ಸಿಡ್ನಿ: ದಕ್ಷಿಣ ಪೆಸಿಫಿಕ್‌ನಲ್ಲಿ 7.7 ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮ ಸುನಾಮಿ ಸೃಷ್ಟಿಯಾಗಿದೆ ಎಂದು ಆಸ್ಟ್ರೆಲಿಯಾದ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ.

ಆಸ್ಟ್ರೆಲಿಯಾ ಹವಾಮಾನ ಇಲಾಖೆ ಟ್ವೀಟ್ ಮಾಡಿ ಸುನಾಮಿ ಎದ್ದಿರುವುದು ಖಚಿತವೆಂದು ತಿಳಿಸಿದೆ. ಆಸ್ಟ್ರೆಲಿಯಾದ ಪೂರ್ವದಲ್ಲಿ 550 ಕಿ.ಮೀ. ದೂರದಲ್ಲಿರುವ ಲಾರ್ಡ್ ಹೋವ್ ದ್ವೀಪಕ್ಕೆ ಅಪಾಯವಾಗುವ ಮುನ್ಸೂಚನೆಯನ್ನು ನೀಡಿದೆ.

ದಕ್ಷಿಣ ಪೆಸಿಫಿಕ್‌ನಲ್ಲಿ 7.7 ರಷ್ಟು ತೀವ್ರತೆಯ ಭೂಕಂಪ ಆಗಿರುವುದರಿಂದ ನ್ಯೂಜಿಲೆಂಡ್, ನ್ಯೂ ಕೆಲೆಡೋನಿಯಾ ಸೇರಿದಂತೆ ಇತರೆ ದ್ವೀಪ ರಾಷ್ಟ್ರಗಳಲ್ಲಿ ಸುನಾಮಿ ಸೃಷ್ಟಿಯಾಗಬಹುದಾದ ಸಾಧ್ಯತೆ ಇರುವುದಾಗಿ ಅಮೆರಿಕದ ಜಿಯೊಲಾಜಿಕಲ್ ಸರ್ವೆ ತಿಳಿಸಿದೆ.

ಮಧ್ಯರಾತ್ರಿ ನ್ಯೂ ಕೆಲೆಡೋನಿಯಾದಲ್ಲಿ ವಾವೊದ ಪೂರ್ವ ಸುಮಾರು 415 ಕಿ.ಮೀ.ದೂರದಲ್ಲಿ ಭೂಮಿ ಕಂಪಿಸಿರುವುದಾಗಿ ಹೇಳಿದೆ. ಮುಂದಿನ ಮೂರು ಗಂಟೆಗಳಲ್ಲಿ ಅಪಾಯಕಾರಿಯಾಗಬಹುದಾದ ಅಲೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಇನ್ನೂಂದು ಸಂಸ್ಥೆ ಮುನ್ಸೂಚನೆ ನೀಡಿದೆ.  

Leave a Reply

Your email address will not be published. Required fields are marked *

You May Also Like

ಕೊರೋನಾ ಸಂಕಷ್ಟ ವಲಸಿಗರ ವಿಚಾರದಲ್ಲೂ ರಾಜಕಾರಣ..!

ಅಣ್ಣಾ ನಾನು ಊರಿಗೆ ಬರ್ತಿನಿ, ಬೇಕಾದ್ರೆ ಕ್ವಾರೈಂಟೈನ್ ನಲ್ಲಾದ್ರು ಇರ್ತಿನಿ ಆದ್ರೆ ಊರಿಗೆ ಬಂದ್ರೆ ಸಾಕು ಅನ್ನಿಸ್ತಿದೆ, ಹೇಗಾದ್ರು ಮಾಡಿ ನನ್ನನ್ನು ಕರಿಸಿಕೋ ಎನ್ನುವ ಮೊಬೈಲ್ ಕರೆಗಳೀಗ ಸಾಮಾನ್ಯವಾಗಿವೆ. ನಮಗೆ ಒಂದೊತ್ತಿನ ಊಟಕ್ಕೂ ಪರದಾಟವಿದೆ. ದುಡಿಯುವ ಕೈಗಳಿಗೆ ಕೆಲಸವೇ ಇಲ್ಲದೇ ನಾವು ಪರದಾಡುತ್ತಿದ್ದೇವೆ ಬೇಗ ನಮ್ಮನ್ನು ಊರಿಗೆ ಕರೆಸಿಕೊಳ್ಳಿ ಎನ್ನುವ ಅಂಗಲಾಚುವ ಧ್ವನಿ. ಒಂದೆಡೆ ಕಾರ್ಮಿಕರ ಗೋಳು ಮತ್ತೊಂದೆಡೆ ತಮ್ಮ ದೇಹವನ್ನೆ ಬಂಡವಾಳವಾಗಿಸಿಕೊಂಡು ಮುಂಬೈ-ಪುಣೆಯನ್ನೆ ಆಶ್ರಯಿಸಿಕೊಂಡಿದ್ದ ಲೈಂಗಿಕ ಕಾರ್ಯಕರ್ತೆಯರು ಒಪ್ಪತ್ತಿನೂಟಕ್ಕೆ ಪಡುತ್ತಿರುವ ಗೋಳಾಟ ಅಷ್ಟಿಷ್ಟಲ್ಲ.

ವಿಮಾನದಲ್ಲೇ ಬಟ್ಟೆ ಬಿಚ್ಚಲು ಮುಂದಾದ ಮಹಿಳೆ

ವಿಮಾನದಲ್ಲಿದ್ದ ಮಹಿಳೆಯೊರ್ವಳು ಬಟ್ಟೆ ಬಿಚ್ಚಲು ಪದೇ ಪದೇ ಪ್ರಯತ್ನಿಸುತ್ತಿದ್ದಳು, ನಂತರ ಕ್ಯಾಬಿನ್ ಸಿಬ್ಬಂದಿ ಹಗ್ಗ ಮತ್ತು ಟೇಪ್ ನಿಂದ ಆಕೆಯನ್ನು ಸೀಟಿಗೆ ಕಟ್ಟಿದ ಘಟನೆ ನಡೆದಿದೆ.

ಹಜ್ ಯಾತ್ರೆಯ ಬಗ್ಗೆ ಹಜ್ ಸಮಿತಿಯ ಮಹತ್ವದ ಮಾಹಿತಿ

ಈಗಾಗಲೇ ಕೊರೊನಾ ಕಾರಣ ಕಳೆದ ವರ್ಷವೂ ಹಜ್ ಯಾತ್ರೆಗೆ ಬ್ರೇಕ್ ಬಿದ್ದಿತ್ತು. ಈ ವರ್ಷ ಹಜ್ ಯಾತ್ರೆಗೆ ತೆರಳುವ ಬಗ್ಗೆ ಹಜ್ ಸಮಿತಿ‌ ಮಹತ್ವದ ಮಾಹಿತಿಯೊಂದನ್ನು ನೀಡಿದೆ.

ಖ್ಯಾತ ಗಾಲ್ಫ್ ಆಟಗಾರ ಟೈಗರ್ ಸ್ಥಿತಿ ಗಂಭೀರ.!

ಕಾರು ಅಪಘಾತದಲ್ಲಿ ಪ್ರಖ್ಯಾತ ಗಾಲ್ಫ್ ಆಟಗಾರ ಟೈಗರ್ ವುಡ್ಸ್ (೪೫) ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಲಾಸ್ ಏಂಜಲಿಸ್ನ ಕೌಂಟಿ ಶೆರಿಫ್ಸ್ ಇಲಾಖೆ ಮಾಹಿತಿ ನೀಡಿದೆ.