ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇಂದು ಕೂಡ ರಾಜ್ಯದಲ್ಲಿ ದಾಖಲೆಯ ಸೋಂಕಿತರು ಪತ್ತೆಯಾಗಿದ್ದಾರೆ. 

ಇಂದು ರಾಜ್ಯದಲ್ಲಿ ಬರೋಬ್ಬರಿ 10,512 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೇ, ಕಳೆದ 24 ಗಂಟೆಗಳಲ್ಲಿ 102 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,00,786ಕ್ಕೆ ಏರಿಕೆ ಕಂಡಿದೆ.

ಅಲ್ಲದೇ, ರಾಜ್ಯದಲ್ಲಿ 1,20,929 ಸಕ್ರಿಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 8,337 ಜನ ವಿವಿಧ ಆಸ್ಪತ್ರೆಗಳಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 

102 ಜನರ ಸಾವಿನೊಂದಿಗೆ ರಾಜ್ಯದಲ್ಲಿ 9,891 ಜನ ರಾಜ್ಯದಲ್ಲಿ ಸೋಂಕಿಗೆ ಬಲಿಯಾದಂತಾಗಿದೆ. ಇಂದು ರಾಜ್ಯದಲ್ಲಿ 1.12,770 ಜನರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಇಂದು ಪ್ರತಿದಿನದಂತೆ ಬೆಂಗಳೂರಿನಲ್ಲಿಯೇ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದರು. ಇಲ್ಲಿ ಇಂದು 4,563 ಪ್ರಕರಣಗಳು ದಾಖಲಾಗಿವೆ. ಅಲ್ಲದೇ, 30 ಜನ ಬಲಿಯಾಗಿದ್ದಾರೆ. 

ಇನ್ನುಳಿದಂತೆ, ಬಾಗಲಕೋಟೆ 124, ಬಳ್ಳಾರಿ 225, ಬೆಳಗಾವಿ 515, ಬೆಂಗಳೂರು ಗ್ರಾಮಾಂತರ 224, ಬೆಂಗಳೂರು ನಗರ 4,563, ಬೀದರ್ 23, ಚಾಮರಾಜನಗರ 79, ಚಿಕ್ಕಬಳ್ಳಾಪುರ 122, ಚಿಕ್ಕಮಗಳೂರು 241, ಚಿತ್ರದುರ್ಗ 447, ದಕ್ಷಿಣ ಕನ್ನಡ 316, ದಾವಣಗೆರೆ 345, ಧಾರವಾಡ 141, ಗದಗ 32, ಹಾಸನ 455, ಹಾವೇರಿ 51, ಕಲಬುರಗಿ 104, ಕೊಡಗು 216, ಕೋಲಾರ 174, ಕೊಪ್ಪಳ 84, ಮಂಡ್ಯ 248, ಮೈಸೂರು 465, ರಾಯಚೂರು 93, ರಾಮನಗರ 68, ಶಿವಮೊಗ್ಗ 259, ತುಮಕೂರು 374, ಉಡುಪಿ 237, ಉತ್ತರ ಕನ್ನಡ 89, ವಿಜಯಪುರ 130 ಮತ್ತು ಯಾದಗಿರಿಯಲ್ಲಿ 73 ಜನರಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 

Leave a Reply

Your email address will not be published. Required fields are marked *

You May Also Like

ಸರ್ಕಾರದ ನಡೆಯಿಂದ ನಮ್ಮ ಭಾಗದ ಯುವಕರಿಗೆ ಅನ್ಯಾಯ -ಮೋಹನ ದೊಡಕುಂಡಿ

ಉತ್ತರಪ್ರಭ ಸುದ್ದಿಗದಗ: 545 ಪಿ.ಎಸ್.ಐ ಹುದ್ದೆಗಳಿಗೆ ನೇಮಕಾತಿ ಕರೆದಿದ್ದ ಸರ್ಕಾರ ಸದ್ಯ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆಯಾಗಿದ್ದರೂ…

ಸಾರಿಗೆ ಸಿಬ್ಬಂಧಿಗಳ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆದ ಸಾರಿಗೆ ನೌಕರರ ಮಹಾ ಮಂಡಳ

ಬೆಂಗಳೂರು: ಕೋವಿಡ್-19ರ ದುಷ್ಪರಿಣಾಮದಿಂದ ಸಾರಿಗೆ ಸಂಸ್ಥೆಗಳ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸಾರಿಗೆ ಸಂಸ್ಥೆಗಳನ್ನು ಪುನಶ್ಚೇತನಗೊಳಿಸುವ…

NEET 2021 :ವೈದ್ಯಕೀಯ ಕಾಲೇಜು ಪ್ರವೇಶ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆ ಇನ್ನೂ ಒಂದು ತಿಂಗಳ ವಿಳಂಭ ಸಾಧ್ಯತೆ !

ಉತ್ತರಪ್ರಭ ಸುದ್ದಿ ದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) 2021 ಫಲಿತಾಂಶವನ್ನು ಘೋಷಿಸಿದ…

ಅಸಮರ್ಪಕ ಬಸ್ ಸೌಲಭ್ಯ: ವಿದ್ಯಾರ್ಥಿಗಳ ಪ್ರತಿಭಟನೆ

ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ ಹೋಗಲು ಬಸ್ ಸರಿಯಾದ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಕಂಗಾಲಾಗಿದ್ದು, ಸಮಪರ್ಕಕ ಸಾರಿಗೆ ಕಲ್ಪಿಸುವಂತೆ‌ ಒತ್ತಾಯಿಸಿ ಸ್ಥಳೀಯ ಬಸ್ ನಿಲ್ದಾಣದಲ್ಲಿ ಶುಕ್ರವಾರ ಮುಂಜಾನೆ ಬಸ್ ಗಳನ್ನು ತಡೆದು ದಿಢೀರ್ ಪ್ರತಿಭಟನೆ ಕೈಗೊಂಡ ಘಟನೆ ನಡೆಯಿತು.