ಕ್ಯಾಲಿಫೋರ್ನಿಯಾ: ಕಾರು ಅಪಘಾತದಲ್ಲಿ ಪ್ರಖ್ಯಾತ ಗಾಲ್ಫ್ ಆಟಗಾರ ಟೈಗರ್ ವುಡ್ಸ್ (೪೫) ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಲಾಸ್ ಏಂಜಲಿಸ್ನ ಕೌಂಟಿ ಶೆರಿಫ್ಸ್ ಇಲಾಖೆ ಮಾಹಿತಿ ನೀಡಿದೆ.

ಕ್ಯಾಲಿಫೋರ್ನಿಯಾದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಅಪಘಾತದ ವೇಳೆ ಕಾರಿನಲ್ಲಿ ವುಡ್ಸ್ ಒಬ್ಬರೆ ಇಬ್ಬರು. ಅವರ ಕಾಲಿಗೆ ಅನೇಕ ಗಾಯಗಳಾಗಿವೆ. ಸದ್ಯ ಕಾಲಿಗೆ ಸರ್ಜರಿ ಮಾಡಲಾಗಿದೆ ಎಂದು ಸ್ಟೈನ್ಬರ್ಗ್ ತಿಳಿಸಿದ್ದಾರೆ.

ವುಡ್ಸ್ ಅವರು ಕಾರು ಅಪಘಾತದಲ್ಲಿ ಸಿಲುಕಿರುವುದು ಇದು ಮೂರನೇ ಬಾರಿ. 2009 ರಲ್ಲಿ ಇದಕ್ಕಿಂತಲೂ ಭೀಕರವಾಗಿ ಅಪಘಾತ ನಡೆದಿತ್ತು. ಅಂದು ಎಸ್ಯುವಿ ಕಾರು ಮರಕ್ಕೆ ಅಪ್ಪಳಿಸಿತ್ತು. ಇದರ ಬೆನ್ನಲ್ಲೇ ವುಡ್ಸ್ ಅನೇಕ ಮಹಿಳೆಯರೊಂದಿಗೆ ಸಂಬಂಧವಿದೆ ಮತ್ತು ತನ್ನ ಹೆಂಡತಿಗೆ ಮೋಸ ಮಾಡುತ್ತಿದ್ದಾನೆ ಎಂಬ ಆಘಾತಕಾರಿ ವಿಷಯು ಬಹಿರಂಗವಾಗಿತ್ತು.

ಫೆ.23 ರ ಬೆಳಗ್ಗೆ 7.12 ರ ಸುಮಾರಿಗೆ ವುಡ್ಸ್ ಕಾರು ಅಪಘಾತಕ್ಕೀಡಾಯಿತು. ಕಾರು ಬ್ಲ್ಯಾಕ್ಹಾರ್ಸ್ ರಸ್ತೆಯಲ್ಲಿರುವ ಹಾಥಾರ್ನ್ ಬೌಲೆವಾರ್ಡ್ನಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿತ್ತು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

28 ವರ್ಷಗಳ ಬಳಿಕ ಬೇರ್ಪಟ್ಟ ಗ್ರಾಮಿ ಪ್ರಶಸ್ತಿ ಪುರಸ್ಕೃತ ಜೋಡಿ

28 ವರ್ಷಗಳ ಬಳಿಕ ಗ್ರಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ಜೋಡಿ ಡಾಫ್ಟ್ ಪಂಕ್ ಬೇರೆಯಾಗಲು ನಿರ್ಧರಿಸಿದ್ದಾರೆ

ಜನ್ಮ ಪಡೆದ ಸ್ಥಾನದಲ್ಲಿಯೇ ಮತ್ತೆ ಆಟ ಮುಂದುವರಿಸಿದ ಕೊರೊನಾ!

ಕೊರೊನಾಗೆ ಜನ್ಮ ಸಿಕ್ಕಿದ್ದ ವುಹಾನ್ ನಗರದಲ್ಲಿ ಮತ್ತೆ ಕೊರೊನಾ ಕಾಣಿಸಿಕೊಂಡಿದೆ. ಇದರಿಂದಾಗಿ ಮತ್ತೆ ವಿಶ್ವದಲ್ಲಿ ಆತಂಕ ಮನೆ ಮಾಡಿದೆ.

ಕೊರೋನಾ ನಂತರ ಚೀನಾದಲ್ಲೀಗ ಬ್ಯುಬೊನಿಕ್ ಪ್ಲೇಗ್!

ನವದೆಹಲಿ: ಕೊರೊನಾದಿಂದ ಹೆಚ್ಚು ಬಾಧಿತ ನಂಬರ್ 1 ದೇಶ ಎನಿಸಿದ್ದ ಚೀನಾ ನಂತರದಲ್ಲಿ ಸಾಕಷ್ಟು ಚೇತರಿಸಿಕೊಂಡು…

ಮಂಗಳನ ಅಂಗಳಕ್ಕೆ ಕಾಲಿಟ್ಟ ನಾಸಾ ರೋವರ್: ಜೀವಿಗಳ ರುವಿಕೆಯ ಹುಡುಕಾಟ ನಡೆಸಲಿದೆಯಂತೆ!

ನಾಸಾ ಅತಿದೊಡ್ಡ ಹಾಗೂ ಅತ್ಯಾಧುನಿಕ ಪರ್ಸೆವೆರೆನ್ಸ್ ರೋವರ್ ಯಶಸ್ವಿಯಾಗಿ ಮಂಗಳ ಗ್ರಹವನ್ನು ಸ್ಪರ್ಶಿಸಿದೆ. ಈ ಮೂಲಕ 203 ದಿನಗಳ ಸುದೀರ್ಘ ಪ್ರಯಾಣದ ಬಳಿಕ 293 ಮಿಲಿಯನ್ ಮೈಲು (472 ಮಿಲಿಯನ್ ಕಿ.ಮೀ.) ದೂರ ಕ್ರಮಿಸಿ ನಾಸಾದ ಪರ್ಸೆವೆರೆನ್ಸ್ ರೋವರ್ ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ಕಾಲಿರಿಸಿದೆ.