ಎಂತೆಂಥ ಚಿತ್ರವಿಚಿತ್ರ ಘಟನೆಗಳು ನಮ್ ನಡುವ ನಡೆದಿರ್ತಾವು. ಇಂಥದ್ದ ಒಂದು ವಿಚಿತ್ರ ಘಟನೆ ನಡೆದೈತಿ ನೋಡ್ರಿ.

ಪಾಪ ಪತಿರಾಯ ಲೈವ್ ಮಿಟಿಂಗ್ ನ್ಯಾಗಿದ್ದಾಗ ಹೆಂಡತಿ ಮುಂದು ಮುತ್ತಕೊಟ್ ಘಟನಾ ಸೋಶಿಯಲ್ ಮಿಡಿಯಾದಾಗ ವೈರಲ್ ಆಗೈತಿ ನೋಡ್ರಿ.

ಕೊರೊನಾದ ಇಂಥ ವ್ಯಾಳೆದಾಗ ಇಂಥ ಒಂದಲ್ಲಾ ಒಂದು ಚಿತ್ರ-ವಿಚಿತ್ರ ಘಟನೆಗಳು ನಡೆದಾವು. ಇಂಥ ಅವಾಂತರದಿಂದ ಭಾಳ್ ಮಂದಿ ಪೇಚಿಗೆ ಸಿಕ್ ಘಟನಾ ನಡದಾವು.

ಇಂಥ ವಿಡಿಯೋಗಳು ಮಂದಿ ಕೈಯಾಗ್ ಸಿಕ್ರ ಕೇಳ್ತಿರೇನು? ಮುಗಿತು ಅವ್ರ ಕಥಿ.

ಗಂಡ ಜೂಮ್‌ ಕಾಲ್‌ನಲ್ಲಿದ್ದಾಗನಾ ಹೆಂಡತಿ ಮುತ್ತು ಕೊಡಾಕ ಹೋಗ್ಯಾಳ.

ವ್ಯಕ್ತಿಯೊಬ್ರು ಜೂಮ್‌ ಕಾಲ್‌ನಲ್ಲಿ ಜಿಡಿಪಿ ಬಗ್ಗೆ ಚರ್ಚೆ ನಡೆಸಿದ್ರಂತ. ಈ ವೇಳ್ಯಾದಾಗ ಅವರ ಹೆಂಡತಿ ಸಮೀಪಕ್ ಬಂದು ಮುತ್ತು ಕೊಡಾಕ ಪ್ರಯತ್ನ ಮಾಡಿದ್ರು.

ತಕ್ಷಣಕ್ ದಿಗಲ್ ಬಿದ್ದಂಗಾದ ಪಾಪ ಪತಿರಾಯ ಏನ್ ಮಾಡಬೇಕ್ರಿ ಹೇಳ್ರಿ?

ಆದ್ರೂ ಹ್ಯಾಂಗೋ ಮಾಡಿ ಆ ಕ್ಷಣಕ್ಕ ಎಚ್ಚೆತ್ ಕೊಂಡ ಗಂಡ ಏನು ದಡ್ಡಿಯಂಗ ಮಾಡಾಕತ್ತಿ. ಕ್ಯಾಮೆರಾ ಚಾಲೂನಾ ಐತಿ ಅಂತ ಗಂಡ ಹೇಳಿದ್ ಕೂಡ್ಲೆ, ಹೆಂಡತಿ ಸರಕ್ ಅಂತ ಹಿಂದ್ ಸರಿದಾರ. ಈ ಎಲ್ಲ ವಿಚಾರ ವಿಡಿಯೋದಾಗ ರಿಕಾರ್ಡ್ ಆಗೈತಿ.

ಈ ಘಟನಾ ಬಗ್ಗೆ ಆನಂದ್‌ ಮಹೀಂದ್ರಾ ಅವ್ರು ಈ ಹೆಣ್ಮಗಳಿಗೆ ವರ್ಷದ ಮಡದಿ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡ್ತಿನಿ. ಒಂದು ವ್ಯಾಳೆ, ಗಂಡ ಹೆದರಲಾರ್ದಂಹ ಒಪ್ಪಿಗಿ ಕೊಟ್ರ, ಖಂಡಿತವಾಗಿಯೂ ವರ್ಷದ ದಂಪತಿ ಪ್ರಶಸ್ತಿಗೆ ಸೂಚಿಸುತ್ತಿದ್ದೆ ಅಂತ ಬರಕೊಂಡಾರ.

ಇನ್ನು ಸೋಶಿಯಲ್ ಮಿಡಿಯಾದಾಗ ಸಾಕಷ್ಟು ಮಂದಿ ಪ್ರತಿಕ್ರಿಯೇ ಕೊಟ್ಟಾರ.

ಗಂಡ ಅಷ್ಟ ಸಿಟ್ ನಿಂದ ಬೈದ್ರು, ಹೆಂಡತಿ ಧೈರ್ಯ ಕಳೆದುಕೊಳ್ದ ನಿಧಾನವಾಗಿ ಹಿಂದಕ್ಕ್ ಸರಿದು ತಮ್ಮ ಮಾನಸಿಕ ಸ್ಥೈರ್ಯ ಪ್ರದರ್ಶಿಸಿದ್ರು ಅನ್ನೋ ಕುರಿತು ಬರದಾರ.

Leave a Reply

Your email address will not be published. Required fields are marked *

You May Also Like

ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ!: 50 ಕ್ಕೂ ಹೆಚ್ಚು ಜನ ಮೃತ

ಇರಾಕ್: ಕೋವಿಡ್ ಆಸ್ಪತ್ರೆ ಒಂದರಲ್ಲಿ ಅಗ್ನಿ ದುರಂತ ಸಂಭವಿಸಿದ ಘಟನೆ ಇರಾಕ್​ನ ನಾಸಿರಿಯಾ ನಗರದಲ್ಲಿ ನಡೆದಿದೆ. ಘಟನೆಯಲ್ಲಿ 50 ಕ್ಕೂ ಹೆಚ್ಚು ಜನ ಸಾವೀಗಿಡಾಗಿದ್ದಾರೆ ಎನ್ನಲಾಗಿದೆ.

ದ್ರೌಪದಿ’ ಸುಭದ್ರಮ್ಮ ಮನ್ಸೂರ್ ಅಸ್ತಂಗತ

ದ್ರೌಪದಿ ಮತ್ತು ಹೇಮರಡ್ಡಿ ಮಲ್ಲಮ್ಮ ಪಾತ್ರಗಳ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದ ಹಿರಿಯ ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರ್ ಬುಧವಾರ ರಾತ್ರಿ 11.30ಕ್ಕೆ ಬಳ್ಳಾರಿಯಲ್ಲಿ ಕೊನೆಯುಸಿರು ಎಳೆದಿದ್ದಾರೆ.

ಸದ್ದಿಲ್ಲದೆ ಸಾಗುತ್ತಿದೆ ಶೈಕ್ಷಣಿಕ ಮತ್ತು ಸಾಮಾಜಿಕ ಕ್ರಾಂತಿ:ಸಾವಿತ್ರಿ ಬಾಯಿ ಫುಲೆ” ಕಲಿಕಾ ಕೇಂದ್ರ

ಕೋರೊನಾ ಈ ಹೆಸರಿನ ಮಹಾಮಾರಿ ಯಾರಿಗೆ ಗೊತ್ತಿಲ್ಲ ದೇಶದಲ್ಲಿ ಈ ಮಹಾಮಾರಿಯಿಂದ ಆರ್ಥಿಕವಾಗಿ ಸಾಮಾಜಿಕವಾಗಿ ಸಂಪ್ರದಾಯಿಕವಾಗಿ…

ಹಠಯೋಗಿ ಶ್ರೀ ಕೋಡಿಕೊಪ್ಪದ ಹುಚ್ಚೀರಪ್ಪಜ್ಜನವರು

ಕನ್ನಡ ನಾಡಿನ ಪುಣ್ಯವೋ ಏನೋ ಅನೇಕ ಜನ ತಪಸ್ವಿಗಳು, ಯೋಗಿಗಳು, ಶರಣರು, ಸಿದ್ಧರು, ಹಠಯೋಗಿಗಳು ಮೊದಲಾದ ಮಹಾಮಹಿಮರು ಉದಯಿಸಿ