ಹೈದರಾಬಾದ್ : ಚಲಿಸುತ್ತಿದ್ದ ರೈಲಿನಿಂದ ಕಾಲುಜಾರಿ ಬೀಳುತ್ತಿದ್ದ ವ್ಯಕ್ತಿಯನ್ನು ಮಹಿಳಾ ಪೊಲೀಸರೊಬ್ಬರು ಕಾಪಾಡಿರುವ ಘಟನೆ ಆಂಧ್ರ ಪ್ರದೇಶದ ವಿಶಾಕಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಚಲಿಸುತ್ತಿದ್ದ ರೈಲಿನಿಂದ ವ್ಯಕ್ತಿಯೊಬ್ಬ ಜಾರಿ ಬೀಳುತ್ತಿದ್ದನ್ನು ಅಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ ಗಮಿನಿಸಿ ಕೂಡಲೇ ಓಡಿ ಹೋಗಿ, ಆತನನ್ನು ಹಿಂದಕ್ಕೆ ಎಳೆದುಕೊಂಡು ಪ್ರಾಣ ಉಳಿಸಿದ್ದಾರೆ. ಈ ವಿಡಿಯೋವನ್ನು ಸದ್ಯ ರೈಲ್ವೆ ಇಲಾಖೆ ತಮ್ಮ ಟ್ವಿಟರ್ ಪೇಜ್ ನಲ್ಲಿ ಶೇರ್ ಮಾಡಿದ್ದು, ಜನರು ಮೆಚ್ಚುಗೆ ಗಳಿಸುತ್ತಿದೆ.

ನೆಟ್ಟಿಗರು ಮಹಿಳಾ ಕಾನ್ಸಟೇಬಲ್ ಅವರ ಧೈರ್ಯಕ್ಕೆ ಸಲಾಂ ಎನ್ನುತ್ತಿದ್ದಾರೆ. ಈ ಮಹಿಳಾ ಪೊಲೀಸ್ ಪೇದೆಯ ಹೆಸರು ಮೇರಿ ಸಾಹೇಲಿ ಎಂದು ತಿಳಿದು ಬಂದಿದೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಒಬ್ಬ ವ್ಯಕ್ತಿಯ ಪ್ರಾಣವನ್ನು ಕಾಪಾಡಿ ಮಾನವೀಯತೆ ಮೆರೆದ ಮಹಿಳೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *

You May Also Like

ಆಗಸ್ಟ್ 15ಕ್ಕೆ ದೇಶಕ್ಕೆ ಕೊರೋನಾ ಮೆಡಿಸಿನ್ ಸಿಗುತ್ತಾ?

ಕೊರೋನಾ ಲಸಿಕೆ ಉತ್ಪಾದನೆ ಹೇಗೆ? ದೆಹಲಿ: ಜುಲೈ 3 ಶುಕ್ರವಾರದಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್…

ಕಾಶ್ಮೀರದಲ್ಲಿ ಮುಂದುವರೆದ ಪಾಕ್ ದಾಳಿ: ಸರಣಿ ಕದನ ವಿರಾಮ ಉಲ್ಲಂಘನೆ

ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ದಾಳಿಯನ್ನು ಮುಂದುವರೆಸಿದೆ. ನಿನ್ನೆ ಮುಂಜಾನೆ ರಾಜ್ಯದ ವಿವಿಧೆಡೆ ಆರಂಭವಾಗಿರುವ ಕದನವಿರಾಮ ಉಲ್ಲಂಘನೆ ಇಡೀ ರಾತ್ರಿ ಮುಂದುವರೆದಿತ್ತು.

ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸೋಣ ಎಂದ ಉಭಯ ದೇಶಗಳು!

ನವದೆಹಲಿ: ಲಡಾಖ್ ಪ್ರದೇಶದ ಗಾಲ್ವಾನ್‌ ಕಣಿವೆಯಲ್ಲಿ ಪೂರ್ವ ನಿಯೋಜಿತರಾಗಿ ಚೀನಾ ಸೈನಿಕರು ನಮ್ಮ ಸೈನಿಕರ ಮೇಲೆ…

ಸಂಸದೆ ಸುಮಲತಾಗೆ ಕೊರೊನಾ ಪಾಸಿಟಿವ್

ಬೆಂಗಳೂರು: ಸಂಸದೆ ಸುಮಲತಾ ಅಂಬರೀಶ್ ಗೂ ಕೊರೊನಾ ಕಾಟ ಶುರುವಾಗಿದೆ. ಈ ಬಗ್ಗೆ ಸ್ವತ: ಸುಮಲತಾ…