ಗಜೇಂದ್ರಗಡ: ತೀವೃ ಕುತೂಹಲ ಕೆರಳಿಸುವುದಲ್ಲದೇ, ಪೈಪೋಟಿಗೆ ಕಾರಣವಾಗಿದ್ದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಫಲಿತಾಂಶ ಮಂಗಳವಾರ ರಾತ್ರಿ ಪ್ರಕಟವಾಗಿದೆ.

ಗಜೇಂದ್ರಗಡ ತಾಲೂಕಾ ಸಂಘದ ಒಟ್ಟು 10 ಸ್ಥಾನಗಳಿಗೆ 18 ಜನರು ಸ್ಪರ್ಧಿಸಿದ್ದರು. ಗ್ರಾಮ ಪಂಚಾಯತ್ ಚುನಾವನೆ ಮದ್ಯೆಯೂ ಕಳೆದೊಂದು ವಾರಗಳಿಂದ ಶಿಕ್ಷಕರು ಶಾಲೆಗಳಿಗೆ ತೆರಳುವ ಮೂಲಕ ಭರ್ಜರಿ ಪ್ರಚಾರ ನಡೆಸಿದ್ದರು.

ಐದು ವರ್ಷಗಳ ಅಧಿಕಾರವಧಿಗೆ ಶಿಕ್ಷಕರ ವಲಯದಲ್ಲಿ ಪೈಪೋಟಿಗಳು ಏರ್ಪಟ್ಟಿದ್ದವು. ಆದರೆ ಅಂತಿಮವಾಗಿ ಮತದಾರು ಶಿಕ್ಷಕರು 7 ಪುರುಷ 3 ಮಹಿಳಾ ಶಿಕ್ಷಕರನ್ನು ಆಯ್ಕೆ ಮಾಡುವ ಮೂಲಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ನಾಂದಿ ಹಾಡಿದ್ದಾರೆ.

466 ಮತದಾರರಲ್ಲಿ ೩೮೪ ಮತಗಳು ಚಲಾವಣೆಯಾಗಿದ್ದವು. ಅಂತಿಮವಾಗಿ ಬಿ.ಎಸ್. ಅಣ್ಣಿಗೇರಿ, ಎ.ಕೆ. ಒಂಟಿ, ವಿ.ಎ. ಹಾದಿಮನಿ, ಎಸ್.ಕೆ. ಸರಗಣಾಚಾರಿ, ಮಹಮ್ಮದರಫಿ ಹುನಗುಂದ, ಬಸವರಾಜ ಹಿರೇಮಠ, ಎಸ್.ಎಚ್. ಪರಸಣ್ಣವರ, ಎಸ್.ಆರ್. ಅಂಗಡಿ, ಎಫ್.ಎಫ್. ದೊಡ್ಡಮನಿ, ಸುಧಾ ಜಾಡರ ಅವರು ಚುನಾವಣೆಯಲ್ಲಿ ಹೆಚ್ಚು ಮತ ಪಡೆದು ವಿಜಯ ಸಾಧಿಸಿದರು.

ಫಲಿತಾಂಶ ಹೊರಬೀಳುತ್ತಿದ್ದಂತೆ ಮತಗಟ್ಟೆ ಕೇಂದ್ರದ ಮುಂದೆ ಜಮಾಮಿಸಿದ್ದ ಶಿಕ್ಷಕರು ಸ್ಪರ್ಧೆಯಲ್ಲಿ ಜಯಗಳಿಗೆ ಶಿಕ್ಷಕರಿಗೆ ಹೂಮಾಲೆ ಹಾಕುವ ಮೂಲಕ ಅಭಿನಂದಿಸಿ, ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಎಸ್.ಎ. ಜಿಗಳೂರ, ಎಸ್.ಎಸ್. ಕೊಪ್ಪರದ, ಆರ್.ಜಿ. ಮ್ಯಾಕಲ್, ಕೆ.ಜಿ. ಸಂಗಟಿ ಸೇರಿದಂತೆ ಹಲವಾರು ಶಿಕ್ಷಕರು ಪಾಲ್ಗೊಂಡಿದ್ದರು. ಚುನಾವಣಾ ಅಧಿಕಾರಿಯಾಗಿ ಎಸ್.ಎಂ. ಬದಾಮಿ ಮತ್ತು ಸಹಾಯಕ ಚುನಾವಣಾ ಅಧಿಕಾರಿ ಸಿ.ಎ¸ಸ್. ಹರಗಬಾಳ, ಮತದಾನ ಅಧಿಕಾರಿ, ಎಸ್.ಎಂ ಅಗಸಿಬಾಗಿಲ, ಐ.ಕೆ. ಹಂಸನೂರ, ಎಸ್.ಪಿ. ಕುರಿ ಸೇರಿದಂತೆ ಇತರರು ಕಾರ್ಯ ನಿರ್ವಹಿಸಿದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿಂದು 24 ಕೊರೊನಾ ಪಾಸಿಟಿವ್!

ಗದಗ ಜಿಲ್ಲೆಯಲ್ಲಿಂದು ಮತ್ತೆ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.

ಕೋವೀಡ್ ನಿಂದ ಮೃತಪಟ್ಟ ಕೊರೊನಾ ವಾರಿಯರ್ಸ್ ಕುಟುಂಬಕ್ಕೆ ಪರಿಹಾರ ನೀಡಿ-ಸಿದ್ದರಾಮಯ್ಯ

ಬೆಂಗಳೂರು: ಕೊರೋನಾ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿಗಳ ತಳ ಮಟ್ಟದ ಸಿಬ್ಬಂದಿಗಳು, ಶಿಕ್ಷಕರು, ಆರೋಗ್ಯ ಇಲಾಖೆ, ಪೊಲೀಸ್, ಕಂದಾಯ, ಸಾರಿಗೆ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳು, ಪಶುವೈದ್ಯರು ಮುಂತಾದವರು ನೇರವಾಗಿ ಜನರ ಜೊತೆ ಇದ್ದು ಕೆಲಸ ಮಾಡುತ್ತಿದ್ದಾರೆ. ಇವರುಗಳಿಗೆ ವಿಶೇಷ ರಕ್ಷಣೆ ನೀಡಬೇಕಾದದ್ದು ಸರ್ಕಾರದ ಜವಾಬ್ಧಾರಿ ಎಂದು ಮಾಜಿ ಸಿಎಂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.