ಮೈಸೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಜನರು ದೇಣಿಗೆ ನೀಡುತ್ತಿದ್ದಾರೆ ಅದು ಬಿಜೆಪಿಗಾಗಿ ಅಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ‌ ಅವರು ರಾಮಮಂದಿರ ನಿರಗಮಾಣಕ್ಕೆ ಸಾರ್ವಜನಿಕರು ಹಣ ನೀಡುವ ಸಂಬಂಧ ಲೆಕ್ಕ ಕೇಳುವ ಅಧಿಕಾರ ನನಗೆ ಇದೆ. ನಾನು ಈ ದೇಶದ ಪ್ರಜೆ. ನಾನು ದುಡ್ಡು ಕೊಡಲಿ ಬಿಡಲಿ ಲೆಕ್ಕ ಕೊಡಬೇಕಾಗಿರುವುದು ಅವರ ಕೆಲಸ. ಕೇಳುವುದು ನಮ್ಮ ಹಕ್ಕು. ಲೆಕ್ಕೆ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದರೆ ಅದರ ಅರ್ಥ ಹಣ ದುರುಪಯೋಗವಾಗುತ್ತಿದೆ.ಈ ಹಿಂದೆಯೂ ಇವರು ದೇಣಿಗೆ ಸಂಗ್ರಹಿಸಿ ಲೆಕ್ಕ ಕೊಟ್ಟಿಲ್ಲ. ಇದರ ಅರ್ಥ ಏನು ಅವರೇ ಹೇಳಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ವಿಚಾರವಾಗಿ ಪ್ರತಿಕ್ರಿಸಿದ ಸಿದ್ದರಾಮಯ್ಯ, ಕೊರೊನಾ ವಿಚಾರದಲ್ಲೂ ಭ್ರಷ್ಟಾಚಾರ ಮಾಡಲು ಕಾಯುತ್ತಿರುವಂತಿದೆ. ಭ್ರಷ್ಟಾಚಾರವೇ ಇವರ ಕೆಲಸ. ಎಲ್ಲಿ ಕೆಲಸ ಇದೆಯೋ ಅಲ್ಲಿ ದುಡ್ಡು ಹೊಡೆಯುತ್ತಾರೆ. ಕೊರೊನಾ ಮೊದಲ ಅಲೆಯಲ್ಲೂ ಭ್ರಷ್ಟಾಚಾರ ಮಾಡಿದ್ದರು. ಇದನ್ನು ನಾನು ವಿಧಾನಸಭೆಯಲ್ಲೇ ಹೇಳಿದ್ದೇನೆ. ಈಗಲೂ ಅದೇ ನಡೆಯುತ್ತದೆ. ಈ ಸರ್ಕಾರ ಯಾವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಎರಡನೇ ಅಲೆ ಗಂಭೀರವಾಗಿ ಪರಿಗಣಿಸಬೇಕು. ಕೇರಳ ಇರಲಿ, ಆಫ್ರಿಕಾದಿಂದಲೇ ಬರಲಿ ಅಗತ್ಯ ಮುಂಜಾಗ್ರತೆ ವಹಿಸಿ ಎಂದು ಸಲಹೆ ನೀಡಿದರು.

ನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ. ಜನರು ಇದಕ್ಕೆ ವಂತಿಗೆ ನೀಡುತ್ತಿದ್ದಾರೆ. ಎಷ್ಟು ವೆಚ್ಚ ಎನ್ನುವುದರ ಬಗ್ಗೆ ಹೇಳಲು ಸಾಧ್ಯವಿಲ್ಲ. ರಾಮ ಜನರ ಧಾರ್ಮಿಕ ನಂಬಿಕೆ. ಎಲ್ಲಾ ಕಡೆ ರಾಮ ಮಂದಿರ ಕಟ್ಟುತ್ತಾರೆ. ಅದರಲ್ಲೇನಿದೆ?ದೇವರು ಅನ್ನೋದು ಜನರಿಗೆ ಭಯ ಭಕ್ತಿಯ ಸಂಕೇತ. ಇದನ್ನು ಅವರು ರಾಜಕಾರಣಕ್ಕೆ ಬಳಸುತ್ತಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್ ಮೇಲೆ ಯಾವ ನಿರೀಕ್ಷೆಯೂ ಇಲ್ಲ. ಕಾರಣ ಇವರ ಬಳಿ ಹಣವೇ ಇಲ್ಲ ಎಂದು ಕುಟುಕಿದ ಮಾಜಿ ಸಿಎಂ ಸಿದ್ದರಾಮಯ್ಯ ,ನಾನು ಕೇಳಿದ ಪ್ರಶ್ನೆಗಳಿಗೆ ಸಿಎಂ ಯಡಿಯೂರಪ್ಪ ಇನ್ನು ಉತ್ತರ ಕೊಟ್ಟಿಲ್ಲ. ಇನ್ನು ಬಜೆಟ್‌ನಲ್ಲಿ ಏನು ಉತ್ತರ ಕೊಡುತ್ತಾರೆ. ಪ್ರಶ್ನೆ ಕೇಳಿದರೆ ಬರೆದುಕೊಂಡು ಬಂದು ಉತ್ತರ ಕೊಡುತ್ತಾರೆ. ಇವರಿಂದ ಯಾವುದೇ ನಿರೀಕ್ಷೆ ಇಲ್ಲ ಎಂದು ಟಿಕಿಸಿದರು.

ಜೊತೆಗೆ ಸಚಿವ ಉಮೇಶ್ ಕತ್ತಿ ಅವರ ಬಿಪಿಎಲ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಇದು ಕತ್ತಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದರು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಮತ್ತೆ 9 ಕೊರೋನಾ ಪಾಸಿಟಿವ್

ರಾಜ್ಯದಲ್ಲಿ ಮತ್ತೆ 9 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ.

ಕೆ. ಎಚ್. ಪಾಟೀಲ ಫುಟಬಾಲ್ ಲೀಗ್-2022 ಉದ್ಘಾಟನೆ

ಉತ್ತರಪ್ರಭ ಸುದ್ದಿ ಗದಗ: ಕರ್ನಾಟಕ ಸ್ಫೋರ್ಟ್ಸ್ ಆ್ಯಂಡ್ ಎಜ್ಯುಕೇಶನ್ ಅಕ್ಯಾಡೆಮಿ ಗದಗ ಇವರ ವತಿಯಿಂದ ಕೆ.…

ಮುಳಗುಂದ ಅರ್ಬನ್ ಬ್ಯಾಂಕ ಚುನಾವಣೆ 7 ನಾಮಪತ್ರ ಸಲ್ಲಿಕೆ

ಮುಳಗುಂದ : ಇಲ್ಲಿನ ದಿ.ಮುಳಗುಂದ ಅರ್ಬನ್ ಸೌಹಾರ್ದ ಕೋ-ಆಪ್ ಬ್ಯಾಂಕನ ನಿರ್ದೇಶಕ ಮಂಡಳಿಯ 2 ಸ್ಥಾನಗಳಿಗೆ…

ಸರ್ಕಾರಿ ವಿವಿಗಳ ತಾತ್ಕಾಲಿಕ- ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಕುರಿತ ವಿಚಾರ ಸಂಕಿರಣ

ಕರ್ನಾಟಕದ ಸರ್ಕಾರೀ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ, ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಮತ್ತು ವೇತನ ತಾರತಮ್ಯ ಸರಿಪಡಿಸಲು ಒತ್ತಾಯಿಸಿ ರಾಜ್ಯಮಟ್ಟದ ವಿಚಾರ ಸಂಕಿರಣ (ವೆಬಿನಾರ್) ಅನ್ನು 2020 ಆಗಸ್ಟ್ 19 ರಂದು ಬುಧವಾರ ಮಧ್ಯಾಹ್ನ 2.30 ಕ್ಕೆ (ಸಾಮಾಜಿಕ ಜಾಲತಾಣದ ಮೂಲಕ) ಆಯೋಜಿಸಲಾಗಿದೆ.