ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಅಡಿಯಲ್ಲಿ ಖಾಲಿ ಇರುವ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿವಿಲ್ ಹುದ್ದೆಗೆ ಕರ್ನಾಟಕ ರಾಜ್ಯ ಪೊಲೀಸ್ (ಕೆಪಿಎಸ್) ಅರ್ಜಿ ಆಹ್ವಾನಿಸಿದೆ.
ಈಗಾಗಲೇ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಮತ್ತು ಆರ್ಹ ಆಭ್ಯರ್ಥಿಗಳು psicivilnhk20.ksp-online.in ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಪಿಎಸ್ ಐ (ಸಿವಿಲ್) ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 107 ಹುದ್ದೆಗಳಳು, ಉಳಿದ ಪ್ರದೇಶದಲ್ಲಿ 438 ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸಲು ಈಗಾಲೇ ಆರಂಭವಾಗಿದ್ದು, ಫೆ.22 ಕೊನೆಯದಿನವಾಗಿದೆ. ಅರ್ಜಿ ಸಲ್ಲಿಸಲು ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ಸಾಮಾನ್ಯ ವರ್ಗ 21-30 ವರ್ಷ, ಎಸ್ಸಿ, ಎಸ್ಟಿ ಪ್ರವರ್ಗ-1, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 21 ರಿಂದ 32ರ ವರೆಗೆ ಅವಕಾಶವಿದ್ದು, ಸೇವೆಯಲ್ಲಿರುವ ಅಭ್ಯರ್ಥಿಗೆ 35 ವರ್ಷ ಮೀರಿರಬಾರದು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 500 ರೂ., ಇತರೆ ವರ್ಗದ ಅಭ್ಯರ್ಥಿಗಳಿಗೆ 250 ರೂ. ನಿಗಧಿ ಮಾಡಲಾಗಿದೆ.

Leave a Reply

Your email address will not be published. Required fields are marked *

You May Also Like

ಅಡರಕಟ್ಟಿ-ಬಡ್ನಿ ರಸ್ತೆಗೆ ದುರಸ್ಥಿ ಭಾಗ್ಯವೆಂದು? ಕಾಮಗಾರಿ ಮುಗಿಸಿ ಕೈತೊಳೆದುಕೊಂಡರೇ ಗುತ್ತಿಗೆದಾರ!

ಸಂಚಾರ ಸುಗಮವಾಗಿದ್ದರೆ, ಎಲ್ಲವೂ ಸೌಖ್ಯ, ಆದರೆ ಅದೇ ಸಂಚಾರ ಸಂಕಟದಿಂದ ಕೂಡಿದರೆ ಸಂಚಕಾರ ಗ್ಯಾರಂಟಿ. ಅದೆಷ್ಟೋ ಜನರು ಗುತ್ತಿಗೆ ಪಡೆದು ರಸ್ತೆ ನಿರ್ಮಾಣದಲ್ಲಿ ಗುಣಮಟ್ಟಕ್ಕಿಂತ ಕಮಾಯಿ ಮಾಡಿಕೊಂಡಿದ್ದೇ ಜಾಸ್ತಿ. ಇನ್ನು ರಸ್ತೆ ನಿರ್ಮಾಣದ ನಂತರ ನಿರ್ವಹಣೆ ಮಾಡಬೇಕಾದವರು ಆ ಕಡೆ ಮುಖಾನೂ ಮಾಡಿಲ್ಲ. ಇಂತಹ ಅದೆಷ್ಟೋ ರಸ್ತೆಗಳಿಂದ ಜನಸಾಮಾನ್ಯರಿಗೆ ಸಂಚಕಾರಕ್ಕೆ ಸಂಚಕಾರ ಬಂದಿದೆ. ಹೀಗಾಗಿ ನಿಮ್ಮ ಉತ್ತರಪ್ರಭ ಗದಗ ಜಿಲ್ಲೆಯಲ್ಲಿನ ಇಂಥ ರಸ್ತೆಗಳ ಕುರಿತು ಸಂಚಿಕೆ ರೂಪದಲ್ಲಿ ಸುದ್ದಿ ಪ್ರಸಾರ ಮಾಡಲು ಮುಂದಾಗಿದೆ.

ಗಜೇಂದ್ರಗಡ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಫಲಿತಾಂಶ 

ಗಜೇಂದ್ರಗಡ: ತೀವೃ ಕುತೂಹಲ ಕೆರಳಿಸುವುದಲ್ಲದೇ, ಪೈಪೋಟಿಗೆ ಕಾರಣವಾಗಿದ್ದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಫಲಿತಾಂಶ ಮಂಗಳವಾರ ರಾತ್ರಿ ಪ್ರಕಟವಾಗಿದೆ.

ನೌಕರರ ವಲಯದಲ್ಲಿ ನಿರಾಸೆ ಕಾಮೋ೯ಡ ಮೂಡಿಸಿದ ಬಜೆಟ್-ಚಂದ್ರಶೇಖರ ನುಗ್ಲಿ

ಆಲಮಟ್ಟಿ : ಮುಖ್ಯ ಮಂತ್ರಿಗಳು ಇಂದು ಮಂಡಿಸಿದ ಬಜೆಟ್ ರಾಜ್ಯದ ನೌಕರರಿಗೆ ಹಾಗೂ ಶಿಕ್ಷಕರ ಸಮೂಹಕ್ಕೆ…

ಶಿರಹಟ್ಟಿ ಕಟ್ಟಿಗೆ ಅಡ್ಡೆಗಳ ವಿಚಾರದಲ್ಲಿ ಪತ್ರಗಳ ತಾಪತ್ರೆಯ ತಪ್ಪೋದು ಯಾವಾಗ?

ಒಂದು ಮಾದ್ಯಮವಾಗಿ ಉತ್ತರಪ್ರಭ ಜನಪರವಾಗಿ ಕಾರ್ಯ ಮಾಡುತ್ತಿರುವಾಗ ಆಡಳಿತ ಯಂತ್ರಕ್ಕೆ ಮಾತ್ರ ಈ ವಿಚಾರದ ಗಂಭೀರತೆಯ ಅರ್ಥವಾಗುತ್ತಿಲ್ಲವೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಕಾರಣ ಈಗಾಗಲೇ ಶಿರಹಟ್ಟಿ ಪಟ್ಟಣದಲ್ಲಿರುವ ಕಟ್ಟಿಗೆ ಅಡ್ಡೆಗಳ ವಿಚಾರವಾಗಿ ಸೂಕ್ತ ಕ್ರಮಕ್ಕಾಗಿ ಶಿರಹಟ್ಟಿ ತಹಶೀಲ್ದಾರ್ ಸ್ಥಳೀಯ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಆದೇಶಿಸಿದ್ದರು.