ಬೆಂಗಳೂರು: ಕಿಚ್ಚ ಸುದೀಪ್ ಅವರನ್ನು ಟಾಲಿವುಡ್ ಅಂಗಳಕ್ಕೆ ಕರೆ ತರುವ ಮಾತುಗಳು ಮುನ್ನೆಲೆಗೆ ಬಂದಿದೆ. ಮಹೇಶ್ ಬಾಬು ಅಭಿನಯದ ಹೊಸ ಚಿತ್ರಕ್ಕೆ ವಿಲನ್ ಆಗಿ ಕಿಚ್ಚ ಸುದೀಪ್ ಅವರನ್ನು ಕರೆತರಲು ಚಿತ್ರ ತಂಡ ಚಿಂತನೆ ನಡೆಸಿದೆ.
ಮಹೇಶ್ ಬಾಬು ಅಭಿನಯದ ಮುಂದಿನ ಚಿತ್ರ ಸರ್ಕಾರು ವಾರಿ ಪಾಟದಲ್ಲಿ ಕಿಚ್ಚನನ್ನು ವಿಲನ್ ಆಗಿ ನೋಡಲು ಚಿತ್ರ ತಂಡ ಬಯಸಿದೆ. ಚಿತ್ರದ ನಿರ್ದೇಶಕ ಪರುಶುರಾಮ್ ಅವರು ಮಹೇಶ್ ಬಾಬುಗೆ ಟಕ್ಕರ್ ಕೊಡಲು ಮತ್ತು ಆ ವಿಲನ್ ಪಾತ್ರಕ್ಕೆ ಜೀವ ತುಂಬಲು ಸುದೀಪ್ ಅವರೇ ಸರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಿಚ್ಚ ಸುದೀಪ್ ಅವರಿಗೆ ಭಾರತದ ಎಲ್ಲಡೇ ಅಭಿಮಾನಿಗಳು ಇದ್ದಾರೆ. ಅವರು ಈಗಾಗಲೇ ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಹೀಗಾಗಿ ದಕ್ಷಿಣ ಭಾರತದೊಂದಿಗೆ ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ತನ್ನ ಪ್ರಾಭಲ್ಯ ಮೆರೆದಿದ್ದಾರೆ. ಹೀಗಾಗಿ ಎಲ್ಲೆಡೆ ಅವರ ಅಭಿಮಾನಿಗಳು ಇವರನ್ನು ಕಾಣಲು ಹಾತೋರೆಯುತ್ತಿದ್ದಾರೆ. ಪರಿಣಾಮವಾಗಿಯೇ ಅವರಿಗೆ ಈ ಆಫರ್ ಬಂದಿದೆ.
ಈಗಾಗಲೇ ಸರ್ಕಾರು ಪಾಟಿ ಪಾಟದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಇದರಲ್ಲಿ ಒಂದು ರೂಪಾಯಿ ನಾಣ್ಯದ ಟ್ಯಾಟೂವನ್ನು ಕತ್ತಿನ ಮೇಲೆ ಹಾಕಿಸಿಕೊಂಡು ಮಹೇಶ್ ಬಾಬು ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.