ನವದೆಹಲಿ: ಹೊಸ ರೂಪಾಂತರಿ ಕೊರೊನಾ ತಳಿ ಅಪಾಯಕಾರಿಯಾಗುವ ಸಾಧ್ಯತೆ ಇದೆ ಎಂದು ದೆಹಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್) ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದ ಐದು ರಾಜ್ಯಗಳಲ್ಲಿ ಕೊರೊನಾ ಸಾಂಕ್ರಾಮಿಕ ಪ್ರಕರಣಗಳು ದಿಢೀರ್ ಹೆಚ್ಚಳಗೊಳ್ಳುತ್ತಿದ್ದು, ಹೊಸ ರೂಪಾಂತರಿ ಕೊರೊನಾ ತಳಿ, ಪ್ರತಿಕಾಯ ಅಭಿವೃದ್ಧಿಗೊಂಡ ಜನರಲ್ಲಿ ಮತ್ತೆ ಸೋಂಕು ಉಂಟುಮಾಡಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ, ಛತ್ತೀಸ್ ಗಢ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಕಳೆದ ಕೆಲವು ದಿನಗಳಿಂದ ಹೆಚ್ಚಳಗೊಳ್ಳುತ್ತಿರುವುದಕ್ಕೆ ಎಂದು ಡಾ.ಗುಲೇರಿಯಾ ಕಳವಳ ವ್ಯಕ್ತಪಡಿಸಿದ್ದಾರೆ.

ಹೊಸ ತಳಿಯ ಕೊರೋನಾ ವೈರಸ್, ಪ್ರತಿಕಾಯಗಳನ್ನೂ ಮೀರಿ ಸೋಂಕು ಉಂಟುಮಾಡುವ ಸಾಮರ್ಥ್ಯ ಹೊಂದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಮೊಬೈಲ್ ಬಳಕೆ ಬೇಡ ಅಂದಿದ್ದಕ್ಕೆ ಏನ್ ಮಗು ಹೀಗಾ ಮಾಡೋದು!

ಚೆನ್ನೈ : ಮೊಬೈಲ್ ಬಳಸುವ ಬಗ್ಗೆ ಬುದ್ಧಿವಾದ ಹೇಳಿದ್ದಕ್ಕೆ 16 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಅಪಘಾತ – 23 ವಲಸೆ ಕಾರ್ಮಿಕರ ಸಾವು!

ಲಕ್ನೋ: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ದುರಂತ ಘಟನೆಗಳು ಇನ್ನೂ ನಿಂತಿಲ್ಲ. ಎರಡು…

ಮಹಾರಾಷ್ಟ್ರದ ಜನರ ನಿದ್ದೆಗೆಡಿಸಿದ ಮಹಾಮಾರಿ!

ಮುಂಬಯಿ : ನಗರದಲ್ಲಿ ಕೊರೊನಾ ಸಮುದಾಯಿಕ ಹಂತ ತಲುಪಿದಂತಾಗಿದೆ. ಹೀಗಾಗಿ ಅಲ್ಲಿನ ಜನ ಮಹಾಮಾರಿಗೆ ತತ್ತರಿಸಿ…

ನವದೆಹಲಿ : ದೇಶದ ಮೆಟ್ರೋ ನಗರಗಳು ರೆಡ್ ಜೋನ್ ನಲ್ಲಿ: ಆರೋಗ್ಯ ಸಚಿವಾಲಯ ನಿರ್ಧಾರ

ದೇಶದಲ್ಲಿನ ಎಲ್ಲ ಮೆಟ್ರೋ ನಗರಗಳನ್ನು ರೆಡ್ ಜೋನ್ ನಲ್ಲಿರಿಸಲು ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ.