ಮುಳಗುಂದ: ಅಂಚೆ ಸೇವೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಿದ್ದು ಗ್ರಾಮೀಣ ಜನರ ಬದಕು ಸುಧಾರಿಸಲು ಇಲಾಖೆಯು ಅಂಚೆ ಜೀವ ವಿಮಾ, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನ ಅಂಚೆ ಸಿಬ್ಬಂದಿ ಜನರ ಮನೆಬಾಗಿಲಿಗೆ ತಲುಪಿಸುವಂತಹ ಕೆಲಸ ಮಾಡಬೇಕು ಎಂದು ಗದಗ ಅಂಚೆ ವರಿಷ್ಠಾಧಿಕಾರಿ ಚಿದಾನಂದ ಪದ್ಮಸಾಲಿ ಹೇಳಿದರು.

ಅವರು ವಿಭಾಗೀಯ ಅಂಚೆ ಕಾರ್ಯಲಯದಲ್ಲಿ ಅಂಚೆ ಇಲಾಖೆಯ ಸಾಧಕ ಸಿಬ್ಬಂದಿಗಳ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾಸಿಕ ಉಳಿತಾಯ ಖಾತೆ, ಮಕ್ಕಳಿಗೆ ಭವಿಷ್ಯ ಖಾತೆ ನಿಧಿ ಹೀಗೆ ಅಂಚೆ ಇಲಾಖೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ನಗರದಲ್ಲಿ ದೊರೆಯುವ ಅಂಚೆ ಸೇವೆಗಳು ಗ್ರಾಮೀಣ ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಪ್ರತಿಯೊಬ್ಬ ಗ್ರಾಹಕರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಹಾಯಕ ಅಂಚೆ ಅಧೀಕ್ಷಕರಾದ ಎಂ.ಎಲ್.ಬಾಗವಾನ, ಎಂ.ಜಿ.ಕರಣ್, ಪ್ರಧಾನ ಅಂಚೆ ಕಚೇರಿ ಮುಖ್ಯಸ್ಥ ರಶೀಧಸಾಹೇಬ, ಎಸ್.ಸಿ ವಾಲಿಕಾರ, ಸೋಮಶೇಖರ ಮುದಗಲ್ಲ, ವಿಜಯಕುಮಾರ, ದುರದುಂಡಪ್ಪ, ರಾಜೇಂದ್ರಗೌಡ ಪಾಟೀಲ, ಜಿ.ಎನ್.ಶಿರಗುಪ್ಪಿ, ಎಸ್.ವಿ ಹಿರೇಮಠ, ವೆಂಕಟೇಶ್ ಆಕಳವಾಡಿ, ಸಿ.ಎಂ.ಕೊಪ್ಪದ, ರವಿ ವೆರ್ಣೇಕರ ಹಾಗೂ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

You May Also Like

ಸಾರಿಗೆ ಸಂಸ್ಥೆಯ ಬಸ್ ಪಲ್ಟಿ ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಉತ್ತರಪ್ರಭ ಸುದ್ದಿಲಕ್ಷ್ಮೇಶ್ವರ: ಸಾರಿಗೆ ಸಂಸ್ಥೆಯ ಬಸವೊಂದರ ವೀಲ್ ಜೇಂಟ್ ಕಟ್ ಆಗಿರುವ ಪರಿಣಾಮ, ಬಸ್ ಪಲ್ಟಿಯಾಗಿ…

Актуальное работающее зеркало БК Леон Рабочее зеркало официального сайта букмекерской конторы Леон

Актуальное работающее зеркало БК Леон Рабочее зеркало официального сайта букмекерской конторы Леон…

ವಾರಾಂತ್ಯ ಕಪ್ಯೂ೯ಗೆ ಉತ್ತಮ ಸ್ಪಂದನೆ : ನಿಡಗುಂದಿ ಸ್ತಬ್ಧ- ಆಲಮಟ್ಟಿ ಗಾಡ್೯ನಗಳು ಬೀಕೋ

ನಿಡಗುಂದಿ : ಸದಾ ಜನಜಂಗುಳಿಯಿಂದ ಗಿಜಗುಡುತ್ತಿದ್ದ ಪ್ರಮುಖ ರಸ್ತೆಗಳೆಲ್ಲ ಭಾಗಶಃ ಖಾಲಿಖಾಲಿ. ಅಂಗಡಿ,ಮುಂಗಟ್ಟುಗಳೆಲ್ಲ ಬಾಗಿಲು ತೆರೆಯದ…

ಪ್ರಕಾಶ ಗೊಂಗಡಿ ದಂಪತಿಗೆ ಆತ್ಮೀಯ ಸನ್ಮಾನ

ಆಲಮಟ್ಟಿ : ವಿಜಯಪುರ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧೀಕ್ಷಕ ಪ್ರಕಾಶ ಗೊಂಗಡಿ ಅವರಿಗೆ…