ಮುಳಗುಂದ: ಸಮೀಪದ ಬೆಳಧಡಿ ಗ್ರಾಮದ ಅಂಚೆ ಕಚೇರಿಯಲ್ಲಿ ಮಂಗಳವಾರ ಗದಗ ಅಂಚೆ ವರಿಷ್ಠಾಧಿಕಾರಿ ಚಿದಾನಂದ ಪದ್ಮಸಾಲಿ ಅವರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಯಡಿ ಸಂಗಮೇಶ ಅರಕೇರಿಮಠ ಅವರಿಗೆ 2 ಲಕ್ಷ ರೂ ಮೊತ್ತದ ಚೆಕ್ ವಿತರಿಸಿದರು.
ನಂತರ ಮಾತನಾಡಿದ ಅವರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಕುಟುಂಬಕ್ಕೆ ಭದ್ರತೆಗೆ ಒದಗಿಸುತ್ತದೆ. ಕಡಿಮೆ ಮೊತ್ತದ ವಿಮಾ ಕಂತು ತುಂಬಿ, ಅಪಘಾತವಾಗಿ ಮೃತಪಟ್ಟರೆ 5 ಲಕ್ಷ, ಸ್ವಾಭಾವಿಕ ಸಾವಿಗೆ 2 ಲಕ್ಷ ರೂ ಮೊತ್ತವನ್ನ ಅವರ ಕುಟುಂಬದ ವಾರಸುದಾರರಿಗೆ ಇಲಾಖೆ ಒದಗಿಸುತ್ತದೆ. ಹೀಗೆ ಅನೇಕ ಉಳಿತಾಯ ಹಾಗೂ ಜೀವ ವಿಮಾ ಯೋಜನೆಗಳಿದ್ದು ಅಂಚೆ ಇಲಾಖೆ ಯೋಜನೆಗಳನ್ನು ಗ್ರಾಹಕರು ಸದುಪಯೋಗ ಮಾಡಿಕೊಳ್ಳಬೇಕು. ಎಂದರು.
ಸಹಾಯಕ ಅಂಚೆ ಅಧೀಕ್ಷಕ ಎಂ.ಜಿ.ಕರಣೆ ಮಾತನಾಡಿ, ಅಂಚೆ ಇಲಾಖೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಂಚೆ ಸಿಬ್ಬಂದಿಯು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೌಲಭ್ಯಗಳನ್ನ ಗ್ರಾಹಕರು ಪಡೆದುಕೊಳ್ಳಬೇಕು. ಎಂದರು.
ಗದಗ ಅಂಚೆ ಪಾಲಕ ಡಿ.ಡಿ.ಮುಳಗುಂದ ಸಭೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ನಿರ್ಮಲಾ ಇನಾಮತಿ, ಉಪಾಧ್ಯಕ್ಷ ಶಂಕ್ರಪ್ಪ ಹೊಸಳ್ಳಿ, ಸದಸ್ಯೆ ಲಕ್ಷ್ಮವ್ವ ಮುಂದಲಮನಿ, ಶಿಕ್ಷಕ ಕಲ್ಲಣ್ಣವರ, ಪಶು ವೈದ್ಯಾಧಿಕಾರಿ ಪಿ.ಎಸ್.ಗಣಾಚಾರಿ, ಅಂಚೆ ಮೇಲ್ವಿಚಾರಕ ಎಸ್.ವಿ.ಹಿರೇಮಠ, ವೆಂಕಟೇಶ ಆಕಳವಾಡಿ, ಶ್ರೀದೇವಿ ಕಲಕೇರಿ ಮೊದಲಾದವರು ಇದ್ದರು.