ಬೆಂಗಳೂರು: ಕೋವಿಡ್ ನಂತರ ರಾಜ್ಯದಲ್ಲಿ ಫೆ.22 ರಿಂದ 6 ರಿಂದ 8ನೇ ತರಗತಿಯ ಪೂರ್ಣಾವಧಿ ಶಾಲೆ ಪ್ರಾರಂಭ ಮತ್ತು ವಿದ್ಯಾಗಮ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಇಲಾಖೆಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ತಿರ್ಮಾನಿಸಲಾಗಿದೆ.

ಬೆಂಗಳೂರು ನಗರ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾಗೂ ಕೇರಳ ರಾಜ್ಯದ ಗಡಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ 6 ರಿಂದ 7ನೇ ತರಗತಿಗೆ ವಿದ್ಯಾಗಮ ಕಾರ್ಯಕ್ರಮವನ್ನು ನಡೆಸಲಿದ್ದು, 8ನೇ ತರಗತಿಗೆ ಪೂರ್ಣಾವಧಿ ತರಗತಿಯನ್ನು ಪ್ರಾರಂಭಿಸಲಾಗುವುದು. ಕೇರಳ ರಾಜ್ಯದ ಗಡಿ ಹೊಂದಿಕೊಂಡ ಜಿಲ್ಲೆಗಳ ಜಿಲ್ಲಾಡಳಿತಗಳು ಗಡಿ ಹೊಂದಿಕೊಂಡಿರುವ ಪ್ರದೇಶಗಳನ್ನು (ನಗರ, ಗ್ರಾಮ, ವಲಯ) ಗುರುತಿಸಿ ತೀರ್ಮಾನಿಸುವುದು. ರಾಜ್ಯದಲ್ಲಿನ ಆಯ್ದ ಶಾಲೆಗಳಲ್ಲಿ ಮತ್ತು ಹಾಸ್ಟೆಲ್‌ಗಳಲ್ಲಿ ಕ್ಯಾಂಡಮ್‌ಆಗಿ ವಿದ್ಯಾರ್ಥಿ, ಶಿಕ್ಷಕರ ಮತ್ತು ಸಿಬ್ಬಂದಿಗಳ ಕೋವಿಡ್ ಪರೀಕ್ಷೆಗಳನ್ನು ಆರೋಗ್ಯ ಇಲಾಖೆಯಿಂದ ನಡೆಸಲು ಕ್ರಮವಹಿಸಿದೆ. ಕೇರಳ ರಾಜ್ಯದಿಂದ ಬರುವ ಮಕ್ಕಳು, ಶಿಕ್ಷಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. 6 ರಿಂದ 8ನೇ ತರಗತಿಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳು ಮನೆಯಿಂದಲೇ ಮಧ್ಯಾಹ್ನದ ಊಟ-ಉಪಹಾರ ತರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದೆ.
ಪ್ರೌಢ ಶಾಲೆಗಳಲ್ಲಿ 8ನೇ ತರಗತಿಯಿಂದ 10ನೇ ತರಗತಿ ವರೆಗೆ ತರಗತಿಗಳು ಪ್ರಾರಂಭಿಸಲು ವೇಳಾಪಟ್ಟಿ ಸಿದ್ಧ ಮಾಡಿದ್ದು, ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 10 ರಿಂದ 4.30ರ ವರೆಗೆ ಸನಿವಾರ ಬೆಳಗ್ಗೆ 10 ರಿಂದ ಮದ್ಯಾಹ್ನ 12.30ರ ವರೆಗೆ ಪೂರ್ಣಾವಧಿ ತರಗತಿ ಪ್ರಾಂಭವಾಗಲಿವೆ. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 6 ರಿಂದ 8ನೇ ತರಗತಿ ವರೆಗೆ (ಬೆಂಗಳೂರು ನಗರ ಬಿಬಿಎಂಪಿ ವ್ಯಾಪ್ತಿ ಮತ್ತು ಕೇರಳ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡ ಪ್ರದೇಶಗಳು ಹೊರತುಪಡಿಸಿ) ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 10 ರಿಂದ 4.30ರ ವರೆಗೆ ಹಾಗೂ ಶನಿವಾರ ಬೆಳಗ್ಗೆ 10 ರಿಂದ 12.30ರ ವರೆಗೆ ಶಾಲಾ ತರಗತಿಗಳನ್ನು ಪ್ರಾರಂಭಿಸಲು ಮುಂದಾಗಿದೆ.

ಶಾಲಾರಂಭದ ವೇಳಾಪಟ್ಟಿ

ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 6ನೇ ತರಗತಿಯಿಂದ 8ನೇ ತರಗತಿ ವರೆಗೆ ಪ್ರಾರಂಭಿಸಲಿದ್ದು, ಸೋಮವಾರ 8ನೇ ತರಗತಿ ಬೆಳಗ್ಗೆ 10 ರಿಂದ 4.30ರ ವರೆಗೆ ಹಾಗೂ 6ನೇ ತರಗತಿ ಬೆಳಗ್ಗೆ 10 ರಿಂದ ಮದ್ಯಾಹ್ನ 4.30ರ ವರೆಗೆ ವಿದ್ಯಾಗಮ ನಡೆಲಿದೆ. ಮಂಗಳವಾರ 8ನೇ ತರಗತಿಯನ್ನು ಬೆಳಗ್ಗೆ 10 ರಿಂದ 4.30ರ ವರೆಗೆ ಮತ್ತು 7ನೇ ತರಗತಿ ಬೆಳಗ್ಗೆ 10 ರಿಂದ ಮದ್ಯಾಹ್ನ 12.30ರ ವರೆಗೆ ವಿದ್ಯಾಗಮ ನಡೆಯಲಿವೆ. ಬುಧವಾರ 8ನೇ ತರಗತಿಯನ್ನು ಬೆಳಗ್ಗೆ 10 ರಿಂದ ಮದ್ಯಾಹ್ನ 4.30ರ ವರೆಗೆ ಮತ್ತು 6ನೇ ತರಗತಿಯನ್ನು ಬೆಳಗ್ಗೆ 10 ರಿಂದ ಮದ್ಯಾಹ್ನ 12.30ರ ವರೆಗೆ ವಿದ್ಯಾಗಮ ನಡೆಸಲಾಗುವುದು. ಗುರುವಾರ 8ನೇ ತರಗತಿಯನ್ನು ಬೆಳಗ್ಗೆ 10 ರಿಂದ ಮದ್ಯಾಹ್ನ 4.30ರ ನಡೆಸಲಿದ್ದು, 7ನೇ ತರಗತಿಯನ್ನು ಬೆಳಗ್ಗೆ 10 ರಿಂದ ಮದ್ಯಾಹ್ನ 12.30ರ ವರೆಗೆ ವಿದ್ಯಾಗಮ ನಡೆಸಲಾಗುವುದು. ಶುಕ್ರವಾರ 8ನೇ ತರಗತಿ ಬೆಳಗ್ಗೆ 10 ರಿಂದ ಮದ್ಯಾಹ್ನ 4.30ರ ವರೆಗೆ, 6ನೇ ತರಗತಿಗೆ ಬೆಳಗ್ಗೆ 10 ರಿಂದ ಮದ್ಯಾಹ್ನ 12.30ರ ವರೆಗೆ ವಿದ್ಯಾಗಮ ನಡೆಸಲಾಗುವುದು. ಶನಿವಾರ 8ನೇ ತರಗತಿ ಮತ್ತು 7ನೇ ತರಗತಿಗೆ ವಿದ್ಯಾಗಮವನ್ನು ಬೆಳಗ್ಗೆ 10 ರಿಂದ 12.30ರ ವರೆಗೆ ನಡೆಸಲಿದೆ.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಅಲ್ಪ ಸಂಖ್ಯಾತರ ಇಲಾಖೆಗಳಿಂದ ನಡೆಯುತ್ತಿರುವ ವಸತಿ ನಿಲಯಗಳು ಹಾಗೂ ಇತರೆ ವಸತಿ ನಿಲಯಗಳು ಈ ತರಗತಿ ಮಕ್ಕಳ ಪಾಲನೆಗಾಗಿ ಆರೋಗ್ಯ ಇಲಾಖೆ ನಿಗಧಿಪಡಿಸಿರುವ ಎಸ್.ಓ.ಪಿ ಯನ್ನು ಅನುಸರಿಸಿ ಪ್ರಾರಂಭ ಮಾಡುವುದು. ಸಾರಿಗೆ ಇಲಾಖೆಯು ವಿವಿಧ ಸಾರಿಗೆ ನಿಗಮಗಳಲ್ಲಿ ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಟ್ರಿಪ್ ಒದಗಿಸಲು ಅವಶ್ಯ ಕ್ರಮವಹಿಸುವುದು. ಮಕ್ಕಳು ಶಾಲೆಗೆ ಮತ್ತು ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯ ಎಂದು ತಿಳಿಸಿದ್ದಾರೆ.


ಮಗುವಿಗೆ ಯಾವುದೇ ಕೋವಿಡ್-19ರ ಸೋಂಕಿನ ಲಕ್ಷಣಗಳಿರುವುದಿಲ್ಲ ಎಂಬುದನ್ನು ಅನುಮತಿ ಪತ್ರದಲ್ಲಿ ದೃಢೀಕರಿಸಬೇಕು. ಶಾಲೆಗೆ ಹಾಜರಾಗಲು ಬಯಸದೇ ಇರುವ ವಿದ್ಯಾರ್ಥಿಗಳಿಗೆ ಈಗ ಅನುಸರಿಸುತ್ತಿರುವ ಆನ್‌ಲೈನ್ ಮತ್ತು ಇತರೆ ಪರ್ಯಾಯ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸಲು ಶಾಲಾ ಹಂತದಲ್ಲಿ ಕೊಠಡಿಗಳ ಲಭ್ಯತೆ, ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಶಿಕ್ಷಕರ ಸಂಖ್ಯೆಯನ್ನು ಆಧರಿಸಿಕೊಂಡು ಎಸ್‌ಒಪಿ ಪಾಲನೆಗೋಸ್ಕರ ವೇಳಾಪಟ್ಟಿ ಪರಿಷ್ಕರಿಸಿ ತರಗತಿ ಆರಂಭಿಸಬಹುದು. ರಾಜ್ಯದಲ್ಲಿ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದನ ರಹಿತ ಶಾಲೆಗಳಲ್ಲಿ ಅನುಷ್ಠಾನಗೊಳಿಸಲು ಉಪ ನಿರ್ದೇಶಕರು ಅಗತ್ಯ ಕ್ರಮವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ್ದ ವ್ಯಕ್ತಿಯಲ್ಲಿ ಕಂಡು ಬಂದ ಕೊರೊನಾ!

ಬೆಳಗಾವಿ: ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದ ವೃದ್ಧರೊಬ್ಬರಲ್ಲಿ ಮತ್ತೆ ಕೊರೊನಾ ವೈರಸ್ ಕಂಡು ಬಂದಿದೆ. 60…

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಅನಿವಾರ್ಯ : ಜುಲೈನಲ್ಲಿ ನಡೆಯಲಿದೆಯೇ ಪರೀಕ್ಷೆ

ದ್ವಿತೀಯ ಪಿಯು ಪರೀಕ್ಷೆ ರದ್ದು ಮಾಡಿದ ಶಿಕ್ಷಣ ಲಾಖೆ ಸಚಿವ ಸುರೇಶ್ ಕುಮಾರ ಅವರು ಜುಲೈ ತಿಂಗಳಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದಾಗಿ ಪ್ರಕಟಿಸಿದ್ದು, ಶಿಕ್ಷಣ ಇಲಾಖೆ ಈ ನಿರ್ಧಾರಕ್ಕೆ ಸರ್ಕಾರದಿಂದಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.