ನವದೆಹಲಿ: ಕೇಂದ್ರಾಡಳಿತ ಪ್ರದೇಶ ಕಾಶ್ಮೀರಕ್ಕೆ ವಿದೇಶಿ ಪ್ರತಿನಿಧಿಗಳ ನಿಯೋಗದ ಭೇಟಿಯ ಬೆನ್ನಲ್ಲೆ ಕಣಿವೆಯಲ್ಲಿ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿ ಆತಂಕ ಹುಟ್ಟಿಸಿದೆ.

ರಜೌರಿ ಜಿಲ್ಲೆಯ ಮಂಜಾಕೋಟ್‍ ಹೆದ್ದಾರಿಯಲ್ಲಿ ಈ ಅನುಮಾನಾಸ್ಪದ ವಸ್ತು ಪತ್ತೆಯಾಗಿದ್ದು, ಹೆದ್ದಾರಿಗುಂಟ ಹೈ ಅಲರ್ಟ್ ಘೋಸಿಸಲಾಗಿದೆ. ಕಟ್ಟಿಗೆಯ ಬಾಕ್ಸ್‍ ನಲ್ಲಿ ಅಡುಗೆಗೆ ಬಳಸುವ ಕುಕ್ಕರ್ ರೀತಿಯ ಪಾತ್ರೆ ಇಡಲಾಗಿದೆ. ಬುಧವಾರ ಬೆಳಗ್ಗೆ ಈ ಘಟನೆ ವರದಿಯಾಗಿದ್ದು, ಸ್ಥಳದಲ್ಲಿ ಬಾಂಬ್‍ ನಿಷ್ಕ್ರಿಯ ದಳ ಹಾಗೂ ಭದ್ರತಾ ಪಡೆಗಳು ಜಮಾಯಿಸಿವೆ.

ವಸ್ತು ಪತ್ತೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಹೆದ್ದಾರಿ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ನಾಕಾಬಂಧಿ ಹಾಕಲಾಗಿದೆ. ಸಧ್ಯ ತನಿಖೆ ಮುಂದುವರಿದಿದ್ದು, ಇದೊಂದು ಭಯೋತ್ಪಾದಕರ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ.

2019 ರ ಫೆಬ್ರವರಿಯಲ್ಲಿ ಪುಲ್ವಾಮಾ ಬಳಿಯ ಹೆದ್ದಾರಿಯಲ್ಲಿ ಉಗ್ರರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿ ಮಾರಣಹೋಮ ನಡೆಸಿದ್ದರು. ಹೀಗಾಗಿ ಕಣಿವೆಯ ರಸ್ತೆಗಳಲ್ಲಿ ಸಣ್ಣ ವಸ್ತು ಪತ್ತೆಯಾದರೂ ಭೀತಿಗೊಳಗಾಗುವಂತೆ ಮಾಡಿದೆ.

ಇಂದು ಬೆಳಗ್ಗೆ ಶ್ರೀನಗರಕ್ಕೆ 24 ರಾಷ್ಟ್ರಗಳ ವಿದೇಶಿ ಪ್ರತಿನಿಧಿಗಳ ನಿಯೋಗ ಭೇಟಿ ನೀಡಿದ್ದು, ಸ್ಥಳೀಯರೊಂದಿಗೆ ಸಂವಾದ ನಡೆಸಿದೆ. ನಿಯೋಗ ಬುದ್ಗಾಂ ಜಿಲ್ಲೆಯ ಮಾಗಮ್‍ ಬ್ಲಾಕ್ ನಲ್ಲಿ ಸ್ಥಳೀಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿತು. ಪಂಜಾಯತ್‍ ರಾಜ್ ವ್ಯವಸ್ಥೆ ಹಾಗೂ ಕುಂದುಕೊರತೆಗಳನ್ನು ಅಧಿಕಾರಿಗಳಿಗೆ ತಿಳಿಸುವ ವ್ಯವಸ್ಥೆ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಲಾಯಿತು.  

Leave a Reply

Your email address will not be published. Required fields are marked *

You May Also Like

ನಿರ್ಮಾಣ ಹಂತದ ಸೇತುವೆ ಕುಸಿತ: ಮೂವರು ಭಾರತೀಯ ಸಾವು

ಉತ್ತರಾಖಂಡ ಹಿಮ ಸ್ಫೋಟದಲ್ಲಿ ತಪೋವನ ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ೩೦ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದು ಇದರ ಬೆನ್ನಲ್ಲೇ ಭೂತಾನ್‌ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತದಲ್ಲಿ ಮೂವರು ಭಾರತೀಯ ಕಾರ್ಮಿಕರು ದುರ್ಮರಣ ಹೊಂದಿದ್ದು ಇನ್ನು ಆರು ಮಂದಿ ನಾಪತ್ತೆಯಾಗಿದ್ದಾರೆ.

ನಿಜಾಮುದ್ಧೀನ್ ಪ್ರಕರಣ – 34 ರಾಷ್ಟ್ರಗಳ 376 ಜನರ ಮೇಲೆ ಪ್ರಕರಣ!

ನವದೆಹಲಿ: ನಗರದ ನಿಜಾಮುದ್ಧೀನ್ ಮರ್ಕಜ್ ನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದ 34 ರಾಷ್ಟ್ರಗಳ 376 ವಿದೇಶಿ…

ನಾಡಪ್ರಭು ವಿಮಾನ ನಿಲ್ದಾಣದ ಟರ್ಮಿನಲ್‌–2 ಉದ್ಘಾಟಿಸಿದ ಮೋದಿ

ಉತ್ತರಪ್ರಭ ಸುದ್ದಿ ಬೆಂಗಳೂರ: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಟರ್ಮಿನಲ್ 2 ಅನ್ನು…

ಹರ್ನಾಜ್ ಕೌರ್ ಸಂಧು 2021ರ ನೂತನ ವಿಶ್ವ ಸುಂದರಿ!

ಉತ್ತರಪ್ರಭ ದೆಹಲಿ: 2021ರ 70ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಕೌರ್ ಸಂಧು…