ತಿರುವನಂತಪುರಂ : ಮಾದಕ ನಟಿ ಸನ್ನಿ ಲಿಯೋನ್ ಅವರನ್ನು ಕೇರಳ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ನಟಿ ಸನ್ನಿ ಲಿಯೋನ್ ಅವರು ರೂ. 29 ಲಕ್ಷ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸನ್ನಿ ಲಿಯೋನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಪೊಲೀಸರು, ಚಿತ್ರೀಕರಣದ ಸಂದರ್ಭದಲ್ಲಿಯೇ ತೆರಳಿ ಸನ್ನಿ ವಿಚಾರಣೆ ನಡೆಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಹೋಗಲು ಆಗಿಲ್ಲ. ಆದರೆ, ನಾನು ಭಾಗವಹಿಸಲು ರೂ. 12 ಲಕ್ಷ ಮಾತ್ರ ಪಡೆದಿದ್ದೇನೆ. ಆ ಹಣವನ್ನು ಹಿಂದಿರುಗಿಸುತ್ತೇನೆ. 5 ಬಾರಿ ಕಾರ್ಯಕ್ರಮ ರದ್ದುಗೊಳಿಸಿ ಮುಂದೂಡಲಾಗಿತ್ತು. ಇದಕ್ಕೆಲ್ಲ ಕಾರ್ಯಕ್ರಮದ ಸಂಘಟಕರು ಕಾರಣ ಎಂದು ಸನ್ನಿ ಹೇಳಿದ್ದಾರೆ.

ಆದರೆ, ಕಾರ್ಯಕ್ರಮದ ಆಯೋಜಕರು ಮಾತ್ರ ಸನ್ನಿ, ಕೊಚ್ಚಿಯಲ್ಲಿ 2 ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ಹೇಳಿ, ರೂ. 29 ಲಕ್ಷ ಪಡೆದಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಸದ್ಯ ಈ ಕುರಿತು ವಿಚಾರಣೆ ನಡೆದಿದೆ.

Leave a Reply

Your email address will not be published. Required fields are marked *

You May Also Like

ಸದ್ದು ಮಾಡುತ್ತಿದೆ ಶೀತಲ್ ಶೆಟ್ಟಿ ನಿರ್ದೇಶನದ ಚಿತ್ರ!

ಬೆಂಗಳೂರು : ವಿಂಡೋ ಸೀಟ್ ಗಾಗಿ ಶೀತಲ್ ಶೆಟ್ಟಿ ನಿರ್ದೇಶಕರ ಕ್ಯಾಪ್ ಹಾಕಿದ್ದು, ಸದ್ಯ ಅಧಿಕೃತ ಪ್ರಕಟಣೆ ಹೊರ ಬಂದಿದೆ.

ಶೂಟಿಂಗ್ ಮುಗಿಸಿ ಬರುತ್ತಿದ್ದ ವೇಳೆ ಅಲ್ಲು ಅರ್ಜುನ್ ಕಾರ್ ಗೆ ಅಪಘಾತ!

ಮುಂಬಯಿ : ಶೂಟಿಂಗ್ ಮುಗಿಸಿ ಮರಳಿ ಬರುತ್ತಿದ್ದ ಸಂದರ್ಭದಲ್ಲಿ ನಟ ಅಲ್ಲು ಅರ್ಜುನ್ ಅವರ ಕ್ಯಾರವಾನ್ ಗೆ ಹಿಂದಿನಿಂದ ಲಾರಿ ಗುದ್ದಿದ ಘಟನೆ ನಡೆದಿದೆ.

ರಾಗ ಪೊಲ್ಕ್ ಪ್ಯೂಜನ್ ಬ್ಯಾಂಡ್ ವತಿಯಿಂದ ಸಂಗೀತ ತರಗತಿಗಳು

ರಾಗ ಪೊಲ್ಕ್ ಪ್ಯೂಜನ್ ಬ್ಯಾಂಡ್ ವತಿಯಿಂದ ಗದಗನಲ್ಲಿ ಪ್ರಪ್ರಥಮ ಬಾರಿಗೆ ಆರು ವಿವಿಧ ಸಂಗೀತ ವಾದ್ಯಗಳನ್ನು ಕಲಿಯುವ ಆಶಕ್ತಿಯುಳ್ಳ ಸಂಗೀತ ಪ್ರೀಯರಿಗೆ ಅದರಲ್ಲಿ ವಿಶೇಷವಾಗಿ ಕೊಳಲು, ಡಿಜಂಬೆ, ತಬಲಾ, ಗೀಟಾರ್, ಕಾಜನ, ಕೀ ಬೋರ್ಡ, ಧೋಲ್ ತಾಶಾ ಸಂಗೀತ ತರಗತಿಗಳು ಇದೇ ತಿಂಗಳು ಜೂನ್

ಟಾಲಿವುಡ್ ಅಂಗಳದಲ್ಲಿ ಮೆರೆಯಲಿದ್ದಾರೆ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಅವರನ್ನು ಟಾಲಿವುಡ್ ಅಂಗಳಕ್ಕೆ ಕರೆ ತರುವ ಮಾತುಗಳು ಮುನ್ನೆಲೆಗೆ ಬಂದಿದೆ.