ಲಕ್ಷ್ಮೇಶ್ವರ: ತಾಲೂಕಿನ ಬಾಳೆಹೊಸೂರು ಗ್ರಾಮ ಪಂಚಾಯತಿಗೆ ಇಂದು ನಡೆಯಲಿರುವ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದು ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿಯಿಂದ ಬಾಲೆಹೊಸೂರು ಗ್ರಾಮ ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.

ಇದರಿಂದ ನಿಜವಾದ ದಲಿತರಿಗೆ ಅನ್ಯಾಯ ವಾಗಲಿದೆ. ಪ್ರಕರಣ ಇತ್ಯರ್ಥ ಆಗುವವರೆಗೆ ಚುನಾವಣೆ ಮುಂದೂಡಬೇಕೆಂದು ದಲಿತ ಸಂಘರ್ಷ ಸಮೀತಿ ಆಗ್ರಹಿಸಿದೆ.

ನೂರಾರು ಕಾರ್ಯಕರ್ತರು ಗ್ರಾಪಂಗೆ ಬೀಗ ಜಡಿದು ಹಲಿಗೆ ಬಾರಿಸುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ.

ಡಿಎಸ್ಎಸ್ ಹಿರಿಯ ಮುಖಂಡ ಸುರೇಶ ನಂದೆಣ್ಣವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಮುಂಜಾನೆಯಿಂದಲೆ ಗಾ.ಪಂ ಎದುರು ಧಿಡೀರ ಪ್ರತಿಭಟನೆ ನಡೆಸಿದ್ದಾರೆ.

ಈಗಾಗಲೇ ಈ ಪ್ರಕರಣ ಧಾರವಾಡದ ಶ್ರೇಷ್ಠ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು ಸಂಬಂಧ ಪಟ್ಟವರಿಗೆ ನೋಟಿಸ್ ಕೂಡ ಜಾರಿಯಾಗಿದೆ. ಆದ್ದರಿಂದ ಪ್ರಕರಣ ಇತ್ಯರ್ಥ ಆಗುವವರೆಗೂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯನ್ನು ಮುಂದೂಡಬೇಕೆಂದು ಮತ್ತು ನಿಜವಾದ ದಲಿತರಿಗೆ ನ್ಯಾಯ ದೊರಕಬೇಕೆಂದು ಪಟ್ಟು ಹಿಡಿದು ಕುಳಿತಿದ್ದಾರೆ.

ಕೊಡಲೇ ಜಿಲ್ಲಾ ಅಧಿಕಾರಿಗಳು ಮಧ್ಯಪ್ರವೇಶಿಸಿ ಇಂದು ನಡೆಯಲಿರುವ ಬಾಲೆಹೊಸೂರು ಗ್ರಾ.ಪಂ ಅಧ್ಯಕ್ಷ ಚುನಾವಣೆಯನ್ನು ರದ್ದುಗೊಳಿಸಿ ತ್ವರಿತ ಆದೇಶ ಮಾಡಬೇಕೆಂದು ಪಟ್ಟುಹಿಡಿದಿದ್ದಾರೆ.

Leave a Reply

Your email address will not be published. Required fields are marked *

You May Also Like

ಗ್ರಾಮೀಣಾಭಿವೃದ್ಧಿ ವಿವಿಯಿಂದ ಸಸಿ ನೆಟ್ಟು, ಸೆಲ್ಫಿ ಹಂಚಿಕೊಳ್ಳುವ ನನ್ನ ಗಿಡ ನನ್ನ ಉಸಿರು ಅಭಿಯಾನ

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಹಾಗೂ ಜಿಲ್ಲಾ ಅರಣ್ಯ ಇಲಾಖೆ ಇವರ ಸಹಯೋಗದೊಂದಿಗೆ ಜೂ.5ರಂದು ವಿಶಿಷ್ಟ ರೀತಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಪ್ಪತ್ತಗುಡ್ಡ ಸಂರಕ್ಷಣೆಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಜನಾಂದೋಲನವೇ ಪರಿಹಾರ : ಜಾರಕಿಹೊಳಿ

ಕಪ್ಪತ್ತಗುಡ್ಡ ರಕ್ಷಣೆ ಮಾಡುವ ವಿಚಾರದಲ್ಲಿ ನಮ್ಮ ಅವಧಿಯಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಆದರೆ ಈಗೀನ ಬಿ.ಎಸ್.ವೈ ಸರ್ಕಾರ ಗಣಿಗಾರಿಕೆ ಮುಕ್ತ ಮಾಡುವಲ್ಲಿ ಬಹುತೇಕ ಕೆಲಸ ಮುಗಿಸಿದೆ.

ಇನ್ನು ಕೆಲವೇ ದಿನಗಳಲ್ಲಿ ಹೊಸ ಮರಳು ನೀತಿ ಅನ್ವಯ ಕಾರ್ಯಾರಂಭ: ಸಿ.ಸಿ.ಪಾಟೀಲ್

ಇನ್ನು ಕೆಲವೇ‌ ದಿನಗಳಲ್ಲಿ ನೂತನ ಮರಳು‌ ನೀತಿ‌ ಪ್ರಾರಂಭಿಸಲಿದ್ದೇವೆ. ಜೊತೆಗೆ ಎಂಎಂಐಎಲ್ ಹಾಗೂ ಹಟ್ಟಿ ಚಿನ್ನದ ಗಣಿ ಎಜಿನ್ಸಿಗಳಿಗೆ ನೂತನ ಮರಳು ನೀತಿ‌ ಅನ್ವಯ ಮರಳು ತೆಗೆಯಲು ಈ ಎರೆಡು ಎಜಿನ್ಸಿಗಳಿಗೆ ಆದೇಶ‌ ನೀಡಲಾಗಿದೆ.

ಅಪ್ಪಾ ಹೇಳಿದ ಹೊಡಿ ಒಂಭತ್ತಿನ ಕಥಿ ಏನು ಗೊತ್ತಾ…?

ಹಿಗ್ಗಿನಿಂದ ಕುಣಿದಾಡಿದ ಅಪ್ಪನ ಮಾತು ನಂಬಿ ಪಾಪ ಗುಂಡ ಮುಗಿಲು ನೋಡಿಕೊಂಡ ಮಲಗಿದ. ಗುಂಡನ ಅಪ್ಪನ ಹಿಗ್ಗಿಗೆ ಕಾರಣ ಏನು ಗೊತ್ತಾ..? ಹಾಗಾದ್ರೆ ಈ ಕಥೆ ಓದಿ