ಬೆಂಗಳೂರು: ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಮ್) 2025ರ ವೇಳೆಗೆ ರಾಜ್ಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.

ಈ ಕುರಿತು ಮಾಹಿತಿ ನೀಡಿದ ಅವರು, ಜಿಎಸ್ ಡಿಪಿಗೆ (ಗ್ರಾಸ್ ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್) ಡಿಜಿಟಲ್ ಎಕಾನಮಿಯ ಕೊಡುಗೆ ಶೇ.30 ತಲುಪಿಸಬೇಕು ಮತ್ತು ಬಿಯಾಂಡ್ ಬೆಂಗಳೂರು ಆರಂಭಿಸುವುದರಿಂದ ಈ ಗುರಿಯನ್ನು ತಲುಪಿಸುವಲ್ಲಿ ಸಹಾಯ ಮಾಡುತ್ತದೆ ಎಂದಿದ್ದಾರೆ.

ಕೆಡಿಇಎಮ್, ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಹೆಚ್ಚು ಬಂಡವಾಳವನ್ನು ಆಕರ್ಷಿಸಲಿದ್ದು, ಮಾಹಿತಿ ತಂತ್ರಜ್ಞಾನ ರಫ್ತಿನಲ್ಲಿ ಕರ್ನಾಟಕವು 150 ಬಿಲಿಯನ್ ಅಮೆರಿಕನ್ ಡಾಲರ್ ಗುರಿ ತಲುಪುವುದಕ್ಕೆ ಹಾಗು 2025ರ ಹೊತ್ತಿಗೆ 300 ಬಿಲಿಯನ್ ಯುಎಸ್ ಡಿ ಆಗುವಲ್ಲಿ ಸಹಾಯ ಮಾಡಲಿದೆ ಎಂದರು.

ಕೆಡಿಇಎಮ್ ಹೆಚ್ಚು ಉದ್ಯಮಸ್ನೇಹಿ ಆಗಬೇಕು ಎಂದು ಸರ್ಕಾರ ಬಯಸಿದೆ. ಸರ್ಕಾರವು ತನ್ನ ಬಳಿ ಅಧಿಕಾರ ಇಟ್ಟುಕೊಳ್ಳುವ ಬದಲಿಗೆ ಅನುಕೂಲ ಮಾಡಿಕೊಡುವ ಸ್ಥಾನ ನಿರ್ವಹಿಸುವುದಕ್ಕೆ ಮುಂದಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಕೈಗಾರಿಕೆ ಒಕ್ಕೂಟಗಳಿಗೆ ಶೇ.51ರಷ್ಟು ಪಾಲಿಗೆ ಅವಕಾಶ ನೀಡಲಾಗಿದೆ. ಶೇ.49 ತನ್ನ ಬಳಿ ಇರಿಸಿಕೊಂಡಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 299 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ 299 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 3221ಕ್ಕೆ ಏರಿಕೆಯಾದಂತಾಗಿದೆ.

ಮಕ್ಕಳಿಗೆ ಸೇವಾ ಮನೋಭಾವ ನೀಡಿ ; ಲಮಾಣಿ

ಸ್ಕೌಟ್ಸ್ ಮತ್ತು ಗೈಡ್ಸ್ಗಳು ಸನ್ನಡತೆ, ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವದಂಥ ಶಿಕ್ಷ ಣ ಪಡೆದು ಭಾರತೀಯ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಚಾರ ಎಂದು ಕೆ.ಆರ್.ಲಮಾಣಿ ಹೇಳಿದರು.

ಕೊರೊನಾ ಸೋಂಕಿತರಿಗೆ ಈ ಔಷಧಿ ನೀಡಬಾರದಂತೆ

ರೋಗಿಗಳು ಎಷ್ಟೇ ಅನಾರೋಗ್ಯಕ್ಕೆ ತುತ್ತಾಗಿದ್ದರೂ ಅವರಿಗೆ ಗಿಲೀಡ್‌ನ ರೆಮ್ಡೆಸಿವಿರ್ ಔಷಧ ನೀಡುವುದನ್ನು ಶಿಫಾರಸು ಮಾಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.