ದೆಹಲಿ: ದೇಶದಲ್ಲಿ ಏರುತ್ತಿರುವ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆ ಶ್ರೀಸಾಮಾನ್ಯನ ಜೇಬಿಗೆ ಕತ್ತರಿ ಹಾಕುತ್ತಲೇ ಇದೆ. ಕೆಲವು ರಾಜ್ಯಗಳಲ್ಲಂತೂ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 100ರ ಗಡಿ ದಾಟಿದೆ. ತೈಲೋತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನ ದೂಷಿಸುತ್ತಲೇ ಇದೆ.

ದೇಶದ ನಾಲ್ಕು ರಾಜ್ಯಗಳಲ್ಲಿ ಟ್ಯಾಕ್ಸ್​​ ಕಡಿತ ಮಾಡುವ ಮೂಲಕ ಗ್ರಾಹಕರಿಗೆ ಕೊಂಚ ನಿರಾಳ ಎನಿಸುವಂತೆ ಮಾಡಿದೆ. ಇದರಲ್ಲಿ ಕೆಲ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಹೀಗಾಗಿ ಜನರ ವಿಶ್ವಾಸವನ್ನ ಗಳಿಸಲಿಕ್ಕೋಸ್ಕರ ಈ ಕ್ರಮ ಕೈಗೊಳ್ಳಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಪೆಟ್ರೋಲ್​ ಹಾಗೂ ಡೀಸೆಲ್​ಗಳ ಮೇಲೆ ಹಾಕಲಾಗುವ ವ್ಯಾಟ್​ ಮೇಲೆ ಪ್ರತಿ ಲೀಟರ್​ಗೆ ಒಂದು ರೂಪಾಯಿ ಕಡಿತ ಮಾಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್​​ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಫೆಬ್ರವರಿ 12ರಂದು ಆಸ್ಸಾಂ ರಾಜ್ಯ ಸರ್ಕಾರ ಕೂಡ ಕಳೆದ ವರ್ಷ ಕೊರೊನಾ ಸಂಕಷ್ಟದಿAದ ಜನರನ್ನ ಪಾರು ಮಾಡುವ ಸಲುವಾಗಿ 5 ರೂಪಾಯಿ ಎಡಿಷನಲ್​ ಟ್ಯಾಕ್ಸ್​​ನ್ನು ಕಡಿತಗೊಳಿಸಲಾಗಿದೆ. ಆಸ್ಸಾಂನಲ್ಲೂ ಚುನಾವಣೆ ಸಮೀಪಿಸುತ್ತಿದೆ.

ಪೆಟ್ರೋಲ್​ – ಡೀಸೆಲ್​ ದರದಲ್ಲಿ ಇಂದು ಅಂತಹ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಇದಕ್ಕೂ ಮೊದಲು ನಿರಂತರ 12 ದಿನಗಳ ಕಾಲ ತೈಲೋತ್ಪನ್ನಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿತ್ತು.

ದೆಹಲಿಯಲ್ಲಿ ಪೆಟ್ರೋಲ್​ ಬೆಲೆ 90.58 ರೂ. ಹಾಗೂ ಡಿಸೇಲ್​ ದರ 80.97 ರೂ.

ಮುಂಬೈನಲ್ಲಿ ಪೆಟ್ರೋಲ್​ ದರ 97 ರೂ. ಹಾಗೂ ಡೀಸೆಲ್​ ದರ 88.06 ರೂ.

ಕೊಲ್ಕತ್ತಾದಲ್ಲಿ ಪೆಟ್ರೋಲ್​ ದರ 91.78 ರೂ. ಹಾಗೂ ಡೀಸೆಲ್​ ದರ 84.56 ರೂ.

ಬೆಂಗಳೂರಿನಲ್ಲಿ ಪೆಟ್ರೋಲ್​ ದರ 93.61 ರೂ. ಹಾಗೂ ಡೀಸೆಲ್​ ದರ 85.84 ರೂ.

Leave a Reply

Your email address will not be published. Required fields are marked *

You May Also Like

ಆಲಮಟ್ಟಿ: ಬಸವಭೂಮಿ ಯಾತ್ರಾಥಿ೯ಗಳಿಗೆ ಅದ್ದೂರಿ ಸ್ವಾಗತಾತೀಥ್ಯ

ಆಲಮಟ್ಟಿ : ಆಲಮಟ್ಟಿಗೆ ಆಗಮಿಸಿದ್ದ ಬಸವಭೂಮಿ ಯಾತ್ರೆಯ ಸಹಸ್ರಾರು ಬಸವಭಕ್ತ ಯಾತ್ರಾಥಿ೯ಗಳಿಗೆ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡು…

2019-20: ತೆರಿಗೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು

2019-20ರ ಹಣಕಾಸು ವರ್ಷದ ತೆರಿಗೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ದಿನಾಂಕ ಮತ್ತು ಅಂತಿಮ ದಿನಾಂಕಗಳನ್ನು (ಡೆಡ್ ಲೈನ್) ಇಲ್ಲಿ ಪ್ರಕಟಿಸಲಾಗಿದೆ. ತೆರಿಗೆ ಪಾವತಿದಾರರಾಗಿದ್ದಲ್ಲಿ, ಇವನ್ನು ನೋಟ್ ಮಾಡಿಟ್ಟುಕೊಳ್ಳುವುದು ಒಳ್ಳೆಯದು.

ವಾಟ್ಸಾಪ್ ಬಳಕೆದಾರರಿಗೆ ಇನ್ಮೂಂದೆ ಹೆಚ್ಚಿನ ಬದ್ರತೆ

ವಾಟ್ಸ್ ಆಪ್ ವೆಬ್ ಮತ್ತು ಡೆಸ್ಕ್ ಟಾಪ್ ಹೊಸ ಮತ್ತು ಉತ್ತಮ ಭದ್ರತಾ ವೈಶಿಷ್ಟö್ಯಗಳೊಂದಿಗೆ ಅಪ್ ಡೇಟ್ ಆಗಲಿದೆ. ಹೊಸ ಅಪ್ ಡೇಟ್ ಪ್ರಕಾರ, ಬಳಕೆದಾರರು ಲಾಗಿನ್ ಆಗುವ ಮುನ್ನ ಡೆಸ್ಕ್ ಟಾಪ್ ಆಪ್‌ನಲ್ಲಿ ಫಿಂಗರ್ ಪ್ರಿಂಟ್ ಅಥವಾ ಫೇಸ್ ಐಡಿಯನ್ನು ದೃಢೀಕರಿಸಬೇಕಾಗುತ್ತದೆ. ಹೊಸದಾಗಿ ಪರಿಚಯಿಸಲಾದ ಈ ವೈಶಿಷ್ಟö್ಯವು ಖಾತೆಗೆ ಹೆಚ್ಚುವರಿ ರಕ್ಷಣೆ ಒದಗಿಸುತ್ತದೆ.

ಕರಿನಾ-ಸೈಫ್ ಅಲಿ ಖಾನ್ ದಂಪತಿಗೆ ಮತ್ತೊಂದು ಮಗು

ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ದಂಪತಿಗೆ ಮತ್ತೊಂದು ಮಗು ಜನಿಸಿದ್ದು ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.