ಲಕ್ಷ್ಮೇಶ್ವರ: ಹುಬ್ಬಳ್ಳಿಯ ಮಾರುಸಾವಿರ ಮಠದ ವಿಚಾರವಾಗಿ ಪತ್ರಿಕೆ ಮತ್ತು ಟಿವಿಗಳಿಗೆ ಹೇಳಿಕೆ ನೀಡುವ ಹುಬ್ಬಳ್ಳಿ ಮತ್ತು ಧಾರವಾರ ಜನತೆಗೆ ಈ ಮೂಲಕ ಅರಿಕೆ ಮಾಡಿಕೊಳ್ಳುವುದೇನೆಂದರೆ ಶ್ರೀ ಜಗದ್ಗುರು ಮಾರುಸಾವಿರಮಠದ ಆಸ್ತಿ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಪಟ್ಟ ವಿಚಾರವಾಗಿ ಹೇಳಿಕೆ ನೀಡುವ ಯಾವುದೇ ವ್ಯಕ್ತಿಗಳು ನಮ್ಮೊಂದಿಗೆ ಚರ್ಚಿಸಿ ಹೇಳಿಕೆ ನೀಡಬೇಕು. ಸತ್ಯದ ಅರಿವಿಲ್ಲದೇ ಯಾರದೋ ಒತ್ತಡ ಮತ್ತು ಪ್ರಭಾವಕ್ಕೆ ಸಿಲುಕಿ ಹೇಳಿಕೆ ನೀಡುವುದರಿಂದ ಶ್ರೀಮಠ ಹಾಗೂ ಸಮಾಜ ಕಳಂಕಿತವಾಗುತ್ತದೆ ಎಂದು ಬಾಲೇಹೊಸೂರು ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಶ್ರೀಗಳು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶ್ರೀಮಠದ ಆಸ್ತಿ ಪರಭಾರೆ ಮಾಡಿದ್ದು ಕಾನೂನು ಬಾಹಿರ ಮತ್ತು ಸಮಾಜ ಬಾಹಿರವೆಂದು ನಿಖರವಾಗಿ ಹೇಳಬಯಸುತ್ತೇವೆ. ಕೆ.ಎಲ್.ಇ ಬೆಳೆಯಬೇಕೆನ್ನುವುದು ಎಷ್ಟು ಮುಖ್ಯವೋ, ಅಷ್ಟೆ ಶ್ರೀಮಠವೂ ಬೆಳೆಯಬೇಕು. ಸಾಧ್ಯವಿಲ್ಲವಾದರೆ ಉಳಿಯಬೇಕು ಎಂಬ ಹಂಬಲ ಮತ್ತು ಬೆಂಬಲ ನಮ್ಮದು.

ಕೆಎಲ್ಇ ಸಂಸ್ಥೆಯವರು ಹುಬ್ಬಳ್ಳಿಯಲ್ಲಿ ನೂರಾರು ಎಕರೆ ಭೂಮಿಯನ್ನು ಹೊಂದಿದ್ದು, ಮಠದ ಆಸ್ತಿಗೆ ಆಸೆಪಡದೇ ಮಠದವನ್ನು ವಿವಾದದ ಕೇಂದ್ರವನ್ನಾಗಿಸದೇ ನಿಮ್ಮ ಸ್ವಂತ ಭೂಮಿಯಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಮಾಡಿ ಅದಕ್ಕೆ ಡಾ.ಮುಜುಗಂ ಅವರ ಹೆಸರಿಟ್ಟು ಅಭಿಮಾನ ಮೆರೆಯಬೇಕೆಂದು ಕಳಕಳಿಯ ಮನವಿ. -ಪೂಜ್ಯ ದಿಂಗಾಲೇಶ್ವರ ಶ್ರೀಗಳು, ಬಾಲೇಹೊಸೂರು

ನಾವು ಕೆಎಲ್ಇ ವಿರುದ್ಧವಾಗಲಿ ಮತ್ತು ಅವರು ಕಟ್ಟ ಬಯಸಿದ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನ ವಿರುದ್ದವಾಗಲಿ ಇಲ್ಲ ಎಂಬುದನ್ನು ಈ ಮೂಲಕ ತಿಳಿಯಪಡಿಸುತ್ತೇವೆ. ನಮ್ಮ ವಿರುದ್ಧ ತಪ್ಪು ಸಂದೇಶಗಳನ್ನು ರವಾನಿಸುವವರು ಶ್ರೀಮಠದ ಪರಿಸ್ಥಿತಿಯ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.

ಸ್ವಾರ್ಥ ಹಾಗು ಬುದ್ದಿಗೇಡಿತನ

ಶ್ರೀಮಠದ ಆಸ್ತಿ ಉಳಿಯಬೇಕೆನ್ನುವ ನಮ್ಮ  ಹೋರಾಟ ಇಂದು ನಿನ್ನೆಯದಲ್ಲ, ದಶಕಗಳಾಚೆ ನಾಲ್ಕಾರು ವರ್ಷ ಹೋರಾಡಿದ್ದೇವೆ ಎಂಬುದನ್ನು ಅರಿಯಬೇಕು. ಮಠವನ್ನು ಉಳಿಸಬೇಕೆನ್ನುವ ನಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬಯಸುವ ನಿಮ್ಮ ನಿಲುವು ಅತೀ ಸ್ವಾರ್ಥದಿಂದಲೂ ಮತ್ತು ಬುದ್ಧಿಗೇಡಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಅಥವಾ ನಿಮ್ಮ ನಾಯಕರನ್ನು ಮೆಚ್ಚಿಸುವ ಪ್ರಯತ್ನ ಮಾತ್ರವೆಂದು ಹೇಳಬಹುದು.

ಇದಕ್ಕೂ ಮಿಕ್ಕಿ ತಮಗೆ ಇನ್ನು ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧಪಡಿಸಿರಿ, ಹುಬ್ಬಳ್ಳಿ-ಧಾರವಾಡ ಮತ್ತು ನಾಡಿನ ಭಕ್ತರ ಮದ್ಯೆ ಪ್ರತಿಯೊಂದು ವಿಚಾರಗಳನ್ನು ನಾವು ಸಾಕ್ಷ್ಯಾಧಾರ ಸಹಿತಿ ತಿಳಿಸಲು ಇದ್ಧರಿದ್ದೇವೆ. ಆ ಬಹಿರಂಗ ಸಭೆಗೆ ಶ್ರೀಪೀಠದ ಜಗದ್ಗುರುಗಳು, ಕೆಎಲ್ಇ ಸಂಸ್ಥೆಯವರು ಉನ್ನತ ಮಟ್ಟದ ಸಮಿತಿ ಸದಸ್ಯರು ಮತ್ತು ಯಾರಾದರೂ ಮಠಾಧಿಪತಿಗಳು ಬರುವಂತಿದ್ದರೆ ಬರಲಿ ಎಂದು ಹೇಳಿದ್ದಾರೆ.

ಉತ್ತರರಾಧಿಕಾರದ ಹೋರಾಟವಲ್ಲ

ಕೆಲವರು ಕೆಎಲ್ಇ ಪರವಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸಿ. ಶ್ರೀಮಠದ ಗತವೈಭವ ಮತ್ತು ಇಂದಿನ ಸ್ಥಿತಿಯನ್ನು ಗಮನಿಸಲೇಬೇಕು, ಪದೇ ಪದೇ ಇದು ಉತ್ತರಾಧಿಕಾರದ ಹೋರಾಟವಲ್ಲ. ಮಠದ ಸ್ತಿಗಳನ್ನು ಉಳಿಸುವ ಹೋರಾಟವೆಂದು ನಾವು ಹೇಳುತ್ತಾ ಬಂದಾಗಲೂ ಅದನ್ನೇ ಮರಳಿ-ಮರಳಿ ಹೇಳುತ್ತಾ ಬರುವ ನಿಮ್ಮ ಹೇಳಿಕೆಗಳು ಗಿಳಿಪಾಠವೆಂದು ಭಾವಿಸುತ್ತೇವೆ. ಶ್ರೀಮಠದ ಭಕ್ತರಲ್ಲಿ ವಿನಂತಿ ಇಂತಹ ಹೇಳಿಕೆ ನೀಡುವವರು ಶ್ರೀಮಠವನ್ನು ಅಧೋಗತಿಗೆ ತರುತ್ತಾರೆ ಎಂದು ತಿಳಿಸಬಯಸುತ್ತೇವೆ. ಇಂತಹ ಹೇಳಿಕೆಗಳಿಗಳಿಗೆ ಯಾರು ಗಮನ ಕೊಡಬಾರದೆಂದು ಅರಿಕೆ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಮೂರು ದಿನಗಳ ಕಸ್ಟಡಿಗೆ ನೀಡಿದ ಕೋರ್ಟ್!

ಧಾರವಾಡ : ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿದೆ.

ರಾಜ್ಯದಲ್ಲಿ ಅಬ್ಬರಿಸುತ್ತಿದೆ ಮಹಾಮಾರಿ – ಇಂದು ಮತ್ತೆ 10 ಸಾವಿರ ಗಡಿ ದಾಟಿದ ಸೋಂಕು!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇಂದು ಕೂಡ ರಾಜ್ಯದಲ್ಲಿ ದಾಖಲೆಯ ಸೋಂಕಿತರು ಪತ್ತೆಯಾಗಿದ್ದಾರೆ.

ಆಲಮಟ್ಟಿಗೆ ಸಿಎಂ ಆಗಮನ – ಬಿಗಿ ಭದ್ರತೆ ನಿಯೋಜನೆ

ಆಲಮಟ್ಟಿ : ರಾಜ್ಯದ ದೊರೆ ಆಗಮನದ ಹಿನ್ನೆಲೆಯಲ್ಲಿ ಉದ್ಯಾನ ನಗರಿ ಆಲಮಟ್ಟಿ ಸಕಲ ಭದ್ರತಾ ಸಿದ್ದತೆಯೊಂದಿಗೆ…

ವೃತ್ತಕ್ಕೆ ದಿ. ಆರ್.ಎನ್.ದೇಶಪಾಂಡೆ ನಾಮಕರಣಕ್ಕೆ ಮನವಿ

ಮುಳಗುಂದ: ಪಟ್ಟಣದ ಹೃದಯ ಭಾಗದ ಗಾಂಧಿಕಟ್ಟಿಯ ಹತ್ತಿರ ವೃತ್ತ ಪ.ಪಂ ಮಾಜಿ ಸದಸ್ಯ ದಿ.ಆರ್.ಎನ್ ದೇಶಪಾಂಡೆ ಅವರ ಹೆಸರು ನಾಮಕರಣ ಮಡಬೇಕು. ಎಂದು ಉನ್ನತಿ ಮಹಿಳಾ ಸಮಾಜ ಸೇವೆ ಹಾಗೂ ವಿವಿದೋದ್ದೇಶಗಳ ಸಂಘ, ಜೈ ಮಾತಾ ಜೀಜಾಬಾಯಿ ಕ್ಷತ್ರೀಯ ಮರಾಠ ಮಹಿಳಾ ಸಂಘ ಸೇರಿದಂತೆ ಹಲವು ಸಂಘಟನೆಗಳು ಪ.ಪಂ.ಮುಖ್ಯಾಧಿಕಾರಿ ಎಂಎಸ್.ಬೆಂತೂರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.