ಲಕ್ನೋ: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ದುರಂತ ಘಟನೆಗಳು ಇನ್ನೂ ನಿಂತಿಲ್ಲ.

ಎರಡು ಟ್ರಕ್ ಗಳು ಮುಖಾ ಮುಖಿ ಡಿಕ್ಕಿಯಾದ ಹಿನ್ನೆಲೆಯಲ್ಲಿ 23 ವಲಸೆ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಔರೈಯಾ ಬಳಿ ನಡೆದಿದೆ.

ರಾಜಸ್ತಾನದಿಂದ ಉತ್ತರ ಪ್ರದೇಶದಲ್ಲಿರುವ ತಮ್ಮ ನಿವಾಸಗಳಿಗೆ ವಲಸೆ ಕಾರ್ಮಿಕರು ಟ್ರಕ್ ನಲ್ಲಿ ತೆರಳುತ್ತಿದ್ದರು.

ಮುಂಜಾನೆ ಸುಮಾರು 3.30 ರ ವೇಳೆಗೆ ಅಪಘಾತ ಸಂಭವಿಸಿದ್ದು, 23 ಜನ ಸಾವನ್ನಪ್ಪಿ, ಸುಮಾರು 15ರಿಂದ 20 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರೆಲ್ಲಾ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಮೂಲದವರೆಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You May Also Like

ದೇಶದಲ್ಲಿ 7 ಸಾವಿರದಷ್ಟು ರೂಪಾಂತರ ಕೊರೊನಾ ವೈರಸ್

ದೇಶದಲ್ಲಿ ಕೊರೊನಾ ವೈರಸ್‌ನ 7 ಸಾವಿರಕ್ಕೂ ಹೆಚ್ಚು ರೂಪಾಂತರಗಳು ಇರುವ ಸಾಧ್ಯತೆ ಇದ್ದು, ಈ ಪೈಕಿ ಕೆಲವು ಗಂಭೀರ ಅಪಾಯ ಉಂಟುಮಾಡಬಹುದು ಎಂದು ಹಿರಿಯ ವಿಜ್ಞಾನಿ ರಾಕೇಶ್ ಮಿಶ್ರಾ ಹೇಳಿದ್ದಾರೆ.

ಗಜೇಂದ್ರಗಡ : ಚಿಕ್ಕಪ್ಪನ ಅಂತ್ಯಕ್ರಿಯೆ ವೇಳೆ ಹೃದಯಾಘಾತದಿಂದ ಮಗ ಸಾವು

ಸ್ಮಶಾನದಲ್ಲಿ ಅಂತ್ಯಕ್ರಿಯೇಯ ತಯಾರಿ ನಡೆದಿತ್ತು. ಇನ್ನೇನು ಕೆಲ ಕ್ಷಣದಲ್ಲಿ ಅಂತ್ಯಕ್ರಿಯೇ ನಡೆಯಬೇಕಿತ್ತು. ಆದರೆ ಅಲ್ಲಿ ನಡೆದಿದ್ದೆ ಬೇರೆ. ವೃದ್ಧ ಅಡಿವೆಪ್ಪ ಮೇಟಿ ಸಾವಿನಿಂದ ಅಂತ್ಯಕ್ರಿಯೇಯ ತಯಾರಿ ನಡೆದಿತ್ತು. ಸ್ಮಶಾನದಲ್ಲಿ ಇನ್ನೇನು ಅಂತಿಮ ವಿಧಿವಿಧಾನಗಳು ನಡೆದಿದ್ದವು. ಆದರೆ ಆ ವೇಳೆ ಚಿಕ್ಕಪ್ಪನ ಅಂತ್ಯಕ್ರಿಯೇಗೆ ಬಂದಿದ್ದ ಮಗ ಹೃದಯಾಗಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಮೂಲಕ ಮೊದಲೇ ಶೋಕದಲ್ಲಿ ಮುಳಗಿದ ಕುಟುಂಬಕ್ಕೆ ಮತ್ತೊಂದು ಶೋಕ ಆವರಿಸಿದೆ.

ಕೊರೊನಾ ಮುಕ್ತಿ ಹೊಂದುವ ಕಾಲ ಬರಲಿದೆ…ಹೀಗಂತ ಈ ವೈದ್ಯ ಹೇಳಿದ್ದೇಕೆ?

ದುಬೈ : ಆಗತಾನೆ ಹುಟ್ಟಿದ ಮಗು ವೈದ್ಯರ ಮುಖದಲ್ಲಿದ್ದ ಮಾಸ್ಕ್ ಕಿತ್ತು ಹಾಕಿದೆ. ಈ ಫೋಟೋ ಸೆರೆ ಹಿಡಿದ ವೈದ್ಯರು, ಇನ್ನೇನು ಕೆಲವೇ ದಿನಗಳಲ್ಲಿ ಕೊರೊನಾ ತೊಲಗುವ ಸಂದೇಶ ಇದು ಎಂದು ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.