ತಿರುವನಂತಪುರ :  ಬಾರ್ ನಲ್ಲಿ ನಡೆದ ಗಲಾಟೆಯೊಂದು ಮರ್ಮಾಂಗ ಕತ್ತರಿಸಿದ ಘಟನೆಯಲ್ಲಿ ಅಂತ್ಯವಾಗಿದೆ.

ಈ ವಿಚಿತ್ರ ಘಟನೆ ಕೇರಳದ ಕುನ್ನಾಥುರನಲ್ಲಿ ನಡೆದಿದೆ. ಶರೀಫ್(28) ಎಂಬ ಯುವಕ 55 ವರ್ಷದ ಸುಲೇಮಾನ್ ಎಂಬುವವರ ಮರ್ಮಾಂಗ ಕತ್ತರಿಸಿದ್ದಾನೆ. ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮರ್ಮಾಂಗ ಮರು ಜೋಡಣೆ ಮಾಡಿದ್ದಾರೆ. 

ಬಾರ್ ಗೆ ತೆರಳುವುದಕ್ಕೂ ಮುನ್ನ ರಸ್ತೆಯಲ್ಲಿ ಶರೀಫ್ ಎಂಬಾತನ ಆಟೋ ಸುಲೇಮಾನ್ ರಿಹಾಇಶ್ ನ ಕಾರ್ ಗೆ ಡಿಕ್ಕಿ ಹೊಡೆದಿತ್ತು. ಈ ಕುರಿತು ಇಬ್ಬರ ನಡುವೆ ಸ್ಥಳೀಯ ಪಾರ್ಕ್ ನಲ್ಲಿ ಜಗಳ ನಡೆದಿತ್ತು. ಆದರೆ, ಮತ್ತೆ ಬಾರ್ ನಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮತ್ತೊಮ್ಮೆ ಜಗಳ ಶುರುವಾಗಿದೆ.

ಈ ಜಗಳ ವಿಕೋಪಕ್ಕೆ ತೆರಳಿ ಶರೀಫ್ ಕೋಪದಲ್ಲಿ ಸುಲೇಮಾನ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆ ನಂತರ ಮರ್ಮಾಂಗವನ್ನು ಹಲ್ಲಿನಿಂದ ಕಚ್ಚಿ ಕತ್ತರಿಸಿದ್ದಾನೆ. ಈ ಗಲಾಟೆಯಲ್ಲಿ ಬಾರ್ ಸಿಬ್ಬಂದಿಯ ಮೇಲೆಯೂ ಶರೀಫ್ ಹಲ್ಲೆ ನಡೆಸಿದ್ದಾನೆ. ಆನಂತರ ಬಾರ್ ಗ್ರಾಹಕರ ನೆರವಿನಿಂದ ಶರೀಫ್ ನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. 

Leave a Reply

Your email address will not be published. Required fields are marked *

You May Also Like

ದೇಶದಲ್ಲಿ ಕೊರೊನಾ ಇನ್ನೂ ಗರಿಷ್ಠ ಮಟ್ಟಕ್ಕೆ ಹೋಗಲಿದೆಯೇ?

ನವದೆಹಲಿ : ದೇಶದಲ್ಲಿ ಸದ್ಯ ದಿನದಿಂದ ದಿನಕ್ಕೆ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಆದರೆ, ನವೆಂಬರ್ ವೇಳೆಗೆ…

ಕೋವಿಡ್ ಚಿಕಿತ್ಸೆಗೆ ₹5 ಲಕ್ಷದವರೆಗೆ ಸಾಲ: ಸಾರ್ವಜನಿಕ ವಲಯದ ಬ್ಯಾಂಕುಗಳು ಘೋಷಣೆ

ಕೋವಿಡ್ ಎರಡನೇ ಅಲೆ ದೇಶಾದ್ಯಂತ ಹೆಚ್ಚು ವ್ಯಾಪಿಸಿ ಸಂದಿಗ್ಧ ಪರಿಸ್ಥಿತಿ ಉಂಟು ಮಾಡಿದ್ದು, ಇದರಿಂದ ಅಸುರಕ್ಷಿತ ಸಾಲ ನೀಡುಲು ನಿರ್ಧಾರ ಮಾಡಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕುಗಳ ಸಂಘ (ಐಬಿಎ) ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿವೆ

ಗೋಲ್ಡ್ ಸ್ಮಗ್ಲಿಂಗ್: ‘ಸ್ವಪ್ನ’ ಸುಂದರಿ ಲಾಕ್ ಡೌನಿನಲ್ಲಿ ಬೆಂಗಳೂರಿಗೆ ಬಂದಿದ್ದು ಹೇಗೆ?

ಯುಎಇಯಿಂದ 30 ಕೆಜಿ ಚಿನ್ನ ಅಕ್ರಮ ಸಾಗಾಣಿಕೆಯ ಆರೋಪ ಎದುರಿಸುತ್ತಿರುವ ಸ್ವಪ್ನ ಸುರೇಶ್ ಲಾಕ್ ಡೌನ್ ಸಂದರ್ಭದಲ್ಲಿ ಕೆರಳದಿಂದ ಬೆಂಗಳೂರು ತಲುಪಿದ್ದು ಹೇಗೆ?

ಸಾಯುವ ಸಮಯವನ್ನು ನಟ ಸುಶಾಂತ್ ಮೊದಲೇ ನಿರ್ಧರಿಸಿದ್ದರೆ?

ಬೆಂಗಳೂರು: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಹಲವರ…