ಹೊಸ ರೂಪಾಂತರಿ ಕೊರೊನಾ ಅಪಾಯಕಾರಿಯಂತ ಹೇಳಿದ್ದಾರೆ ಏಮ್ಸ್ ನಿರ್ದೇಶಕ ಡಾ. ರಣದೀಪ್!!

ನವದೆಹಲಿ: ಹೊಸ ರೂಪಾಂತರಿ ಕೊರೊನಾ ತಳಿ ಅಪಾಯಕಾರಿಯಾಗುವ ಸಾಧ್ಯತೆ ಇದೆ ಎಂದು ದೆಹಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್) ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದ ಐದು ರಾಜ್ಯಗಳಲ್ಲಿ ಕೊರೊನಾ ಸಾಂಕ್ರಾಮಿಕ ಪ್ರಕರಣಗಳು ದಿಢೀರ್ ಹೆಚ್ಚಳಗೊಳ್ಳುತ್ತಿದ್ದು, ಹೊಸ ರೂಪಾಂತರಿ ಕೊರೊನಾ ತಳಿ, ಪ್ರತಿಕಾಯ ಅಭಿವೃದ್ಧಿಗೊಂಡ ಜನರಲ್ಲಿ ಮತ್ತೆ ಸೋಂಕು ಉಂಟುಮಾಡಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ, ಛತ್ತೀಸ್ ಗಢ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಕಳೆದ ಕೆಲವು ದಿನಗಳಿಂದ ಹೆಚ್ಚಳಗೊಳ್ಳುತ್ತಿರುವುದಕ್ಕೆ ಎಂದು ಡಾ.ಗುಲೇರಿಯಾ ಕಳವಳ ವ್ಯಕ್ತಪಡಿಸಿದ್ದಾರೆ.

ಹೊಸ ತಳಿಯ ಕೊರೋನಾ ವೈರಸ್, ಪ್ರತಿಕಾಯಗಳನ್ನೂ ಮೀರಿ ಸೋಂಕು ಉಂಟುಮಾಡುವ ಸಾಮರ್ಥ್ಯ ಹೊಂದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Exit mobile version