ಬಯಲು ಮಾಡಿದ ನಮ್ಮ ದೇಶದ ಹಿರಿಮೆ-ಗರಿಮೆಗಳನ್ನು ಜಗತ್ತಿನ ಉತ್ತುಂಗ ಶಿಬಿರದಲ್ಲಿ ನಿಲ್ಲಿಸಿದ ನಮ್ಮ ಕರ್ನಾಟಕದವರೇ ಆದ ಭೌತವಿಜ್ಞಾನಿ ಸರ್ ಸಿ.ವಿ.ರಾಮನ್ ನಿಸ್ವಾರ್ಥ ಸೇವೆಯಲ್ಲಿ ಸುಖ ಕಂಡ ವಿಜ್ಞಾನ ಶಕ್ತಿಯನ್ನು ದೈವಶಕ್ತಿಯನ್ನಾಗಿ ಮಾಡಿ ಜೀವನ ಸವೆಸಿದ ಅಪ್ಪಟ ವಾಸ್ತವವಾದಿ ಡಾ.ಎಚ್ ನರಸಿಂಹಯ್ಯ ಹಾಗೂ ವಿಜ್ಞಾನದ ಮೂಲಕ ದೇಶ ಸೇವೆಯನ್ನು ಮಾಡುತ್ತಿರುವ ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬಿತ್ತುತ್ತಿರುವ ಕ್ರಿಯಾಶೀಲರಾದ ಭಾರತರತ್ನ ಚಿಂತಾಮಣಿ ಪ್ರೊಫೆಸರ್ ಸಿಎನ್‌ಆರ್ ರಾವ್ ಇವರೆಲ್ಲರನ್ನೂ ಫೆಬ್ರುವರಿ 28 ರಾಷ್ಟ್ರೀಯ ವಿಜ್ಞಾನ ದಿನದಂದು ನೆನಪಿಸಿಕೊಳ್ಳಲೇಬೇಕು.

ಆಲ್ಬರ್ಟ್ ಐನ್ಸ್ಟೀನ್ 20ನೇ ಶತಮಾನದ ಶ್ರೇಷ್ಠ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಅವರ ವಿಚಾರಧಾರೆ ಹಾಗೂ ಶ್ರೇಷ್ಠ ಮಟ್ಟದ ಸಂಶೋಧನೆ ಸಾಪೇಕ್ಷತಾವಾದ ಸಿದ್ದಾಂತ ಬಂದು ಇಂದಿಗೆ 116 ವರ್ಷಗಳಾದವು. ಅವರ ಅದ್ಭುತ ಸಂಶೋಧನೆಗಳ ನೆನಪಿಗಾಗಿ ಯುನೆಸ್ಕೋ 2005 ವರ್ಷ ವೈಜ್ಞಾನಿಕ ಜಾಗತಿಕ ವರ್ಷವೆಂದು ಐನ್ಸ್ಟೀನ್ 14ನೇ ವಯಸ್ಸಿನಲ್ಲಿ ಕೇವಲ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿದ್ದನು ಅತ್ಯಂತ ಜಟಿಲವಾದ ವೈಜ್ಞಾನಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದ ವ್ಮೋಮ ಮತ್ತು ಕಾಲುಗಳನ್ನು ಕುರಿತು ಇಡಿ ಕಲ್ಪನೆಯನ್ನು ಬುಡಮೇಲು ಮಾಡಿ ಅವರನ್ನು ಪುನಃ ರೂಪಿಸಿದ ಮಾನವನ ಸದ್ಗುಣಗಳು ಮಾನವೀಯತೆ, ಜಾಣತನ ಬುದ್ಧಿಮತ್ತೆ ಹೀಗೆ ಯಾವುದೇ ಯೋಗ್ಯತೆಯನ್ನು ತೆಗೆದುಕೊಂಡರು ಇವರ ಹೆಸರು ಮೊದಲು ಬರುತ್ತದೆ ಮಾನವ ಜನಾಂಗದ ಒಳತಿಗಾಗಿ ಕಲ್ಯಾಣಕ್ಕಾಗಿ ಚಿಂತಿಸಿದ ವಿಜ್ಞಾನಿ ಇಂದಿಗೂ ವಿಶ್ವದ ಅತ್ಯಂತ ಪ್ರಸಿದ್ಧ ವಿಜ್ಞಾನಿ ಎಂಬ ಹೆಸರನ್ನು ಉಳಿಸಿಕೊಂಡಿದ್ದಾರೆ ಆಧುನಿಕ ಯುಗದ ಯಾವುದೇ ಪ್ರಮುಖ ವೈಜ್ಞಾನಿಕ ಆವಿಷ್ಕಾರವನ್ನು ತೆಗೆದುಕೊಂಡರೂ ಅದರ ಹಿನ್ನೆಲೆಯಲ್ಲಿ ಪ್ರತಿಭಾಶಾಲಿ ಛಾಪು ಇರುತ್ತದೆ 1905ರಲ್ಲಿ ಸಾಪೇಕ್ಷತೆಯ ವಿಶೇಷ ಸಿದ್ಧಾಂತ ಮಂಡಿಸಿ 1916 ರಲ್ಲಿ ಈ ಸಿದ್ಧಾಂತ ಸರಿಯೆಂದು ಸಾಬೀತಾಗಿ ಫೋಟೋ ಎಲೆಕ್ಟ್ರಿಕ್ ಎಫೆಕ್ಟ್ ಸಿದ್ಧಾಂತ ಮಂಡಿಸಿದ ಈ ವಿಜ್ಞಾನಿಗೆ 1922ರಲ್ಲಿ ನೋಬೆಲ್ ಪ್ರಶಸ್ತಿ ದೊರಕಿತ್ತು. ವೋಮ ಹಾಗೂ ಕಾಲ ಅವು ಕೂಡಿಕೊಂಡಿರುವAತಹ ಮತ್ತು ಪ್ರತ್ಯೇಕ ಗೂಳ್ಳಲಾರವು ಕಾಲಕ್ಷೇಪ ಎಂದು ದೃಢಪಡಿಸಿದರು. ಹೀಗೆ ಶಕ್ತಿ (ಚೈತನ್ಯ) ಮತ್ತು ದ್ರವ್ಯ (ಮ್ಯಾಟರ್ )ಒಂದೇ ಪದಾರ್ಥ ಎರಡು ಮುಖಗಳಾಗಿವೆ ಈ ವಿಚಾರಗಳು ಕ್ರಾಂತಿಕಾರಕವಾಗಿದ್ದವು ಮತ್ತು ಆಘಾತ ಗೊಳಿಸುವಂತಿದ್ದವು. ಅದ್ಯಗೂ ವಿಜ್ಞಾನಿಗಳು ಇದರೆಡೆಗೆ ಆಕರ್ಷಿತರಾದರ. ಐನ್ಸ್ಟೀನ್ 1955 ರಲ್ಲಿ ಮೃತರಾದ ನಂತರವೂ ಜನ ಮನದಿಂದ ದೂರಾಗಲಿಲ್ಲ ಭೌತವಿಜ್ಞಾನ ಕ್ಷೇತ್ರವನ್ನು ಕಟ್ಟುಪಾಡುಗಳಿಂದ ವಿಮೋಚನೆಗೊಳಿಸಿದ ಈ ವಿಜ್ಞಾನಿಯನ್ನು ನೆನೆಸಿ ನಮ್ಮ ದಿನನಿತ್ಯ ಜೀವನದಲ್ಲಿ ಭೌತಶಾಸ್ತ್ರದ ಅವಶ್ಯಕತೆ ಮಹತ್ವವನ್ನು ಹಾಗೂ ಈ ಶಾಸ್ತ್ರದ ಬಗ್ಗೆ ಜಗತ್ತಿನಲ್ಲಿ ಸಂಶೋಧನೆಯ ಮಾಹಿತಿ ಉಪಯುಕ್ತತೆ ಸಮಾಜಕ್ಕೆ ಜನಸಾಮಾನ್ಯರ ಮುಂದೆ ತರುವುದೇ ವೈಜ್ಞಾನಿಕ ಬೌತಶಾಸ್ತ್ರ ಜಾಗತಿಕ ವರ್ಷ 2005ರ ಮುಖ್ಯ ಉದ್ದೇಶವಾಗಿತ್ತು.

ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರ ಅಪೂರ್ವ ಸಾಧನೆಯ ನೆನಪಿನಲ್ಲಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಗುರುತಿಸಲಾಗಿದೆ. ಅವರು 1928 ರ ಫೆಬ್ರವರಿ 28 ರಂದು ‘ರಾಮನ್ ಇಫೆಕ್ಟ್’ ಎಂದೇ ಪ್ರಸಿದ್ಧವಾದ ತಮ್ಮ ಅಧ್ಯಯನದ ವಿವರಗಳನ್ನು ಜಗತ್ತಿಗೆ ತಿಳಿಸಿದ್ದರು. ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊತ್ತಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಿ ವಿ ರಾಮನ್ ಅವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್ ಎಂದು. ಅವರು ಜನಿಸಿದ್ದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ, 1888 ರ ನವೆಂಬರ್ 7 ರಂದು. ಅವರ ತಂದೆ ಚಂದ್ರಶೇಖರ ಅಯ್ಯರ್ ಗಣಿತ ಹಾಗೂ ಭೌತವಿಜ್ಞಾನದ ಶಿಕ್ಷಕರಾಗಿದ್ದರು.

ನೋಬೆಲ್ ಪ್ರಶಸ್ತಿ ಪಡೆದ ಮತ್ತೋರ್ವ ವಿಜ್ಞಾನಿ ಸುಬ್ರಹ್ಮಣ್ಯಂ ಚಂದ್ರಶೇಖರ್ ಅವರು ಸಿ ವಿ ರಾಮನ್ ಸ್ವಂತ ಅಣ್ಣನ ಮಗ. ಅಂದಿನ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತಮ್ಮ ಶಿಕ್ಷಣ ಮುಗಿಸಿದ ರಾಮನ್, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಸ್ಥಾನ ಗಳಿಸುವ ಮೂಲಕ ಕಲ್ಕತ್ತೆಯಲ್ಲಿ ಅಸಿಸ್ಟೆಂಟ್ ಅಕೌಂಟೆಟ್ ಜನರಲ್ ಆಗಿ ನೇಮಕಗೊಂಡರು. ಸರಕಾರದಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಅವರಲ್ಲಿ ವಿಜ್ಞಾನದ ಕಡೆಗಿನ ತುಡಿತ ಹಾಗೆಯೇ ಉಳಿದಿತ್ತು. ಅದರ ಪರಿಣಾಮವಾಗಿ ಅವರು ತಮ್ಮ ಹುದ್ದೆಯನ್ನು ತ್ಯಜಿಸಿ ಕಲ್ಕತ್ತಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದರು, ಮುಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಿರ್ದೇಶಕರಾಗಿ ಬೆಂಗಳೂರಿಗೆ ಬಂದವರು ತಮ್ಮ ಕೊನೆಯ ಉಸಿರಿನ ತನಕ ವಿವಿಧ ಸಂಶೋಧನೆಗಳಲ್ಲಿ ಮಗ್ನರಾಗಿದ್ದರು.

ರಾಮನ್ ಪರಿಣಾಮ ಸಂಪಾದಿಸಿ ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ರಾಮನ್ ಅವರಿಗೆ ಸಮುದ್ರ ಏಕೆ ಯಾವಾಗಲೂ ನೀಲಿಯಾಗಿಯೇ ಕಾಣುತ್ತದೆ ಎಂಬ ಪ್ರಶ್ನೆ ಎದುರಾಯಿತಂತೆ. ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ಗುಟ್ಟು ಅಡಗಿದೆಯೋ ಎಂದು ಪತ್ತೆಮಾಡಲು ಹೊರಟ ರಾಮನ್ ಸೂರ್ಯನ ಬೆಳಕು ನೀರಿನಲ್ಲಿ ಚದುರಿ ಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡುಹಿಡಿದರು. ಇದೇ ಅಂಶ ಮುಂದೆ ಅವರು ತಮ್ಮ ಅಧ್ಯಯನವನ್ನು ಮುಂದುವರೆಸಲು ಪ್ರೇರಣೆಯಾಯಿತು. ಕೋಲ್ಕತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್ನಲ್ಲಿ ರಾಮನ್ ಅವರು ತಮ್ಮ ಸಹೋದ್ಯೋಗಿಗಳೊಡನೆ ನಡೆಸಿದ ಅಧ್ಯಯನಗಳ ಪರಿಣಾಮವೇ ರಾಮನ್ ಪರಿಣಾಮದ ಶೋಧ. ಇದೇ ಸಾಧನೆಗಾಗಿ ಅವರಿಗೆ 1930 ನೇ ಇಸವಿಯಲ್ಲಿ ನೊಬೆಲ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊತ್ತಮೊದಲ ನೊಬೆಲ್ ಪುರಸ್ಕಾರವೂ ಹೌದು. ಯಾವುದೇ ಪಾರದರ್ಶಕ ರಾಸಾಯನಿಕ ವಸ್ತುವಿನ ಮೂಲಕ ಬೆಳಕನ್ನು ಹಾಯಿಸಿದಾಗ ಅದರಿಂದ ಹೊರಬರುವ ಕಿರಣಗಳು ಒಳಬರುವ ಕಿರಣಗಳಿಗಿಂತ ಭಿನ್ನವಾದ ದಿಕ್ಕಿನತ್ತ ಹೊರಳಿರುವುದನ್ನು ನಾವು ನೋಡಬಹುದು (ಗಾಜಿನ ಪಟ್ಟಕದ ಮೂಲಕ ಬೆಳಕನ್ನು ಹಾಯಿಸುವ ಉದಾಹರಣೆ ನೆನಪಿಸಿಕೊಳ್ಳಿ). ಹೀಗೆ ಚದುರಿದ ಬಹುಪಾಲು ಕಿರಣಗಳ ಸ್ವರೂಪ ಮೂಲ ಕಿರಣದಂತೆಯೇ ಇರುತ್ತದಾದರೂ ಒಂದಷ್ಟು ಭಾಗದ ಕಿರಣಗಳ ತರಂಗಾತರ ಮೂಲಕ್ಕಿಂತ ಬದಲಾಗಿರುತ್ತದೆ. ರಾಮನ್ ಪರಿಣಾಮವೆಂದು ಕರೆಯುವುದು ಇದನ್ನೇ.

ತರಂಗಾAತರದಲ್ಲಿನ ಈ ಬದಲಾವಣೆಗೂ ಪಾರದರ್ಶಕ ವಸ್ತುವಿನ ರಚನೆಗೂ ಸಂಬAಧವಿರುವುದರಿAದ ಈ ವಿದ್ಯಮಾನವನ್ನು ಅಧ್ಯಯನಮಾಡುವ ಮೂಲಕ ವಸ್ತುವಿನ ರಚನೆಯ ಬಗ್ಗೆ ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ. ರಾಮನ್ ಪರಿಣಾಮದ ಕುರಿತು ವಿವರಗಳು ಪ್ರಕಟವಾದ ಕೇವಲ ಹನ್ನೆರಡು ವರ್ಷಗಳ ಅವಧಿಯಲ್ಲಿಯೇ ಆ ವಿದ್ಯಮಾನವನ್ನು ಕುರಿತು ಬೇರೆ ಬೇರೆ ದೇಶದ ವಿಜ್ಞಾನಿಗಳು ಬರೆದ 1800 ಪ್ರೌಢಪ್ರಬಂಧಗಳು ಪ್ರಕಟವಾದವು ಎಂದು ದಾಖಲೆಗಳು ಹೇಳುತ್ತವೆ. ಅಷ್ಟೇ ಅಲ್ಲ, ರಾಮನ್ ಅವರ ಅಧ್ಯಯನಗಳ ಫಲವಾಗಿ ಅದೇ ಅವಧಿಯಲ್ಲಿ ಸಾವಿರಾರು ರಾಸಾಯನಿಕ ಸಂಯುಕ್ತಗಳ ರಚನೆಯನ್ನು ಅಭ್ಯಾಸಮಾಡುವುದೂ ಸಾಧ್ಯವಾಯಿತು.

ಡಾ|| ಎಚ್ ನರಸಿಂಹಯ್ಯ ನ್ಯೂಕ್ಲಿಯಾರ್ ಸೈನ್ಸ್ ಓದಿದ ಅವರು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾದರು. ಮುಂದೆ ಪ್ರಾಂಶುಪಾಲರು ಹಾಗೂ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿ ಅನೇಕ ಸುಧಾರಣೆಗಳನ್ನ ತಂದರು. ವಿದ್ಯಾರ್ಥಿಗಳು ಓದಿನ ಹುಳುಗಳಾಗದಂತೆ ಎಚ್ಚರ ವಹಿಸಿದ ಅವರು ಶಿಕ್ಷಣದಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಒತ್ತುಕೊಟ್ಟಿದ್ದರು. ಮೇಲ್ವಿಚಾರಕರಿಲ್ಲದೆ ಪರೀಕ್ಷೆ ನಡೆಸಿದ ಕೀರ್ತಿ ಅವರದ್ದಾಗಿದೆ. ಅಷ್ಟರಮಟ್ಟಿಗೆ ಅವರು ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಮೂಡಿಸಿದ್ದರು.

ವಿಜ್ಞಾನ ಶಿಕ್ಷಣದ ಹಿನ್ನೆಲೆ ಹೆಚ್. ನರಸಿಂಹಯ್ಯ ಅವರು ಪ್ರಖರ ವಿಚಾರವಾದಿ. ವೈಜ್ಞಾನಿಕ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಮತ್ತು ಯುವಪೀಳಿಗಗಳಲ್ಲಿ ತುಂಬಲು ಅವಿರತ ಪ್ರಯತ್ನ ಹಾಕಿದರು. ಪುಟ್ಟಪರ್ತಿಯ ಸತ್ಯಸಾಯಿ ಬಾಬಾ ಅವರು ಶೂನ್ಯದಿಂದ ಉಂಗುರ ಸೃಷ್ಟಿಸುವ ಪವಾಡಗಳನ್ನ ಕಟುವಾಗಿ ಟೀಕಿಸುತ್ತಿದ್ದರು. ಶೂನ್ಯದಿಂದ ಉಂಗುರ ಬದಲು ಕುಂಬಕಾಯಿ ಸೃಷ್ಟಿಸುವಂತೆ ಬಹಿರಂಗ ಸವಾಲು ಹಾಕಿದ್ದರು. ಅವರ ಸವಾಲು ಈಗಲೂ ಹಾಗೇ ಇದೆ. ಅದಿರಲಿ, ಇದಕ್ಕೂ ಮುನ್ನವೇ ನರಸಿಂಹಯ್ಯ ಅವರು ಅಪ್ರತಿಮ ಪ್ರಗತಿಪರ ವ್ಯಕ್ತಿತ್ವದವರಾಗಿದ್ದರು. 1962ರಲ್ಲಿ ಬೆಂಗಳೂರು ಸೈನ್ಸ್ ಫೋರಮ್ ಎಂಬ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಶಿಬಿರ, ಗೋಷ್ಠಿಗಳ ಮೂಲಕ ವಿಜ್ಞಾನ ಚಿಂತನೆಗಳನ್ನ ಯುವಪೀಳಿಗೆಯಲ್ಲಿ ಬಿತ್ತುವ ಪ್ರಯತ್ನ ಮಾಡಿದರು. ಅವರ ಶಿಬಿರಗಳಲ್ಲಿ ಖ್ಯಾತ ವಿಜ್ಞಾನಿಗಳು, ವೈದ್ಯರು ಉಪನ್ಯಾಸ ನೀಡುತ್ತಿದ್ದರು. ಸೈನ್ಸ್ ಫೋರಮ್ ಅಷ್ಟೇ ಅಲ್ಲ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅನ್ನ ಸ್ಥಾಪಿಸಿ ಆ ಮೂಲಕ ಯುವಪೀಳಿಗೆಯಲ್ಲಿ ವೈಜ್ಞಾನಿಕ ಚಿಂತನೆ ಪಸರಿಸಲು ಸಹಾಯವಾದರು. ಗ್ರಹಣ ಟೈಮ್‌ನಲ್ಲಿ ಬಾಳೆಹಣ್ಣು ಕೊಡ್ತಿದ್ರು ವೈಜ್ಞಾನಿಕತೆಗೆ ಬಹಳ ಒತ್ತು ಕೊಡುತ್ತಿದ್ದ ಎಚ್‌ಎನ್ ಗ್ರಹಣ ಟೈಮ್‌ನಲ್ಲಿ ಏನೂ ತಿನ್ನಬಾರದು ಅನ್ನೊದನ್ನೆಲ್ಲ ಒಪ್ಪುತ್ತಿರಲಿಲ್ಲ. ಆ ಟೈಮ್‌ನಲ್ಲಿ ಮಕ್ಕಳನ್ನು ಕರೆದು ಗ್ರಹಣವಾಗುವ ವೈಜ್ಞಾನಿಕ ಪ್ರಕ್ರಿಯೆ ವಿವರಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಬಾಳೆ ಹಣ್ಣು, ಕಳ್ಳೆಪುರಿ ಕೊಟ್ಟು, ‘ತಿನ್ರೋ‘ ಅದೇನಾಗುತ್ತೆ ನೋಡೋಣ’ ಅನ್ನುವವರು. ಆ ಮೂಲಕ ಗ್ರಹಣ ಕಾಲದಲ್ಲಿ ತಿಂದರೆ ಏನೋ ಆಗುತ್ತೆ ಅನ್ನೋದೆಲ್ಲ ಮೂಢನಂಬಿಕೆ ಅಂತ ವಿದ್ಯಾರ್ಥಿಗಳಿಗೆ ವಿವರಿಸುತ್ತಿದ್ದರು. ಮೂಢನಂಬಿಕೆಯು ಭಯ ಮತ್ತು ಅಜ್ಞಾನಗಳಿಂದ ಉಂಟಾಗುತ್ತದೆ. ಅವು ಆತ್ಮವಿಶ್ವಾಸವನ್ನು ಲೆಕ್ಕ ಹಾಕಲು ಸಾಧ್ಯವಾಗದಷ್ಟು ಪ್ರಮಾಣದಲ್ಲಿ ನಾಶಪಡಿಸುತ್ತವೆ. ಅವು ಸ್ವತಂತ್ರ ಚಿಂತನೆಯನ್ನು, ನಿರ್ಭೀತ ಮನೋಭಾವವನ್ನು ಮೊಟಕುಗೊಳಿಸುತ್ತವೆ. ವಿಜ್ಞಾನದ ಫಲಿತಾಂಶಗಳು ಬಗ್ಗೆ ನಾವು ಹೆಚ್ಚು ಗಮನ ಕೊಟ್ಟಿದ್ದೇವೆ. ಆದರೆ ವಿಜ್ಞಾನದ ಚೈತನ್ಯವು ಜನಪ್ರಿಯವಾಗಿಲ್ಲ. ವಿಜ್ಞಾನದ ನಿಜವಾದ ಪ್ರಾಮುಖ್ಯ ಈ ಅಂಶದಲ್ಲಿ ಅಡಗಿದೆನಮ್ಮ ತಿಳುವಳಿಕೆಯಲ್ಲಿ ಎಷ್ಟೆ ಕಂದರಗಳಿದ್ದರೂ, ವಿಜ್ಞಾನಕ್ಕೆ ತನ್ನದೆ ಆದ ಮಿತಿಗಳಿದ್ದರೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳವಲ್ಲಿ ವಿಜ್ಞಾನದ ವಿಧಾನಗಳೇ ಹೆಚ್ಚು ಸಮರ್ಪಕ. ಯಾವುದೇ ಹೇಳಿಕೆ ಅಥವಾ ಸೂಕ್ತಿಯನ್ನು ಒಪ್ಪಿಕೊಳ್ಳವುದು ಸರಿಯಲ್ಲ. ಸಾಧ್ಯವಾದಷ್ಟರಮಟ್ಟಿಗೆ ಅವುಗಳನ್ನು ಪ್ರಯೋಗಗಳ ಮೂಲಕ ಪರಿಕ್ಷೀಸಬೇಕು. ಎಲ್ಲ ಪರಿಶೀಲನ ಮಾರ್ಗಗಳಲ್ಲೂ ವಿಚಾರವು ಅಡಿಪಾಯವಾಗಬೇಕು.ಎಂಬುದು ಅವರ ಅಭಿಪ್ರಾಯ. “ಪವಾಡ ಮತ್ತು ಪರೀಕ್ಷಿಸಿ ನೋಡಬಹುದಾದ ಮೂಢನಂಬಿಕೆಗಳ ಸಮಿತಿ”ಯನ್ನು ನೇಮಕ ಮಾಡಿದರು. ಈ ಸಮಿತಿಯು ಪವಾಡಪುರುಷರು ನಡೆಸುತ್ತಿದ್ದ ಪವಾಡಗಳನ್ನು ಬಯಲು ಪಡಿಸಿತು. 1980 ರಲ್ಲಿ ಇವರು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರು.

ಇವರು ತಮ್ಮ ಸೇವೆ ಮತ್ತು ಸಾಧನೆಗಳಿಂದ ಹಲವು ಪ್ರಶಸ್ತಿಗಳನ್ನು ಪಡೆದರು. 1969ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿತು. ಕೇಂದ್ರ ಸರ್ಕಾರ “ಪದ್ಮಭೂಷಣ” ಪ್ರಶಸ್ತಿಯನ್ನು ನೀಡಿತು. 1990ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ ನ್ನು ಪಡೆದುಕೊಂಡರು. ಗುಲ್ಬರ್ಗ. ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನ್ನ ನೀಡಿ ಗೌರವಿಸಿತು. ಹಿಂದುಳಿದವರು ಏಳ್ಗೆಗಾಗಿ ದುಡಿದವರಿಗೆ ನೀಡುತ್ತಿದ್ದ ದೇವರಾಜ್ ಅರಸ್ ಪ್ರಶಸ್ತಿಯನ್ನು 1994 ರಲ್ಲಿ ಪಡೆದರು. ಇವರ ಮೌಢ್ಯತೆಯ ವಿರುದ್ಧ ನಡೆಸಿದ ಹೋರಾಟಕ್ಕಾಗಿ ಅಮೆರಿಕದ ಪ್ರಕೃತ್ಯತೀತವಾದ ಘಟನೆಗಳನ್ನು ವೈಜ್ಞಾನಿಕವಾಗಿ ಸಂಶೋಧಿಸುವ ಸಮಿತಿಯಿಂದ ಫೆಲೋಶಿಪ್‌ನ್ನು ಪಡೆದ ಭಾರತದ ಏಕೈಕ ವ್ಯಕ್ತಿ ನರಸಿಂಹಯ್ಯನವರು. 1942 ರಲ್ಲಿ ನಡೆದ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿದ್ದರಿಂದ ಸರ್ಕಾರ ತಾಮ್ರಪತ್ರವನ್ನು ನೀಡಿತು.1992 ರಲ್ಲಿ ಇವರ ” ತೆರೆದ ಮನ” ಎಂಬ ಪತ್ತಿಕಾಲೇಖನಗಳ ಸಂಗ್ರಹವು ಪ್ರಕಟವಾಯಿತು. 1995 ರಲ್ಲಿ ಇವರ ಆತ್ಮಕಥೆ “ಹೋರಾಟದ ಹಾದಿ” ಪ್ರಕಟವಾಯಿತು. ಮೌಢ್ಯತೆಯ ವಿರೋಧಿಯಾಗಿದ್ದ ಇವರು “ಯಾವ ಧಾರ್ಮಿಕ ಅಂತ್ಯ ಸಂಸ್ಕಾರದಲ್ಲೂ ನನಗೆ ನಂಬಿಕೆಯಿಲ್ಲ ಮತ್ತು ನಾನು ಸತ್ತಾಗ ನಮ್ಮ ಯಾವ ಸಂಸ್ಥೆಗೂ ರಜೆ ಕೊಡಕೂಡದು” ಎಂದು ಉಯಿಲನ್ನು ಬರೆದಿದ್ದ ನರಸಿಂಹಯ್ಯನವರು ಜನವರಿ 31, 2005 ರಲ್ಲಿ ಇಹಲೋಕ ತ್ಯಜಿಸಿದರು. ಹುಟ್ಟಿನಿಂದಲೂ ಬಡತನದಲ್ಲೇ ಇದ್ದ ನರಸಿಂಹಯ್ಯನವರು ದುಡಿಯುವಾಗಲೂ ಸಹ ತಮ್ಮ ಗಳಿಕೆಯ ಹಣವನ್ನೆಲ್ಲಾ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿದ್ದು ಸರಳ ಜೀವನವನ್ನು ನಡೆಸಿ ಎಲ್ಲರಿಗು ಆದರ್ಶಪ್ರಾಯರಾಗಿದ್ದಾರೆ ವಿಜ್ಞಾನದಿಂದ ಸಬಲೀಕರಣ ಸಾಧ್ಯ: ಪ್ರೊ: ಸಿ.ಎನ್.ಅರ್.ರಾವ್

ವಿಜ್ಞಾನ ಅಧ್ಯಯನ ಮತ್ತು ವಿಜ್ಞಾನ ಕ್ಷೇತ್ರದ ಸಬಲೀಕರಣದಿಂದ ಮಾತ್ರ ಬಲಿಷ್ಠ ದೇಶ ಕಟ್ಟಲು ಸಾಧ್ಯ ಎಂದು ಭಾರತರತ್ನ ಪ್ರೊ. ಸಿ.ಎನ್.ಆರ್.ರಾವ್ ಅವರು ಪ್ರತಿಪಾದಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಕೋಟ್ಯಂತರ ಮಕ್ಕಳು ಅಸಾಧಾರಣ ಆಲೋಚನಾ ಶಕ್ತಿ ಹೊಂದಿದ್ದಾರೆ. ಉತ್ತಮ ಅವಕಾಶಗಳು ದೊರೆತಲ್ಲಿ ಆ ಮಕ್ಕಳು ಸಹ ಶ್ರೇಷ್ಠ ವಿಜ್ಞಾನಿಗಳಾಗಬಲ್ಲರು. ವಿಜ್ಞಾನ ಅಧ್ಯಯ ಯಾವುದೇ ವಿಷಯದ ಬಗ್ಗೆ ಕುತೂಹಲ, ಅಪರಿಮಿತ ಉತ್ಸಾಹ ಮತ್ತು ಅದನ್ನು ಅರಿಯಬೇಕು ಎನ್ನುವ ಬದ್ಧತೆ ಉತ್ತಮ ವಿಜ್ಞಾನಿಗಳಾಗಲು ಅಗತ್ಯವಿರುವ ಮೂಲ ಗುಣಗಳಾಗಿವೆ. ನಿರಂತರ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಲು ಸಾಧ್ಯ. ಇಲ್ಲಿ ಸಾಧನೆ ಮಾಡಲು ಯಾವುದೇ ಮಿತಿ ಇಲ್ಲ ದಣಿವರಿಯದ ಮನಸ್ಸು ಮತ್ತು ಕ್ರಿಯಾಶೀಲತೆ, ವಿಜ್ಞಾನ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಮೂಲ ಮಂತ್ರವಾಗಿದೆ. ಯಾವುದೇ ಪದವಿ ಮತ್ತು ಹಣಕ್ಕಿಂತ ಅಧ್ಯಯನ ನಮ್ಮನ್ನು ಶ್ರೇಷ್ಠರನ್ನಾಗಿ ಮಾಡುತ್ತದೆ. ರಷ್ಯಾದ ರಸಾಯನ ಶಾಸ್ತ್ರ ತಜ್ಞ ಡಿಮಿಟ್ರಿ ಮೆಡ್ವಡೇವ್ ಅತ್ಯಂತ ಬಡಕುಟುಂಬದ ಹುಡುಗನಾಗಿದ್ದ, ಆದರೂ, 1879 ರಲ್ಲಿ ಮೊಟ್ಟಮೊದಲ ಆವರ್ತಕ ಕೋಷ್ಠಕವನ್ನು ಕಂಡು ಹಿಡಿಯುವಷ್ಟು ಬುದ್ಧಿವಂತನಾಗಿದ್ದ ಅವರ ಕ್ಷೇತ್ರ ಎಷ್ಟು ದೊಡ್ಡದೋ ಅದಕ್ಕೂ ಹಿರಿದಾಗಿದೆ ಅವರ ವ್ಯಕ್ತಿತ್ವ .ಮನೆಯಂಗಳದಲ್ಲಿ ಮಾತುಕತೆ 67 ವರ್ಷದಿಂದ ಸಂಶೋಧನೆ, ವಯಸ್ಸು ಮನಸ್ಸಿನಲ್ಲಿದೆ ಸಿ.ಎನ್.ಆರ್.ರಾವ್ ವಿಜ್ಞಾನ ಬಿಟ್ಟು ಬೇರೆ ಏನೂ ಮಾಡಲಿಲ್ಲ. ಸಂಗೀತ, ಸಾಹಿತ್ಯ ಯಾವುದೇ ಆದರೂ ಒಂದೊದೇ ಆಸಕ್ತಿ ಇರಬೇಕು. ಆಗಲೇ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ’ ಎಂದು ಭಾರತ ರತ್ನ ಪುರಸ್ಕೃತ ಪ್ರೊ.ಸಿ.ಎನ್.ಆರ್.ರಾವ್‌ರವರು ದೇವರು ಒಳ್ಳೇ ಬುದ್ಧಿ ಕೊಟ್ಟಿದ್ದಾನೆ. ದುಡ್ಡಿನಿಂದ ಒಂದೇ ಎಲ್ಲವೂ ಆಗಲ್ಲ. ವಿಜ್ಞಾನ, ಸಾಹಿತ್ಯ, ಬೇರೆ ಯಾವುದರಲ್ಲಿಯೇ ಆಗಲಿ. ಒಳ್ಳೇ ಸಂಗೀತಗಾರರು ಅಭ್ಯಾಸ ನಿಲ್ಲಿಸುವಂತೆಯೇ ಇಲ್ಲ. ಸಾಯುವವರೆಗೂ ಮಾಡಬೇಕು. ವಿಜ್ಞಾನದಲ್ಲಿಯೂ ಹಾಗೆಯೇ ಸಂಶೋಧನೆ ನಿರಂತರವಾಗಿರಬೇಕು. ವಿಜ್ಞಾನದಲ್ಲಿ ಮುಂದೆ ಬರುವುದು ಅಷ್ಟೇ ಅಲ್ಲ. ಹತ್ತು ವರ್ಷದಲ್ಲಿ ಆಗಲಿ, 15 ವರ್ಷದಲ್ಲಿ ಆಗಲಿ ನಮ್ಮ ಭಾರತ ಚೀನಾದ ರೀತಿ ಮುಂದೆ ಬರದಿದ್ದರೆ ಕಷ್ಟವಾಗುತ್ತೆ. ತುಂಬಾ ಜನ, ತುಂಬಾ ದೇಶಗಳು ಪೈಪೋಟಿ ಮಾಡುತ್ತಿವೆ. ಕೊರಿಯಾ ಜಪಾನ್‌ಗಿಂತ ಮುಂದೆ ಹೋಗುತ್ತಿದೆ. ಕಷ್ಟಪಟ್ಟು ಕೆಲಸ ಮಾಡಬೇಕು. 67 ವರ್ಷದಿಂದ ಸಂಶೋಧನೆ ಮಾಡ್ತಿದ್ದೀನಿ. ಇನ್ನು ಎಷ್ಟು ವರ್ಷ ಅಂದ್ರೆ? ಮಾಡ್ತಾನೇ ಇರ್ತೀನಿ. ವಯಸ್ಸು ಅನ್ನೋದು ಮನಸಿನಲ್ಲಿದೆ. ನನ್ನನ್ನು ನಾನು ಮುದುಕು ಅಂದುಕೊAಡ್ರೆ ಆಗಲ್ಲ.

ಕಬೀರರು ಹೇಳಿದ್ದಾರೆ– ‘ಮನಮೇ ಗಂಗಾ, ಮನಮೇ ಕಾಶಿ…’ ಅಂತ. ಹಾಗೇ ಮನಸಿನಲ್ಲಿ ವಯಸ್ಸು ಇದೆ. ಬಿಸ್ಮಿಲ್ಲಾ ಖಾನ್, ‘ನಾನು ಸಾಯುವವರೆಗೂ ಸಂಗೀತದಲ್ಲಿ ಇರಬೇಕು’ ಅಂತ ಕೇಳಿಕೊಳ್ಳುತ್ತಿದ್ದರು. ಅದೇ ರೀತಿ ‘ಕೊನೆಯ ಉಸಿರಿರುವವರೆಗೂ ಸಿ ಎನ್ ರಾವ್ ರು ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಅಕ್ಷರ ರೂಪದಲ್ಲಿ ಅವರ ಮಾತುಗಳು.. ಅಬ್ಬಾ ! 67 ಡಾಕ್ಟರೇಟುಗಳು ನಿಜವಾಗಿಯೂ ನಾವು ಕನ್ನಡಿಗರು ಹೆಮ್ಮೆ ಪಡಬೇಕಾದ ಮಹನೀಯರು ..ತಾಯಿ ಭುವನೇಶ್ವರಿ ತಮಗೆ ಇನ್ನೂ ಹೆಚ್ಚಿನ ಚೈತನ್ಯವನ್ನು ಕರುಣಿಸಲಿ , ತಮ್ಮಿಂದ ಈ ನೆಲದ ಘನತೆ ಮತ್ತೂ ಹಿರಿದಾಗಲಿ ತಮ್ಮ ಕೀರ್ತಿ ಅಜರಾಮರವಾಗಲಿ.ಪ್ರತಿ ನಿತ್ಯ ಶಿಕ್ಷಕರಾದ ನಾವು ವರ್ಗದ ಕೋಣೆಯಲ್ಲಿ ಪ್ರಯೋಗಾದಾರಿತ ಬೋಧನೆ,ಶೋಧನೆ ಹಾಗೂ ಸಂಶೋಧನೆಯಲ್ಲಿ ನಾವು ಹಾಗೂ ನಮ್ಮ ವಿದ್ಯಾರ್ಥಿಗಳನ್ನು ತೊಡಗಿಸಿ ಕೊಂಡಿದ್ದರೆ ಮಾತ್ರ ಈ ಎಲ್ಲ ಮಹನಿಯರಿಗೆ ನಿಜವಾದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಗೆ ಗೌರವ ಸಲ್ಲಿಸಿದಂತಾಗುತ್ತದೆ.

 -ಎಂ.ಎಚ್.ಸವದತ್ತಿ, ಶಿಕ್ಷಕರು

Leave a Reply

Your email address will not be published. Required fields are marked *

You May Also Like

ಸರ್ಕಾರದ ಆದೇಶದಲ್ಲಿ ಗೊಂದಲ ಗೂಡು ಸೇರಲು ಗದಗ ಜಿಲ್ಲೆಯ ಕಾರ್ಮಿಕರ ಪರದಾಟ..!

ಕಾರ್ಮಿಕರಿಗೆ ನಿಗದಿತ ದರದಲ್ಲಿ ಊರು ಸೇರಿಸಬೇಕು ಎನ್ನುವ ನಿಯಮವಿದೆ. ಆದರೆ ಉಡುಪಿಯಲ್ಲಿ ಮಾತ್ರ ಗದಗ ಜಿಲ್ಲೆಯ ಕಾರ್ಮಿಕರು ಊರು ಸೇರಲು ಪರದಾಡುವಂತಾಗಿದೆ. ಈಗಾಗಲೇ ಒಂದುವರೆ ತಿಂಗಳಿಂದ ಕೆಲಸವಿಲ್ಲದೇ ಕಾರ್ಮಿಕರು ಒಪ್ಪತ್ತಿನೂಟಕ್ಕೂ ಪರದಾಡಿದ ಕಾರ್ಮಿಕರು ಊರು ಸೇರಲು ಪರದಾಡುವಂತಾಗಿದೆ.

ನರೇಗಲ್ಲ: ವಿದ್ಯುತ್ ನಿಲುಗಡೆ

110/11ಕೆವ್ಹಿ ನರೇಗಲ್ಲ, ವಿದ್ಯುತ್ ವಿತರಣಾ ಉಪ-ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ನವೆಂಬರ್ 10 ರಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5.30 ಘಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಕೊರೊನಾ ಸೋಂಕು: ಗದಗನಲ್ಲಿಂದು ಇಬ್ಬರು ಬಿಡುಗಡೆ

ಗದಗ: ಜಿಲ್ಲೆಯಲ್ಲಿ ಕೊವಿಡ್-19 ಸೋಂಕಿನಿಂದ ಗುಣಮುಖರಾಗಿ ಇಂದು ಮತ್ತಿಬ್ಬರು ಬಿಡುಗಡೆ ಹೊಂದಿದರು. ಪಿ-1745(17 ವರ್ಷ), ಪಿ-1795 (16 ವರ್ಷ) ಇಬ್ಬರು ಯುವಕರು ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು.

ರಂಗಭೂಮಿ ಕ್ಷೇತ್ರ: ಗದಗಿನ ಸಾವಿತ್ರಿ ಗೌಡರ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ

ಉತ್ತರಪ್ರಭ ಸುದ್ದಿಬೆಂಗಳೂರು: ಕರ್ನಾಟಕ ಸರ್ಕಾರ 2021ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. 66…