ನವದೆಹಲಿ : ದೇಶದಲ್ಲಿ ಮತ್ತೆ ಏರಿಕೆಯತ್ತ ಸಾಗಿರುವ ಕೊರೊನಾ ಸೋಂಕಿನ ವಿಚಾರದಲ್ಲಿ ಕೇಂದ್ರ ಸರ್ಕಾರ ನಿಷ್ಕಾಳಜಿ ತೋರಿಸುತ್ತಿದೆ ಎಂದು ಕಾಂಗ್ರೆಸ್‍ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ದಕ್ಷಿಣ ಆಫ್ರಿಕಾ ಹಾಗೂ ಬ್ರೆಜಿಲ್ ನಿಂದ ಬರುವ ಪ್ರಯಾಣಿಕರ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಅಸಲಿಗೆ ಕೋವಿಡ್ ಸೋಂಕು ಇನ್ನು ದೇಶದಿಂದಾಗಲಿ ಅಥವಾ ವಿಶ್ವದಿಂದ ಹೊರಹೋಗಿಲ್ಲ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂದು ರಾಹುಲ್‍ ಗಾಂಧಿ ಆಡಳಿತಾರೂಢ ನಾಯಕರನ್ನು ತಿವಿದಿದ್ದಾರೆ.

ದೇಶದಲ್ಲಿ ಕೋವಿಡ್‍ ಸೋಂಕಿನ ಪ್ರಮಾಣ ಮತ್ತೆ ಹೆಚ್ಚಳವಾಗುತ್ತಿರುವ ಕುರಿತ ಮಾಧ್ಯಮ ವರದಿಗಳ ಸ್ಕ್ರೀನ್ ಶಾಟ್‍ ಉಲ್ಲೇಖಿಸಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‍ ನಾಯಕ, ಮೋದಿ ಸರ್ಕಾರ ಕೊರೊನಾವನ್ನು ಗೆದ್ದಂತೆ ಬೀಗುತ್ತಿದೆ ಎಂದು ಚಾಟಿ ಬೀಸಿದ್ದಾರೆ. ದಕ್ಷಿಣ ಆಫ್ರಿಕಾ ಹಾಗೂ ಬ್ರೆಜಿಲ್ ವೈರಸ್ ಸಾರ್ವತ್ರಿಕವಾಗಿ ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಎರಡು ದೇಶಗಳಿಂದ ಬಂದಿರುವ ಜನರ ಮೇಲೆ ಸೂಕ್ತ ನಿಗಾ ಇಡಬೇಕಿದೆ ಎಂದು ರಾಹುಲ್ ಆಗ್ರಹಿಸಿದ್ದಾರೆ.

ಐಸಿಎಂಆರ್ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಇಲ್ಲಿಯವರೆಗೆ ಬ್ರೇಜಿಲ್ ಕೋವಿಡ್ ವೈರಸ್‍ ಸೋಂಕು ಓರ್ವ ವ್ಯಕ್ತಿಯಲ್ಲಿ ಹಾಗೂ ದಕ್ಷಿಣ ಆಫ್ರಿಕಾ ಕೋವಿಡ್‍ ವೈರಸ್‍ ಸೋಂಕು ನಾಲ್ವರಲ್ಲಿ ಪತ್ತೆಯಾಗಿದೆ. ಹೀಗಾಗಿ ದೇಶಾದ್ಯಂತ ಮತ್ತೆ ಕಳವಳಕಾರಿ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕೊರೊನಾ 3ನೇ ಅಲೆಯ ಭೀತಿ ನಿರ್ಮಾಣವಾಗಿದೆ. ಕಳೆದೆರೆಡು ದಿನಗಳಿಂದ ಮಹಾರಾಷ್ಟ್ರದಲ್ಲಿ 4 ಸಾವಿರಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಕೇಸ್ ಗಳು ವರದಿಯಾಗಿವೆ.  

Leave a Reply

Your email address will not be published. Required fields are marked *

You May Also Like

ತಮಿಳುನಾಡಿನಲ್ಲಿ ಕೊರೋನಾ ತಾಂಡವ: ಒಂದೇ ದಿನಕ್ಕೆ 161 ಪಾಸಿಟಿವ್

ತಮಿಳುನಾಡಿನಲ್ಲಿ ಮಹಾಮಾರಿ ಕೊರೊನಾ ವೈರಸ್ ತಾಂಡವಾಡುತ್ತಿದೆ. ಇಂದು ಒಂದೇ ದಿನ ಚೆನ್ನೈನಲ್ಲಿ 138 ಜನ ಸೇರಿದಂತೆ ತಮಿಳುನಾಡಿನಾದ್ಯಂತ ಒಟ್ಟು 161 ಪ್ರಕರಣಗಳು ಪತ್ತೆಯಾಗಿವೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,323ಕ್ಕೆ ಏರಿಕೆ ಕಂಡಿದೆ.

ಸಿಮೆಂಟ್ ಮಿಕ್ಸರ್ ಟ್ರಕ್ ಮೂಲಕ ಪ್ರಯಾಣ – 18 ಜನರ ಬಂಧನ!

ಕೊರೊನಾ ವೈರಸ್ ನ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಹಲವರು ಮನೆ ತಲುಪಲು ಆಗದೆ ತಾವು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಸಿಲುಕಿದ್ದಾರೆ. ಹೀಗೆ ಸಿಲುಕಿ ಹತಾಶರಾಗಿದ್ದ ಕಾರ್ಮಿಕರ ಗುಂಪೊಂದು ಮಹಾರಾಷ್ಟ್ರದಿಂದ ಲಖನೌಗೆ ತೆರಳುತ್ತಿದ್ದ ಸಿಮೆಂಟ್ ಮಿಕ್ಸರ್ ಟ್ರಕ್‌ ಮೂಲಕ ಪ್ರಯಾಣಿಸಲು ತೆರಳಿ ಸಿಕ್ಕಿ ಬಿದ್ದಿದ್ದಾರೆ.

ಸಂತ್ರಸ್ತೆಯಿಂದ ಪೊಲೀಸ್ ದೂರು : ಯುವಕನ ಬಂಧನ

ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ಮದುವೆ ಮಾಡಿಕೊಂಡ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಒಂದೇ ದಿನ ದಾಖಲೆಯ ಸೋಂಕಿತರು ಪತ್ತೆ!!

ಶನಿವಾರ ಒಂದೇ ದಿನ ದಾಖಲೆಯ ಸೋಂಕಿತರು ಪತ್ತೆ!! ನವದೆಹಲಿ : ದೇಶದಲ್ಲಿ ಶನಿವಾರ ಒಂದೇ ದಿನ…