ಹೈದರಾಬಾದ್ : ಚಲಿಸುತ್ತಿದ್ದ ರೈಲಿನಿಂದ ಕಾಲುಜಾರಿ ಬೀಳುತ್ತಿದ್ದ ವ್ಯಕ್ತಿಯನ್ನು ಮಹಿಳಾ ಪೊಲೀಸರೊಬ್ಬರು ಕಾಪಾಡಿರುವ ಘಟನೆ ಆಂಧ್ರ ಪ್ರದೇಶದ ವಿಶಾಕಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಚಲಿಸುತ್ತಿದ್ದ ರೈಲಿನಿಂದ ವ್ಯಕ್ತಿಯೊಬ್ಬ ಜಾರಿ ಬೀಳುತ್ತಿದ್ದನ್ನು ಅಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ ಗಮಿನಿಸಿ ಕೂಡಲೇ ಓಡಿ ಹೋಗಿ, ಆತನನ್ನು ಹಿಂದಕ್ಕೆ ಎಳೆದುಕೊಂಡು ಪ್ರಾಣ ಉಳಿಸಿದ್ದಾರೆ. ಈ ವಿಡಿಯೋವನ್ನು ಸದ್ಯ ರೈಲ್ವೆ ಇಲಾಖೆ ತಮ್ಮ ಟ್ವಿಟರ್ ಪೇಜ್ ನಲ್ಲಿ ಶೇರ್ ಮಾಡಿದ್ದು, ಜನರು ಮೆಚ್ಚುಗೆ ಗಳಿಸುತ್ತಿದೆ.

ನೆಟ್ಟಿಗರು ಮಹಿಳಾ ಕಾನ್ಸಟೇಬಲ್ ಅವರ ಧೈರ್ಯಕ್ಕೆ ಸಲಾಂ ಎನ್ನುತ್ತಿದ್ದಾರೆ. ಈ ಮಹಿಳಾ ಪೊಲೀಸ್ ಪೇದೆಯ ಹೆಸರು ಮೇರಿ ಸಾಹೇಲಿ ಎಂದು ತಿಳಿದು ಬಂದಿದೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಒಬ್ಬ ವ್ಯಕ್ತಿಯ ಪ್ರಾಣವನ್ನು ಕಾಪಾಡಿ ಮಾನವೀಯತೆ ಮೆರೆದ ಮಹಿಳೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *

You May Also Like

ಚುನಾವಣೆಯಲ್ಲಿ ಸಮೀಕ್ಷೆ ನಡೆಸಿ, ಭವಿಷ್ಯ ನುಡಿದರೆ ಹುಷಾರ್!

ನವದೆಹಲಿ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭವಿಷ್ಯ ನುಡಿಯದಂತೆ ಆಯೋಗ ಎಚ್ಚರಿಕೆ ನೀಡಿದೆ.

ಸತ್ತಲ್ಲಿ 20 ಜನರಿರಬೇಕು…ಮದ್ಯಕ್ಕೆ ಮಾತ್ರ ಸಾವಿರ ಜನರಿದ್ದರೂ ಸೈ!!

ಅಂತ್ಯ ಸಂಸ್ಕಾರಕ್ಕೆ 20 ಜನರ ಸೇರುವಂತಿಲ್ಲ. ಆದರೆ, ಮದ್ಯದಂಗಡಿಯ ಮುಂದೆ 1 ಸಾವಿರ ಜನರು ನಿಲ್ಲಬಹುದೇ ಎಂದು ಕೇಂದ್ರ ಸರ್ಕಾರದ ವಿರುದ್ಧ ಶಿವಸೇನೆ ಟೀಕೆ ಮಾಡಿದೆ.

80 ವರ್ಷದ ವೃದ್ಧಗ 80 ಕೋಟಿ ಕರೆಂಟ್ ಬಿಲ್ ಬಂದೈತಿ!

ಮನ್ಯಾಕ್ ಕಾಡೋ ಮಕ್ಕಳ್ ಕೈಯಾಗ್ ರೂಪಾಯಿ, ಎರಡ ರೂಪಾಯಿ ಕೊಡಾಕ ನಾವು ಹಿಂದ್-ಮುಂದ್ ನೋಡತಿವಿ. ಅಂಥಾದ್ರಾಗ‌ ಏಕಾಎಕಿ ತಿಂಗಳಿಗೊಮ್ಮೆ ಕಟ್ಟೋ ಬಿಲ್ ಕೋಟಿಗಟ್ಟಲೇ ಬಂದ್ರ ಬಿಲ್ ನೋಡಿದವ್ರ ಸ್ಥಿತಿ ಹ್ಯಾಂಗಾಗಿರಬಾರ್ದು.

ದೇಶದಲ್ಲಿ 7 ಸಾವಿರದಷ್ಟು ರೂಪಾಂತರ ಕೊರೊನಾ ವೈರಸ್

ದೇಶದಲ್ಲಿ ಕೊರೊನಾ ವೈರಸ್‌ನ 7 ಸಾವಿರಕ್ಕೂ ಹೆಚ್ಚು ರೂಪಾಂತರಗಳು ಇರುವ ಸಾಧ್ಯತೆ ಇದ್ದು, ಈ ಪೈಕಿ ಕೆಲವು ಗಂಭೀರ ಅಪಾಯ ಉಂಟುಮಾಡಬಹುದು ಎಂದು ಹಿರಿಯ ವಿಜ್ಞಾನಿ ರಾಕೇಶ್ ಮಿಶ್ರಾ ಹೇಳಿದ್ದಾರೆ.