ಬೆಂಗಳೂರು: ಆರರಿಂದ ಎಂಟನೇ ತರಗತಿಗಳನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಲು ಸರ್ಕಾರ ಚಿಂತನೆ ನಡೆದಿದೆ. ಶಾಲೆ ಪುನಾರಂಭ ಕುರಿತಂತೆ ಇಂದು ಮಹತ್ವದ ಸಭೆ ನಡೆಯಲಿದೆ.
ರಾಜ್ಯದಲ್ಲಿ 9. 10 ಮತ್ತು ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಿವೆ. ಆರರಿಂದ ಎಂಟನೇ ತರಗತಿಗಳನ್ನು ಕೂಡ ಪೂರ್ಣಪ್ರಮಾಣದಲ್ಲಿ ಆರಂಭಿಸುವ ಕುರಿತು ಇಂದು ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಲಿದೆ. ಒಂದರಿAದ ಐದನೇ ತರಗತಿಗೆ ವಿದ್ಯಾಗಮ ಕಲಿಕೆ ಪ್ರಾರಂಭಿಸಲಾಗುವುದು ಎಂದು ಹೇಳಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರರಿಂದ ಎಂಟನೇ ತರಗತಿಗಳನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಲು ಮತ್ತು ಒಂದರಿAದ ಐದನೇ ತರಗತಿಗಳಿಗೆ ವಿದ್ಯಾಗಮ ಕಲಿಕೆ ಆರಂಭಿಸುವAತೆ ಶಿಕ್ಷಣ ಇಲಾಖೆಗೆ ಪೋಷಕರು ಒತ್ತಾಯ ಮಾಡಿದ್ದು ಈ ಕುರಿತು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಆಕ್ಸಿಜನ್ ಬಗ್ಗೆ ಯಾರು ಭಯಪಡಬೇಡಿ: ಸಚಿವ ಪ್ರಹ್ಲಾದ್ ಜೋಷಿ

ಕೊವಿಡ್ ರೋಗಿಗಳಿಗಾಗಿ ವಿಶೇಷ ಹೆಚ್ಚುವರಿ 10 ಆ್ಯಂಬ್ಯುಲೇನ್ಸ್ ಸಿದ್ಧಪಡಿಸಲಾಗಿದೆ. ಜನರು ಜಾಗೃತರಾಗಿರಬೇಕು. ಆದರೆ ಜನರು ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಸೀಲ್ ಡೌನ್ ಹೆಸರಿನಲ್ಲಿ ನಡೆಯಿತೇ ಕೋಟಿ ಕೋಟಿ ಅವ್ಯವಹಾರ?

ಕೊರೊನಾ ಸೋಂಕಿತರ ಮನೆಯ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಈ ಹಿಂದೆ ಇದರ ಪ್ರಮಾಣ ತುಸು ಹೆಚ್ಚಾಗಿತ್ತು. ಆದರೆ, ಈ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಸೂರ್ಯ ನಮಸ್ಕಾರವೇ ಜೀವನ ಶಕ್ತಿಯ ಆಧಾರ

ಮುಳಗುಂದ : ಸಮೀಪದ ಸೊರಟೂರ ಗ್ರಾಮದ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಸಂಕ್ರಾಂತಿಯ ದಿನ…

ನಕಲಿ ಜಾತಿ ಪ್ರಮಾಣ ಪತ್ರ ಆರೋಪ: ಪಟ್ಟಣ ಪಂಚಾಯ್ತಿ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

ಸ್ಥಳೀಯ ಪಟ್ಟಣ ಪಂಚಾಯತಿಗೆ 2018 ರ ಚುನಾವಣೆಯಲ್ಲಿ ಎಸ್‌.ಸಿ ಮೀಸಲಿದ್ದ 11ನೇ ವಾರ್ಡನಿಂದ ಆಯ್ಕೆಯಾಗಿರುವ ಬಸವಂತಪ್ಪ ಶಿ. ಹಾರೋಗೇರಿ ಅವರ ಜಾತಿ ಪ್ರಮಾಣ ಪತ್ರ ನಕಲಿ ಇದ್ದು ತನಿಖೆ ನಡೆಸಿ ಪಪಂ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಪ್ರತಿಸ್ಪರ್ದಿ ಮರಿಯಪ್ಪ ನೀ. ನಡಗೇರಿ ಆಗ್ರಹಿಸಿದರು.