ಆಲಮಟ್ಟಿ : ರಾಜ್ಯದ ದೊರೆ ಆಗಮನದ ಹಿನ್ನೆಲೆಯಲ್ಲಿ ಉದ್ಯಾನ ನಗರಿ ಆಲಮಟ್ಟಿ ಸಕಲ ಭದ್ರತಾ ಸಿದ್ದತೆಯೊಂದಿಗೆ ಸಾಂಪ್ರದಾಯಿಕ ಸ್ವಾಗತಕ್ಕೆ ತಯಾರಾಗಿ ನಿಂತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಆಲಮಟ್ಟಿಗೆ ಭೇಟಿ ನೀಡುತ್ತಿದ್ದು ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರದಲ್ಲಿ ಕೃಷ್ಣಾ ನದಿಗೆ ಗಂಗಾಪೂಜೆ ಸಲ್ಲಿಸಿ ಬಾಗೀನ ರ‍್ಪಿಸಲಿದ್ದಾರೆ.
ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರ
ಈ ಹಿನ್ನೆಲೆಯಲ್ಲಿ ಆಲಮಟ್ಟಿಯಲ್ಲಿ ನಡೆದಿರುವ ಸಿದ್ಧತೆಗಳನ್ನು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಎಸ್ಪಿ ಎಚ್. ಡಿ. ಆನಂದಕುಮಾರ ಹಾಗೂ ಕೆಬಿಜೆಎನ್ ಎಲ್ ಅಧಿಕಾರಿಗಳು ಗುರುವಾರ ಪರಿಶೀಲನೆ ನಡೆಸಿದರು.
ಆಲಮಟ್ಟಿ ಅಣೆಕಟ್ಟು ಮತ್ತು ಹೆಲಿಪ್ಯಾಡ್ ಗೆ ಅಧಿಕಾರಿಗಳು ಭೇಟಿ ನೀಡಿ ವ್ಯವಸ್ಥೆ ಪರಿಶೀಲನೆ ನಡೆಸಿದರು.
ಶುಕ್ರವಾರ ಬೆಳಿಗ್ಗೆ ಹುಬ್ಬಳ್ಳಿಯಿಂದ ಅಲಮಟ್ಟಿಗೆ ಬೆಳಿಗ್ಗೆ 10ಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೃಷ್ಣೆಯ ಜಲಧಿಗೆ ಬಾಗಿನ ರ‍್ಪಿಸಲಿದ್ದಾರೆ. ನಂತರ ಕೃಷ್ಣಾ ಭಾಗ್ಯ ಜಲ ನಿಗಮದ ಎಂಡಿ ಕಚೇರಿಯ ಬಳಿಯ ನೂತನ ಪ್ರವಾಸಿ ಮಂದಿರ ನರ‍್ಮಾಣಕ್ಕೆ ಸಿಎಂ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ರೂ.14.50 ಕೋ. ವೆಚ್ಚದ 15 ಕೊಠಡಿಗಳ ಅತ್ಯಾಧುನಿಕ ಸೌಲಭ್ಯಗಳ ಪ್ರವಾಸಿ ಮಂದಿರ ಇದಾಗಿದೆ.
ಸಿಎಂ ಆಲಮಟ್ಟಿಯಲ್ಲಿ ಒಂದು ಗಂಟೆ ಮಾತ್ರ ಇರಲಿದ್ದಾರೆ. ಈ ಕರ‍್ಯಕ್ರಮ ಸರಳವಾಗಿ ನಡೆಯಲಿದೆ ಎಂದು ಕೆ ಬಿ ಜೆ ಎನ್ ಎಲ್ ಅಧೀಕ್ಷಕ ಎಂಜಿನಿಯರ್ ಡಿ. ಬಸವರಾಜ ತಿಳಿಸಿದರು.
ಆಲಮಟ್ಟಿ ಜಲಾಶಯದ ನೀರಿನ ಮಟ್ಟ
ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರ 519.60 ಮೀ ಎತ್ತರವಿದೆ. ಈ ಜಲಾಶಯದಲ್ಲಿ 519.60 ಮೀಟರ್ ನೀರು ಸಂಗ್ರಹ ಸಾರ‍್ಥ್ಯವಿದ್ದು, ಈಗ ಅಣೆಕಟ್ಟು ಸಂಪರ‍್ಣ ರ‍್ತಿಯಾಗಿದೆ.
ಆಲಮಟ್ಟಿ ಡ್ಯಾಂ ಗೆ ಈಗ 9136 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.
ಶುಕ್ರವಾರ ನಡೆಯುವ ಈ ಕರ‍್ಯಕ್ರಮಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ರಾಜ್ಯದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ ಸೇರಿದಂತೆ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ. ಎಸ್. ಪಾಟೀಲ್ ನಡಹಳ್ಳಿ, ಶಿವಾನಂದ ಎಸ್. ಪಾಟೀಲ, ಎಂ. ಬಿ. ಪಾಟೀಲ, ಯಶವಂತರಾಯಗೌಡ ಪಾಟೀಲ, ರಮೇಶ ಬೂಸನೂರ, ಸುನೀಲಗೌಡಡ ಪಾಟೀಲ, ಪಿ. ಎಚ್. ಪೂಜಾರ, ಹಣಮಂತ ನಿರಾಣಿ, ಪ್ರಕಾಶ ಹುಕ್ಕೇರಿ ಸೇರಿದಂತೆ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ.
ಈ ಬಾಗಿನ ರ‍್ಪಣೆ ಕರ‍್ಯಕ್ರಮದ ಬಳಿಕ ಮುಖ್ಯಮಂತ್ರಿಗಳು ವಿಜಯಪುರಕ್ಕೆ ತೆರಳಿ ಅಲ್ಲಿನ ಸೈನಿಕ ಸ್ಕೂಲ್ ಆವರಣದಲ್ಲಿ ಹಾಕಿ ಕ್ರೀಡಾಂಗಣ ಉದ್ಘಾಟನೆ ಮಾಡಲಿದ್ದಾರೆ.
ನಂತರ ಜ್ಞಾನಯೋಗಿ ಸಿದ್ದೇಶ್ವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಮಾಡಿ ಸಂಜೆ ಬೆಂಗಳೂರಿನತ್ತ ಪ್ರಯಾಣ ಬೆಳಸಲಿದ್ದಾರೆ ಎಂದು ಡಿಸಿ ತಿಳಿಸಿದರು.
ಪೊಲೀಸ್ ಬಂದೋಬಸ್ತ್ ;
ಸಿಎಂ ಬಸವರಾಜ ಬೊಮ್ಮಾಯಿ ಆಗಮನದ ಹಿನ್ನೆಲೆಯಲ್ಲಿ ಆಲಮಟ್ಟಿ ಮತ್ತು ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ
ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಪ್ರಮುಖ ಸ್ಥಳಗಳಲ್ಲಿ ಪೋಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿದೆ ಎಂದು ಎಸ್ ಪಿ ಆನಂದಕುಮಾರ ತಿಳಿಸಿದರು. ರ‍್ವ ಎಎಸ್ಪಿ, ಮೂರು ಜನ ಸಿಪಿಐ, 15 ಜನ ಪಿ ಎಸ್ ಐ, 150 ಜನ ಸಿಬ್ಬಂದಿಗಳು ಸೇರಿ ಕೆ ಎಸ್ ಐ ಎಸ್ ಎಫ್ ನ ಪೊಲೀಸರು ಸಿಬ್ಬಂದಿಯನ್ನು ಆಲಮಟ್ಟಿಯಲ್ಲಿ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

You May Also Like

ಗದಗ-ಬೆಟಗೇರಿ ನಗರಸಭೆ: ಮಾರ್ಚ 2ಕ್ಕೆ ಅಧ್ಯಕ್ಷ ಸ್ಥಾನದ ತೀರ್ಪು ಸಾಧ್ಯತೆ, ಉಪಾಧ್ಯಕ್ಷ ಸ್ಥಾನಕ್ಕೆ ಹೈ ಕೋರ್ಟ ಗ್ರೀನ್ ಸಿಗ್ನಲ್

ಉತ್ತರಪ್ರಭ ಸುದ್ದಿಗದಗ: ಗದಗ ಬೆಟಗೇರಿ ನಗರ ಸಭೆಯ ಅಧ್ಯಕ್ಷರಾಗಿ ಬಿಜೇಪಿಯ ಉಷಾ ಮಹೇಶ ದಾಸರ ಆಯ್ಕೆಯಾಗಿದ್ದರು…

ಗದಗ ಜಿಲ್ಲೆಯ 48 ಕಂಟೈನ್ಮೆಂಟ್ ಝೋನ್ ಗಳ ವಿವರ

ಗದಗ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಬುಧವಾರದ ವರೆಗೆ…

ವಿ.ಪ ಚುನಾವಣೆ : ಶಾಸಕ ಎಚ್.ಕೆ.ಪಾಟೀಲ ಮತದಾನ

ಉತ್ತರಪ್ರಭ ಸುದ್ದಿ ಮುಳಗುಂದ: ಇಲ್ಲಿನ ಪಟ್ಟಣ ಪಂಚಾಯ್ತಿ ಕಾರ್ಯಾಲಯದಲ್ಲಿ ಸ್ಥಾಪಿಸಿದ ಧಾರವಾಡ ವಿಧಾನ ಪರಿಷತ್ ಚುನಾವಣೆಯ…

ನಿಡಗುಂದಿ: 23 ರಂದು ಉಚಿತ ಆರೋಗ್ಯ, ರಕ್ತದಾನ ಶಿಬಿರ

ನಿಡಗುಂದಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಹಾಗೂ…