ದೆಹಲಿ: ಕೊರೋನಾ ಸೋಂಕಿನ ರಣಕೇಕೆಯಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಅಷ್ಟೇ ಅಲ್ಲದೇ ದೇಶ-ವಿದೇಶಗಳಲ್ಲಿಯೂ ಕೊರೊನಾ ಸೋಂಕಿನಿಂದಾಗಿ ಪ್ರತಿವರ್ಷ ನಡೆಯುತ್ತಿದ್ದ ಹಲವಾರು ಕಾರ್ಯಕ್ರಮಗಳು ಸ್ಥಗಿತಗೊಂಡಿವೆ.

ಸೋಂಕಿನ ಹಾವಳಿಯಿಂದ ಜನರು ಭೀತಿಗೊಂಡಿದ್ದು, ಇದರಿಂದಾಗಿ ತಮ್ಮ ಸಂಭ್ರಮಾಚರಣೆಗಳನ್ನು ಮುಂದೂಡಿದ್ದಾರೆ. ಇನ್ನು, ಜಪಾನ್​ನ ವಾರ್ಷಿಕ ಹಬ್ಬವಾಗಿರುವ ಹಡಕ ಮತ್ಸುರಿ ಕಳೆದ ಬಾರಿ ವಿಜೃಂಭಣೆಯಿಂದ ನಡೆದಿತ್ತು. ಫೆಬ್ರವರಿ ತಿಂಗಳು ನಡೆಯುವ ಹಡಕ ಮತ್ಸುರಿ ಹಬ್ಬವೂ ಬೆತ್ತಲೆ ಹಬ್ಬ ಎಂದು ಪ್ರಸಿದ್ಧಿ ಪಡೆದಿದೆ. ಆದರೆ, ಈ ಬೆತ್ತಲೆ ಹಬ್ಬದಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಆದರೆ, ಈ ಬಾರಿ ಹಡಕಾ ಮತ್ಸುರಿ ಹಬ್ಬದಲ್ಲಿ ಆಯ್ದ ಜನರಿಗೆ ಮಾತ್ರ ಪ್ರವೇಶ ಸಿಕ್ಕಿದ್ದು, ಉಳಿದ ಜನರಿಗೆ ಎಂಟ್ರಿ ಇಲ್ಲ.

ಈ ಬೆತ್ತಲೆ ಹಬ್ಬದಲ್ಲಿ 10 ಸಾವಿರ ಪುರುಷರು ಭಾಗವಹಿಸುತ್ತಾರೆ. ಈ ಆಚರಣೆಯೂ ಸಮೃದ್ಧಿ ಮತ್ತು ಆಶೀರ್ವಾದವನ್ನು ಸೂಚಿಸುತ್ತದೆ. ಬೆತ್ತಲೆ ಹಬ್ಬವೂ ಯುವ ಪೀಳಿಗೆ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಲಿ ಎಂದು ಪ್ರತಿವರ್ಷ ಆಚರಣೆ ಮಾಡಲಾಗುತ್ತದೆ. ಒಂದು ಗಂಟೆಯಿಂದ ಎರಡು ಗಂಟೆವರೆಗೆ ಬೆತ್ತಲೆ ಹಬ್ಬ ನಡೆಯುತ್ತದೆ. ಇದರಲ್ಲಿ ಭಾಗವಹಿಸುವವರು ಮೊದಲು ದೇವಸ್ಥಾನದಲ್ಲಿ ತಣ್ಣಗೆ ಇರುವ ನೀರಿನಿಂದ ಸ್ನಾನ ಮಾಡಿ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಹೆಸರು ಸೂಚಿಸುವ ಬೆತ್ತಲೆ ಹಬ್ಬದಲ್ಲಿ ಭಾಗವಹಿಸುವ ಪುರುಷರು ಸಂಪೂರ್ಣವಾಗಿ ಬೆತ್ತಲೆ ಆಗಿರುವುದಿಲ್ಲ. ಸೋಂಟದ ಕೆಳಗೆ ಬಿಳಿ ಬಣ್ಣ ಬಟ್ಟೆ ರೀತಿಯ ಪಂಡೋಶಿ ಎಂಬ ಕನಿಷ್ಠ ಬಟ್ಟೆ ಜೊತೆಗೆ ಬಿಳಿ ಸಾಕ್ಸ್ (ಟ್ಯಾಬಿ) ಅನ್ನು ಧರಿಸಿರುತ್ತಾರೆ.

500 ವರ್ಷಗಳಿಂದ ನಿರಂತರವಾಗಿ ನಡೆದ ಬೆತ್ತಲೆ ಹಬ್ಬ:500 ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಆಚರಣೆಯನ್ನು ಈ ಬಾರಿ ನಿಲ್ಲಿಸಲು ಯೋಚನೆ ಮಾಡಲಾಗಿತ್ತು. ಆದರೆ, ಕಡಿಮೆ ಜನರನ್ನು ಆಯ್ಕೆ ಮಾಡಿಕೊಂಡು ಆಚರಣೆಯನ್ನು ಮುಂದುವರೆಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ಬೆತ್ತಲೆ ಹಬ್ಬವು ಮುರೋಮಾಚಿ ಅವಧಿಯಲ್ಲಿ (1338-1573)ರ ವೇಳೆ ಪ್ರಾರಂಭವಾಯಿತು. ಜಪಾನಿನ ಸೈದೈಜಿ ಕಣ್ಣೋನಿನ್ ದೇವಸ್ಥಾನದಲ್ಲಿ ಪಾದ್ರಿಯೊಬ್ಬರು ಗ್ರಾಮಸ್ಥರನ್ನು ಸೇರಿಸಿ ಈ ಹಬ್ಬ ನಡೆಸಿದ್ದರು.

ಜಪಾನ್‌ನಲ್ಲಿ ಇತ್ತೀಚಿನ ವಾರಗಳಲ್ಲಿ ಕೊರೋನಾ ಪ್ರಕರಣಗಳು ಕಡಿಮೆ ಆಗುತ್ತಿವೆ. ಜಪಾನ್​ನಲ್ಲಿ 4,24,000ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಮತ್ತು ಸೋಂಕಿನಿಂದ 7,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದು ವರದಿಯಾಗಿದೆ.

Leave a Reply

Your email address will not be published. Required fields are marked *

You May Also Like

ಬಿಜೆಪಿಗೆ ಹೆಚ್ಚು ಸ್ಥಾನ: ರಾಜ್ಯಸಭೆಯಲ್ಲೂ ಬಿಜೆಪಿ ಮೇಲುಗೈ

ನವದೆಹಲಿ : ರಾಜ್ಯ ಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಮೇಲ್ಮನೆಯಲ್ಲಿ ಬಿಜೆಪಿಯು ತನ್ನ ಸಂಖ್ಯಾ…

ವೃದ್ಧರಿಗೆ ಬಿಸಿಯೂಟ ನೀಡಲು ಮುಂದಾದ ಕೇಂದ್ರ ಸರ್ಕಾರ

ಆಹಾರಕ್ಕೆ ತೊಂದರೆ ಅನುಭವಿಸುತ್ತಿರುವ ವಯೋವೃದ್ಧರಿಗಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಏರಿಕೆ?

ನವದೆಹಲಿ: 2021 ರ ಆರಂಭದಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಜನವರಿ 2021 ರಿಂದ ಅನ್ವಯವಾಗುವಂತೆ, ತುಟ್ಟಿ…