ಇಂದೋರ್ : ಕೊರೊನಾ ವೈರಸ್ ನ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಹಲವರು ಮನೆ ತಲುಪಲು ಆಗದೆ ತಾವು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಸಿಲುಕಿದ್ದಾರೆ. ಹೀಗೆ ಸಿಲುಕಿ ಹತಾಶರಾಗಿದ್ದ ಕಾರ್ಮಿಕರ ಗುಂಪೊಂದು ಮಹಾರಾಷ್ಟ್ರದಿಂದ ಲಖನೌಗೆ ತೆರಳುತ್ತಿದ್ದ ಸಿಮೆಂಟ್ ಮಿಕ್ಸರ್ ಟ್ರಕ್‌ ಮೂಲಕ ಪ್ರಯಾಣಿಸಲು ತೆರಳಿ ಸಿಕ್ಕಿ ಬಿದ್ದಿದ್ದಾರೆ.


ಅಕ್ರಮವಾಗಿ ಪ್ರಯಾಣಿಸುತ್ತಿದ್ದ 18 ಜನರನ್ನು ಇಂದೋರ್ ಪೋಲೀಸರು ಬಂಧಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ, ಪೊಲೀಸರು ಈ ವಿಷಯದಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಪಂಜಾಬ್ ಹಾದಿ ಹಿಡಿದು ಕೇಂದ್ರದ ವಿರುದ್ಧ ನಿಂತ ರಾಜಸ್ಥಾನ್ ಸರ್ಕಾರ!

ಜೈಪುರ : ಕೃಷಿ ಮಸೂದೆಯನ್ನು ಪಂಜಾಬ್ ಸರ್ಕಾರ ವಿರೋಧಿಸಿದ ಬೆನ್ನಲ್ಲಿಯೇ ರಾಜಸ್ಥಾನ್ ಸರ್ಕಾರ ಕೂಡ ಅಪಸ್ವರ ಎತ್ತಿದೆ.

ಗುಂಡು ಮೈ ಒಳಗೆ ಹೋದರೂ ಪ್ರಜ್ಞೆ ತಪ್ಪದ ರೈ!: ಮುತ್ತಪ್ಪ ರೈ ಬದುಕಿನ ಪ್ರಮುಖ ಘಟನೆಗಳ ಮೆಲಕು

ಭೂಗತ ಲೋಕವನ್ನಾಳಿದ ವ್ಯಕ್ತಿಯ ಕಥೆಯಿದು. ಸದ್ಯ ಭೂಗತ ಲೋಕದಿಂದ ನಿವೃತ್ತಿ ಹೊಂದಿದರೂ ಕೂಡ ಮುತ್ತಪ್ಪ ರೈ ಹೆಸರು ಮಾತ್ರ ಚಾಲ್ತಿಯಲ್ಲಿಯೇ ಇತ್ತು. ಮಾಜಿ ಡಾನ್ ಮುತ್ತಪ್ಪ ರೈ ಜೀವನದಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳ ಮೆಲಕು ಇಲ್ಲಿದೆ ನೋಡಿ..

ಭಾರತಕ್ಕೆ ಮರಳಿದವರು ರೂಪಾಂತರಿ ವೈರಸ್ ಹೊತ್ತು ತಂದರು

ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿರುವ ದಕ್ಷಿಣ ಆಫ್ರಿಕಾದ ರೂಪಾಂತರಿ ಕೊರೋನಾ ವೈರಸ್ ಭಾರತದಲ್ಲೂ ವಕ್ಕರಿಸಿದೆ. ದಕ್ಷಿಣ ಆಫ್ರಿಕಾದ ವೈರಸ್ ದೇಶದಲ್ಲಿ ನಾಲ್ಕು ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಬರೋಬ್ಬರಿ 11 ಗಂಟೆಗಳ ಕಾಲ ಮಾತುಕತೆ ನಡೆಸಿದ ಭಾರತ, ಚೀನಾ ಸೇನಾಧಿಕಾರಿಗಳು!

ಲಡಾಖ್: ಭಾರತ ಹಾಗೂ ಚೀನಾ ಸೇನಾಧಿಕಾರಿಗಳು ಬರೋಬ್ಬರಿ 11 ಗಂಟೆಗಳ ಕಾಲ ಗಡಿ ಸಂಘರ್ಷದ ಕುರಿತು…