ರಜೌರಿ ; ಜಿಲ್ಲೆಯ ಹೆದ್ದಾರಿಯಲ್ಲಿ ಅನುಮಾನಾಸ್ಪದ ವಸ್ತು ಪತ್ತೆ

ನವದೆಹಲಿ: ಕೇಂದ್ರಾಡಳಿತ ಪ್ರದೇಶ ಕಾಶ್ಮೀರಕ್ಕೆ ವಿದೇಶಿ ಪ್ರತಿನಿಧಿಗಳ ನಿಯೋಗದ ಭೇಟಿಯ ಬೆನ್ನಲ್ಲೆ ಕಣಿವೆಯಲ್ಲಿ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿ ಆತಂಕ ಹುಟ್ಟಿಸಿದೆ.

ರಜೌರಿ ಜಿಲ್ಲೆಯ ಮಂಜಾಕೋಟ್‍ ಹೆದ್ದಾರಿಯಲ್ಲಿ ಈ ಅನುಮಾನಾಸ್ಪದ ವಸ್ತು ಪತ್ತೆಯಾಗಿದ್ದು, ಹೆದ್ದಾರಿಗುಂಟ ಹೈ ಅಲರ್ಟ್ ಘೋಸಿಸಲಾಗಿದೆ. ಕಟ್ಟಿಗೆಯ ಬಾಕ್ಸ್‍ ನಲ್ಲಿ ಅಡುಗೆಗೆ ಬಳಸುವ ಕುಕ್ಕರ್ ರೀತಿಯ ಪಾತ್ರೆ ಇಡಲಾಗಿದೆ. ಬುಧವಾರ ಬೆಳಗ್ಗೆ ಈ ಘಟನೆ ವರದಿಯಾಗಿದ್ದು, ಸ್ಥಳದಲ್ಲಿ ಬಾಂಬ್‍ ನಿಷ್ಕ್ರಿಯ ದಳ ಹಾಗೂ ಭದ್ರತಾ ಪಡೆಗಳು ಜಮಾಯಿಸಿವೆ.

ವಸ್ತು ಪತ್ತೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಹೆದ್ದಾರಿ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ನಾಕಾಬಂಧಿ ಹಾಕಲಾಗಿದೆ. ಸಧ್ಯ ತನಿಖೆ ಮುಂದುವರಿದಿದ್ದು, ಇದೊಂದು ಭಯೋತ್ಪಾದಕರ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ.

2019 ರ ಫೆಬ್ರವರಿಯಲ್ಲಿ ಪುಲ್ವಾಮಾ ಬಳಿಯ ಹೆದ್ದಾರಿಯಲ್ಲಿ ಉಗ್ರರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿ ಮಾರಣಹೋಮ ನಡೆಸಿದ್ದರು. ಹೀಗಾಗಿ ಕಣಿವೆಯ ರಸ್ತೆಗಳಲ್ಲಿ ಸಣ್ಣ ವಸ್ತು ಪತ್ತೆಯಾದರೂ ಭೀತಿಗೊಳಗಾಗುವಂತೆ ಮಾಡಿದೆ.

ಇಂದು ಬೆಳಗ್ಗೆ ಶ್ರೀನಗರಕ್ಕೆ 24 ರಾಷ್ಟ್ರಗಳ ವಿದೇಶಿ ಪ್ರತಿನಿಧಿಗಳ ನಿಯೋಗ ಭೇಟಿ ನೀಡಿದ್ದು, ಸ್ಥಳೀಯರೊಂದಿಗೆ ಸಂವಾದ ನಡೆಸಿದೆ. ನಿಯೋಗ ಬುದ್ಗಾಂ ಜಿಲ್ಲೆಯ ಮಾಗಮ್‍ ಬ್ಲಾಕ್ ನಲ್ಲಿ ಸ್ಥಳೀಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿತು. ಪಂಜಾಯತ್‍ ರಾಜ್ ವ್ಯವಸ್ಥೆ ಹಾಗೂ ಕುಂದುಕೊರತೆಗಳನ್ನು ಅಧಿಕಾರಿಗಳಿಗೆ ತಿಳಿಸುವ ವ್ಯವಸ್ಥೆ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಲಾಯಿತು.  

Exit mobile version