ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯತಿಗೆ 2018 ರ ಚುನಾವಣೆಯಲ್ಲಿ ಎಸ್‌.ಸಿ ಮೀಸಲಿದ್ದ 11ನೇ ವಾರ್ಡನಿಂದ ಆಯ್ಕೆಯಾಗಿರುವ ಬಸವಂತಪ್ಪ ಶಿ. ಹಾರೋಗೇರಿ ಅವರ ಜಾತಿ ಪ್ರಮಾಣ ಪತ್ರ ನಕಲಿ ಇದ್ದು ತನಿಖೆ ನಡೆಸಿ ಪಪಂ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಪ್ರತಿಸ್ಪರ್ದಿ ಮರಿಯಪ್ಪ ನೀ. ನಡಗೇರಿ ಆಗ್ರಹಿಸಿದರು.

ಅವರು ಇಲ್ಲಿನ ಅಂಬೇಡ್ಕರ ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಬಸವಂತಪ್ಪ ಹಾರೋಗೇರಿ ಮೂಲತಃ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದವರು. ಅವರು ತಮ್ಮ ತಂದೆಯ ಕಾಲಕ್ಕೆ ಹಾರೋಗೇರಿ ಗ್ರಾಮದಿಂದ ಮುಳಗುಂದ ಪಟ್ಟಣಕ್ಕೆ ಬಂದಿದ್ದು, ಇವರು ಇಲ್ಲಿಗೆ ಬಂದ ನಂತರ ಸರಕಾರವು ಕೊಡುವ ಅನುಸೂಚಿತ ಜಾತಿ(ಹಿಂದೂ ಭೋವಿ) ಎಂದು ಪ್ರಮಾಣ ಪತ್ರ ಪಡೆದು ಎಸ್‌ಸಿ ಮೀಸಲಾತಿ ಸೌಲಭ್ಯಗಳನ್ನ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಕಳೆದ 2018 ರ ಸ್ಥಳಿಯ ಸಂಸ್ಥೆ ಚುಣಾವಣೆಯಲ್ಲಿ ಬಸವಂತಪ್ಪ ನಾಮಪತ್ರ ಸಲ್ಲಿಸುವಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳ ನಕಲು ಪ್ರತಿಗಳ ಒದಗಿಸುಂತೆ ಗದಗ ತಹಸೀಲ್ದಾರರಿಗೆ ಮನವಿ ಸಲ್ಲಿಸಿದಾಗ ಅದರ ಬದಲಾಗಿ ತಹಸೀಲ್ಧಾರರು ಬಸವಂತಪ್ಪ ಸೇರಿದಂತೆ ಅವರ ಕುಟುಂಬದವರ ಜಾತಿ ಪ್ರಮಾಣ ಪತ್ರ ನೀಡಿರುವದು ಅನುಮಾನಕ್ಕೆ ಎಡಮಾಡಿಕೊಟ್ಟಿದೆ. ಇನ್ನೂ ಅಗತ್ಯ ದಾಖಲೆಗಳ ಮಾಹಿತಿ ಒದಗಿಸದೇ ಸತಾಯಿಸುತ್ತಿದ್ದಾರೆ.

ಜಿಲ್ಲಾಧಿಕಾರಿಗಳ ಸಮೀತಿಯಲ್ಲಿ ತೀರ್ಮಾನ ಈ ವಿಷಯಕ್ಕೆ ಸಂಭಂಧಿಸಿದಂತೆ ಈಗಾಗಲೇ ಶಿವನಪ್ಪ ಹಾಗೂ ಆತನ ಸಂಬಂಧಿಗಳ ಜಾತಿ ಬಗ್ಗೆ ಸಮಗ್ರ ವರದಿ ಕಲೆ ಹಾಕಿ ತಿಳಿಸುವಂತೆ ಮುಂಡರಗಿ ತಹಸೀಲ್ದಾರರಿಗೆ ತಿಳಿಸಿದ್ದೇವೆ. ಅವರ ವರದಿ ಬರುವವರೆಗೆ ಕಾಯಬೇಕಿದೆ. ನಂತರ ಜಿಲ್ಲಾಧಿಕಾರಿಗಳ ಸಮೀತಿಯಲ್ಲಿ ಇದನ್ನು ತೀರ್ಮಾನಿಸಲಾಗುವದು. -ಶ್ರೀನಿವಾಸಮೂರ್ತಿ ಕುಲಕರ್ಣಿ, ತಹಸೀಲ್ದಾರ

ತಪ್ಪಿತಸ್ಥರ ವಿರುಧ್ಧ ಕ್ರಮ ಜರುಗಿಸಬೇಕು ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ಲಗತ್ತಿಸಿ ಚುನಾವಣೆಯಲ್ಲಿ ಆಯ್ಕೆಯಾದ ಇವರನ್ನು ಪಟ್ಟಣ ಪಂಚಾಯ್ತಿ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಇಲ್ಲವಾದಲ್ಲಿ ನ್ಯಾಯಾಕ್ಕಾಗಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಾಬು ಜಗಜೀವನರಾಮ್ ವಿವಿದೋದ್ದೇಶಗಳ ಸಂಘದ ದೇವಪ್ಪ ನಡಗೇರಿ, ಸುಭಾಸ ಜಾಲಣ್ಣವರ, ಪರಶುರಾಮ ಮ್ಯಾಗೇರಿ, ಬಸವಣ್ಣೆಪ್ಪ ನಡಗೇರಿ, ಮರಿಯಪ್ಪ ಕೆಳಗೇರಿ, ಮಹಾಂತೇಶ ಮಠದವರ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ಕುರುಬರಿಗೆ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು – ಈಶ್ವರಪ್ಪ!

ನೆಲಮಂಗಲ : ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಗೋಣಿ ಬಸವೇಶ್ವರ ರಥ ನಿರ್ಮಾಣಕ್ಕೆ ಸಚಿವ ಶ್ರೀರಾಮುಲು ಸಹಾಯ

ಗೋಣಿ ಬಸವೇಶ್ವರ ರಥ ನಿರ್ಮಾಣಕ್ಕೆ ಸಚಿವ ಶ್ರೀರಾಮುಲು ಸಹಾಯ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಾಸೀಮಸಾಹೇಬ್ ಹುಸೇನಸಾಹೇಬ

ಉತ್ತರಪ್ರಭನಿಡಗುಂದಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಜನಪದ ಸಾಹಿತಿ ಕಾಸೀಮಸಾಹೇಬ್ ಹುಸೇನಸಾಹೇಬ ಬಿಜಾಪುರ (87)…

ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಕಾರ್ಮಿಕರು!

ನಮ್ಮನ್ನು ಊರಿಗೆ ಕಳುಹಿಸಿ ಎಂದು ಸುಮಾರು 700 ವಲಸೆ ಕಾರ್ಮಿಕರು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿರುವ ಘಟನೆ ಕೇರಳದಲ್ಲಿ ನಡೆದಿದೆ.