ನಿಡಗುಂದಿ : ಸದಾ ಜನಜಂಗುಳಿಯಿಂದ ಗಿಜಗುಡುತ್ತಿದ್ದ ಪ್ರಮುಖ ರಸ್ತೆಗಳೆಲ್ಲ ಭಾಗಶಃ ಖಾಲಿಖಾಲಿ. ಅಂಗಡಿ,ಮುಂಗಟ್ಟುಗಳೆಲ್ಲ ಬಾಗಿಲು ತೆರೆಯದ ಕಾರಣ ನಿಶಬ್ದ್ ವಾತಾವರಣ. ಹೀಗಾಗಿ ರಸ್ತೆ ಮೇಲೆ ಇಳಿಯಲು ಜನ ಹಿಂದೆ ಮುಂದೆ ನೋಡುವಂಥ ಪರಸ್ಥಿತಿ. ತುತು೯, ಅನಿವಾರ್ಯತೆ ಇದ್ದ ಜನರ ಅಲ್ಲಲ್ಲಿ ಹಿಂಜರಿಕೆಯ ಸಂಚಾರ…!
ಈ ನೋಟಗಳು ಕಂಡು ಬಂದಿದ್ದು ಐತಿಹಾಸಿಕ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ. ಹೌದು! ವಾರಾಂತ್ಯ ಕಪ್ಯೂ೯ ಜಾರಿ ಹಿನ್ನೆಲೆಯಲ್ಲಿ ಮೊದಲ ದಿನ ಕಂಡುಬಂದ ದೃಶ್ಯಗಳು ಇವು.


ಮಹಾಮಾರಿ ಕರೋನಾ ಮೂರನೆ ಅಲೆಯ ಆರ್ಭಟ್ ಆರಂಭವಾಗಿದ್ದು ಇದರಿಂದ ನಾಗರಿಕರು ಮತ್ತೆ ತತ್ತರಗೊಳ್ಳುವಂತಾಗಿದೆ. ಜನಸಮೂಹವನ್ನು ತಲ್ಲಣಗೊಳಿಸುತ್ತಿದೆ. ಈ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕರೆ ನೀಡಲಾಗಿದ್ದ ವಿಕೇಂಡ್ ವಾರಾಂತ್ಯದ ಮೊದಲ ದಿನದ ಕಪ್ಯೂ೯ಗೆ ನಿಡಗುಂದಿ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ಕಡಿಮೆ ಇತ್ತು. ಬಸ್ ಸಂಚಾರ ಆಗೊಮ್ಮೆ ಈಗೊಮ್ಮೆ ಅಷ್ಟಕ್ಕಷ್ಟೇ ! ಆಸ್ಪತ್ರೆ, ಔಷಧ ಮಳಿಗೆ, ಹೋಟೆಲ್‌, ತರಕಾರಿ,ಹಾಲು ದಿನಸಿ ಅಂಗಡಿಗಳು ಹೊರತು ಪಡಿಸಿ ಇನ್ನುಳಿದ ಅಂಗಡಿ,ಮುಂಗಟ್ಟುಗಳ ಬಾಗಿಲು ಮುಚ್ಚಲ್ಪಟ್ಟಿದ್ದವು. ಮುಂಜಾನೆ ಅಲ್ಲಲ್ಲಿ ತೆರೆದಿದ್ದ ಅಂಗಡಿಗಳನ್ನು ಮುಚ್ಚುವಂತೆ ಅಂಗಡಿ ಮಾಲೀಕರಿಗೆ ಪೋಲಿಸರು ತಮ್ಮ ದಾಟಿಯಲ್ಲಿ ಸೂಚಿಸಿದರಿಂದ ಅನಿವಾರ್ಯವಾಗಿ ತೆರೆದಿದ್ದ ಬಾಗಿಲು ಮುಚ್ಚಿದವು.


ತಹಶಿಲ್ದಾರ ಸತೀಶ ಕೂಡಲಗಿ ,ಪಿಎಸೈ ಚಂದ್ರಶೇಖರ್ ಹೆರಕಲ್ ಪೋಲಿಸ್ ಸಿಬ್ಬಂದಿಯೊಂದಿಗೆ ಪಟ್ಟಣದಲ್ಲಿ ರೌಂಡ್ ಹಾಕಿದರು. ಸೋಂಕು ನಿಯಂತ್ರಣಕ್ಕಾಗಿ ಜಾರಿಗೊಳಿಸಲಾದ ಮಾರ್ಗಸೂಚಿಗಳ ಪಾಲನೆಗೆ ಅಧಿಕಾರಿಗಳು ಮುಂದಾಗಿ ಪರಿಶೀಲನೆ ನಡೆಸಿದರು. ಬಿಗಿ ಕ್ರಮಗಳನ್ನು ಕೈಗೊಂಡರು. ಇದರಿಂದ ಸದಾ ಜನದಟ್ಟಣೆಯಿಂದ ಕೂಡಿರುತ್ತಿದ್ದ ರಸ್ತೆಗಳಲ್ಲಿ ಸಂಚಾರ ಕ್ಷೀಣಿಸಿತು. ಪರಿಣಾಮ ನಿತ್ಯ ಜನರ ಪಾದ ಸ್ಪರ್ಶದಿಂದ ನುಲುಗಿ ಹೈರಾಣಾಗುತ್ತಿದ್ದ ರಸ್ತೆಗಳಿಗೆ ಇಂದು ಕೊಂಚ ರಿಲೀಫ್ ಸಿಕ್ಕಂತಾಯಿತು.


ಬಸ್ ನಿಲ್ದಾಣದಲ್ಲಿ ಬಸ್ ಗಳ ವಿರಳತೆ ಕಂಡು ಬಂತು. ತಡವಾಗಿ ಆಗೊಮ್ಮೆ ಈಗೊಮ್ಮೆ ಬಸ್ ಗಳ ಸಂಚಾರದ ದರ್ಶನ ಕಂಡಿತು. ಪಕ್ಕದ ಬಾಗಲಕೋಟೆ ಜಿಲ್ಲೆಯಿಂದ ಇಲ್ಲಿ ಆಸ್ಪತ್ರೆಗೆ ತೋರಿಸಲು ಬಂದಿದ್ದ ಇರ್ವರು ಮರಳಿ ತಮ್ಮೂರಿಗೆ ತೆರಳಲು ಬಸ್ ಗಾಗಿ ಪರದಾಡುತ್ತಿದ್ದರು.


ಆಲಮಟ್ಟಿ ಉದ್ಯಾನವನಗಳೆಲ್ಲ ಖಾಲಿ…! ಪ್ರವಾಸಿಗರ ಸ್ವರ್ಗ ಆಲಮಟ್ಟಿಗೂ ಶನಿವಾರ ವಾರಾಂತ್ಯ ಕಪ್ಯೂ೯ ಬಿಸಿ ತಟ್ಟಿದೆ.

ಸದಾ ಪ್ರವಾಸಿಗರಿಂದ ತುಂಬಿರುತ್ತಿದ್ದ ಇಲ್ಲಿನ ಪ್ರಖ್ಯಾತ ರಾಕ್ ಗಾಡ್೯ನ್, ಎಂಟ್ರನ್ಸ್ ಪ್ಲಾಜಾ ಮೋಘಲ್ ಉದ್ಯಾನ, ಸಂಗೀತ ಕಾರಂಜಿ ಸೇರಿದಂತೆ ಬಗೆಬಗೆಯ ಆಕರ್ಷಕ ಅಂದ ಚೆಂದದ ಗಾಡ್೯ನ್ ಗಳೆಲ್ಲ ನೋಡುವ ಪ್ರವಾಸಿಗರಿಲ್ಲದೇ ಬೀಕೋ ಎನ್ನುತ್ತಿದ್ದವು. ಬೀದಿ ವ್ಯಾಪಾರ ವೂ ನಿಂತು ಹೋಗಿದ್ದವು. ಒಟ್ಟಿಗೆ ವಾರಾಂತ್ಯದ ಲಾಕ್ ಡೌನ್ ಬಿಸಿ ಬಸವನಾಡಿನ ಕರ್ಮಭೂಮಿಯ ಅಂಗಳದಲ್ಲಿ ತಟ್ಟಿದ್ದು ಹೆಮ್ಮಾರಿ ಹಿಮ್ಮೆಟ್ಟಿಸಲು ತಹಶಿಲ್ದಾರರು ಹಾಗು ಪೋಲಿಸ್ ಅಧಿಕಾರಿಗಳು ಪಟ್ಟಣದಾಂತ್ಯ ಭೇಟಿ ನೀಡಿ ಬಿಗುವಿನ ಬಂದೋಬಸ್ತ ಕೈಗೊಂಡರು.

Leave a Reply

Your email address will not be published. Required fields are marked *

You May Also Like

ಅಗರಬತ್ತಿ ಮಾರುವ ಕುಟುಂಬದಲ್ಲಿ ಸಾಗರನ ಸಾಧನೆಯ ಸುವಾಸನೆ

ಸಾಧೆನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸಾಧಿಸಬೇಕು ಎನ್ನುವ ಛಲವೊಂದಿದ್ದರೆ, ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಅಗರಬತ್ತಿ ಮಾರುವ ಕುಟುಂಬವೊಂದವರ ಕುವರನ ಕಥೆ ತಾಜಾ ಉದಾಹರಣೆ.

ಅಸ್ವಸ್ಥಗೊಂಡ ರಾಘವೇಂದ್ರ ರಾಜ್‌ಕುಮಾರ್ ಆಸ್ಪತ್ರೆಗೆ ದಾಖಲು

ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಮಂಗಳವಾರ ಸಂಜೆ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮದ್ಯಸೇವನೆ: ಯುವಕ ಸಾವು

ಕೊರೊನೊ ಸೋಂಕು ತಡೆಗಟ್ಟುವ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಲಾಗಿದ್ದ ವೈನ್ ಶಾಪ್ ಗಳು ತೆರೆಯುತ್ತಿದ್ದಂತೆ ಕುಡುಕರು ಬೇಕಾ‌ಬಿಟ್ಟಿ ಸಾರಾಯಿ ಕುಡಿದು ನಶೆ ಎರಿಸಿಕೊಂಡಿದ್ದಾರೆ. ಇದರ ಪರಿಣಾಮ ಸಾರಾಯಿ ಬಲಿ ಪಡೆದುಕೊಂಡಿದೆ.

ಪಂಚಮಸಾಲಿ ಸಮಾಜಕ್ಕೆ 2ಎ ಮಿಸಲಾತಿ ಅವಶ್ಯವಿದೆ: ಮೋಹನ ಮಾಳಿಶೆಟ್ಟಿ

ಪಂಚಮಸಾಲಿ 2ಎ ಮಿಸಲಾತಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಫೆ.21 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಜಿಲ್ಲೆಯ ಸಮಾಜದ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಮೋಹನ ಮಾಳಿಶೆಟ್ಟಿ ಹೇಳಿದರು.