ಕಠ್ಮಂಡು: ಉತ್ತರಾಖಂಡ ಹಿಮ ಸ್ಫೋಟದಲ್ಲಿ ತಪೋವನ ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ೩೦ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದು ಇದರ ಬೆನ್ನಲ್ಲೇ ಭೂತಾನ್‌ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತದಲ್ಲಿ ಮೂವರು ಭಾರತೀಯ ಕಾರ್ಮಿಕರು ದುರ್ಮರಣ ಹೊಂದಿದ್ದು ಇನ್ನು ಆರು ಮಂದಿ ನಾಪತ್ತೆಯಾಗಿದ್ದಾರೆ.

ವಾಂಗ್ಚು ಸೇತುವೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಭೂತನ್ ರಾಜಧಾನಿ ತಿಮ್ಫುವಿನ ನೈಋತ್ಯ ಭಾಗದಿಂದ ಸುಮಾರು ೬೦ ಕಿ.ಮೀ ದೂರದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು. ಸೇತುವೆ ಸಂಪೂರ್ಣ ನಿರ್ಮಾಣವಾಗಿತ್ತು. ಅಂತಿಮ ಹಂತದ ಕೆಲಸ ಮಾಡುವ ಸಲುವಾಗಿ ೯ ಮಂದಿ ಕಾರ್ಮಿಕರು ಸೇತುವೆ ಮೇಲೆ ನಿಂತಿದ್ದಾಗ ಸೇತುವೆ ಕುಸಿದುಬಿದ್ದಿದೆ.

ಭೂತಾನ್ ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿರುವ ಹಾ ಜಿಲ್ಲೆಯನ್ನು ಪಾರೊದೊಂದಿಗೆ ಸಂಪರ್ಕಿಸಲು ಈ ಸೇತುವೆಯನ್ನು ನಿರ್ಮಿಸಲಾಗುತ್ತಿತ್ತು. ದುರ್ಘಟನೆಯಲ್ಲಿ ಮೃತಪಟ್ಟ ಕಾರ್ಮಿಕರಿಗೆ ಭೂತಾನ್ ಪ್ರಧಾನಿ ಲೋಟೋ ತ್ಸೆರಿಂಗ್ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಲಡಾಖ್‍ನಲ್ಲಿ ಪ್ರಧಾನಿ ಮೋದಿ ತೆರೆಯಿತೆ ಲಡಾಯಿಯ ಹಾದಿ?

ಜೂನ್ 15ರಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಸಂಘರ್ಷ ವಲಯಗಳಾದ ಲಡಾಕ್ ಮತ್ತು ಲೇಹ್ ಪ್ರದೇಶಕ್ಕೆ ಇಂದು ಭೇಟಿ ನೀಡಿ, ದೇಶದ ಸೈನಿಕ ಪಡೆಗಳಿಗೆ ನೈತಿಕ ಸ್ಥೈರ್ಯ ತುಂಬಿದರು.

ಬಂದ ಮತ್ತೊಬ್ಬ ಬಂಗಾರದ ಬಾಬಾ: ಈತನ ಚಿನ್ನದ ಮಾಸ್ಕ ರೇಟು 3.5 ಲಕ್ಷ ರೂ!

ಪುಣೆಯಲ್ಲಿ ಶಂಕರ್ ಕುರಾಡೆ ಎನ್ನುವಾತ 2.80 ಲಕ್ಷ ರೂ. ಮೌಲ್ಯದ ಚಿನ್ನದ ಮಾಸ್ಕ್ ಧರಿಸಿದ್ದನ್ನು ನೋಡಿ ಪ್ರೇರಣೆ ಪಡೆದ ಒರಿಸ್ಸಾದ ಚಿನ್ನ ಪ್ರಿಯನೊಬ್ಬ 3.6 ಲಕ್ಷ ರೂ ಮಾಸ್ಕ್ ಮಾಡಿಸಿಕೊಂಡಿದ್ದಾನೆ.

ಚೀನಾ ಸಂಘರ್ಷ ಅಂತ್ಯ – ಸೇನೆ ಹಿಂಪಡೆಯಲು ನಿರ್ಧಾರ!

ನವದೆಹಲಿ : ಚೀನಾ ಸಂಘರ್ಷದ ಬಳಿಕ ಉಂಟಾಗಿದ್ದ ಗಂಭೀರ ಪರಿಸ್ಥಿತಿಯನ್ನು ತಿಳಿಗೊಳಿಸುವ ಭಾರತ ಮತ್ತು ಚೀನಾ ಸೇನಾ ಮುಖ್ಯಸ್ಥರ ಪ್ರಯತ್ನಕ್ಕೆ ಮಹತ್ವದ ಜಯ ಲಭಿಸಿದ್ದು, ಎರಡೂ ಸೇನಾ ಮುಖ್ಯಸ್ಥರು ತಮ್ಮ ಸೈನಿಕರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ನಿರ್ಧರಿಸಿದ್ದಾರೆ.

ದಲಿತ ಯುವಕನನ್ನು ಸುಟ್ಟು ಹಾಕಿದ ಮಾಲೀಕ!

ಅಲ್ವಾರ್ : ದಲಿತ ಯುವಕನನ್ನು ಉದ್ಯೋಗದಾತನೇ ಸುಟ್ಟು ಹಾಕಿರುವ ಅಮಾನವೀಯ ಘಟನೆ ರಾಜಸ್ಥಾನದ ಅಲ್ವಾರ್ ನಲ್ಲಿ ನಡೆದಿದೆ.