ದೆಹಲಿ: ಕಳೆದ ಎರಡು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ಮತ್ತೆ ಭಾರೀ ಇಳಿಕೆಯಾಗಿದ್ದು, ಚಿನ್ನ ಕೊಳ್ಳುವವರು ನಿಟ್ಟುಸಿರು ಬಿಡುವಂತಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆಯಾಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು 47,180 ರೂ. ಆಗಿದೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ ಇಂದು 43,250 ರೂ. ಆಗಿದೆ. ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದ್ದು, ನಿನ್ನೆ 67 ಸಾವಿರವಿದ್ದ ಬೆಳ್ಳಿ ಬೆಲೆ ಇಂದು 69 ಸಾವಿರಕ್ಕೆ ಏರಿಕೆಯಾಗಿದೆ. ಭಾರತದಲ್ಲಿ 2 ದಿನಗಳ ಹಿಂದೆ 46,400 ರೂ. ಇದ್ದ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಇಂದು 45,130 ರೂ.ಗೆ ಇಳಿಕೆಯಾಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 48,020 ರೂ. ಇದ್ದುದು ಇಂದು 46,130 ರೂ. ಆಗಿದೆ. ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 47,180 ರೂ. ಆಗಿದೆ. ಹಾಗೇ, 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ ಇಂದು 43,250 ರೂ. ಆಗಿದೆ. ಮೈಸೂರು, ವಿಶಾಖಪಟ್ಟಣಂ, ಮಂಗಳೂರು, ವಿಜಯವಾಡ, ಮುಂಬೈ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಹೆಚ್ಚೂ ಕಡಿಮೆ ಇದೇ ಬೆಲೆಯಿದೆ.

ಬೇರೆಲ್ಲ ನಗರಗಳಿಗೆ ಹೋಲಿಸಿದರೆ ಚೆನ್ನೈ, ದೆಹಲಿ, ಕೊಲ್ಕತ್ತಾ, ಲಕ್ನೋ, ಕೊಯಮತ್ತೂರು, ಮಧುರೈ, ಜೈಪುರ, ಅಹಮದಾಬಾದ್, ಚಂಡೀಗಢದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆಯಾಗಿದೆ. ಈ ನಗರಗಳಲ್ಲಿ ಚಿನ್ನದ ಬೆಲೆ 49,000 ರೂ. ದಾಟಿದೆ.

ಬೆಳ್ಳೆ ಬೆಲೆ ಏರಿಕೆ:

ಬೆಳ್ಳಿ ಬೆಲೆ ಮತ್ತೆ ಏರಿಕೆಯಾಗಿದ್ದು, ನಿನ್ನೆ 67 ಸಾವಿರವಿದ್ದ ಬೆಳ್ಳಿ ಬೆಲೆ ಇಂದು 1 ಕೆಜಿಗೆ 69,000 ರೂ. ಆಗಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದ್ದು, ಇಂದು 68,700 ರೂ. ಆಗಿದೆ. ಉಳಿದಂತೆ ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಭುವನೇಶ್ವರ, ಮಧುರೈ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ 73,000 ರೂ. ದಾಟಿದೆ.

ಕೊರೋನಾ ವೈರಸ್ ಹರಡುವಿಕೆ ಹೆಚ್ಚಾದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್ ಎಸ್ಟೇಟ್ ಸೇರಿ ಸಾಕಷ್ಟು ಉದ್ಯಮಗಳು ನೆಲ ಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಲಾಕ್ಡೌನ್ ತೆರವಾಗುತ್ತಿದ್ದಂತೆ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ.

Leave a Reply

Your email address will not be published. Required fields are marked *

You May Also Like

ಸತ್ತಲ್ಲಿ 20 ಜನರಿರಬೇಕು…ಮದ್ಯಕ್ಕೆ ಮಾತ್ರ ಸಾವಿರ ಜನರಿದ್ದರೂ ಸೈ!!

ಅಂತ್ಯ ಸಂಸ್ಕಾರಕ್ಕೆ 20 ಜನರ ಸೇರುವಂತಿಲ್ಲ. ಆದರೆ, ಮದ್ಯದಂಗಡಿಯ ಮುಂದೆ 1 ಸಾವಿರ ಜನರು ನಿಲ್ಲಬಹುದೇ ಎಂದು ಕೇಂದ್ರ ಸರ್ಕಾರದ ವಿರುದ್ಧ ಶಿವಸೇನೆ ಟೀಕೆ ಮಾಡಿದೆ.

ರೈತರ ವಿರುದ್ಧ ನಿಂತಿದೆ “ನಾಗ” ಕಂಪನಿ: ಶ್ರೀ ಹರ್ಷಾನಂದ್ ಜಿ. ಮಹಾರಾಜ್

ರೈತರ ವಿರುದ್ಧ ‘ನಾಗ’ಎಂಬ ಕಂಪನಿ ನಿಂತಿದೆ. ನಾಗ ಎಂದರೆ“ನರೇಂದ್ರ, ಅಮಿತ್‌, ಗೌತಮ್‌, ಅದಾನಿ’ ಹೀಗೆ ಹೇಳಿದ್ದು ಯೋಗ ದರ್ಶನ ಪಾರಮಾರ್ಥಿಕ ಟ್ರಸ್ಟ್‌ ಸಂಸ್ಥಾಪಕ ಶ್ರೀ ಹರ್ಷಾನಂದಜಿ ಮಹಾರಾಜ್‌.

ಕೋವಿಡ್ ಚಿಕಿತ್ಸೆಗೆ ₹5 ಲಕ್ಷದವರೆಗೆ ಸಾಲ: ಸಾರ್ವಜನಿಕ ವಲಯದ ಬ್ಯಾಂಕುಗಳು ಘೋಷಣೆ

ಕೋವಿಡ್ ಎರಡನೇ ಅಲೆ ದೇಶಾದ್ಯಂತ ಹೆಚ್ಚು ವ್ಯಾಪಿಸಿ ಸಂದಿಗ್ಧ ಪರಿಸ್ಥಿತಿ ಉಂಟು ಮಾಡಿದ್ದು, ಇದರಿಂದ ಅಸುರಕ್ಷಿತ ಸಾಲ ನೀಡುಲು ನಿರ್ಧಾರ ಮಾಡಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕುಗಳ ಸಂಘ (ಐಬಿಎ) ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿವೆ

ಮೇ. 17ರ ನಂತರ ಲಾಕ್ ಡೌನ್ ಸ್ಥಿತಿ ಹೇಗಿರಲಿದೆ?

ಬೆಂಗಳೂರು: ಮೂರನೇ ಹಂತದ ಲಾಕ್ ಡೌನ್ ಮುಗಿಯಲು ಇನ್ನೂ 7 ದಿನಗಳು ಬಾಕಿ ಇವೆ. ಈ…