ಕುಣಿಗಲ್: ರಾಜ್ಯ ಸರ್ಕಾರ ಒಕ್ಕಲಿಗ ಸಮುದಾಯಕ್ಕೆ ಧಕ್ಕೆ ಉಂಟು ಮಾಡುವ ನಿರ್ಧಾರ ತೆಗೆದುಕೊಳ್ಳಲು ಮುಂದಾದರೆ ಸಮುದಾಯ ಸುಮ್ಮನಿರಲ ಎಂದು ಆದಿಚುಂಚನ ಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ತಾಲೂಕು ಒಕ್ಕಲಿಗ ಧರ್ಮ ಮಹಾಸಭಾ ಹಮ್ಮಿಕೊಂಡಿದ್ದ ಭೈರವೈಕ್ಯ ಬಾಲಗಂಗಾಧರ ನಾಥ ಮಹಾಸ್ವಾಮೀಜಿ ಅವರ ಪುಣ್ಯಸ್ಮರಣೆ ಹಾಗೂ ಒಕ್ಕಲಿಗ ಧರ್ಮ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಕ್ಕಲಿಗ ಸಮುದಾಯವೂ ಧ್ವನಿ ಎತ್ತದಿದ್ದರೆ ಸುಮುದಾಯಕ್ಕೆ ಬೇಕಾದ ಸವಲತ್ತು ಹಾಗೂ ಸೌಲಭ್ಯಗಳು ಸಿಗುವುದಿಲ್ಲ. ಇಡೀ ದೇಶವೇ ಜಾತಿ, ಧರ್ಮದ ವ್ಯವಸ್ಥೆಯಡಿ ನಿಂತಿದೆ. ಜಾತಿ ವ್ಯವಸ್ಥೆ ಬಗ್ಗೆ ವಿಸ್ತೃತ ಚರ್ಚೆಗಳು ನಡೆಯಬೇಕಿದೆ. ಎಲ್ಲರೂ ಒಂದು ಜಾತಿ, ಒಂದು ಧರ್ಮವನ್ನು ಸ್ವೀಕರಿಸಿಕೊಂಡಿದ್ದಾರೆ.

ರಾಜ್ಯ ಸರ್ಕಾರ ಆರು ತಿಂಗಳಿAದ ಸುಮುದಾಯಕ್ಕೆ ಧಕ್ಕೆ ಉಂಟು ಮಾಡುವ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದು, ಸಮುದಾಯ ಸೂಕ್ಷತ್ರ‍್ಮವಾಗಿ ಗಮನಿಸುತ್ತಿದೆ. ಅದು ಮುಂದುವರಿದರೆ ಮುಂದಿನ ವಿದ್ಯಮಾನಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಸರಕಾರ ಎಚ್ಚರಿಕೆಯಿಂದ ನಡೆದು ಕೊಳ್ಳಬೇಕು ಎಂದರು.

ಏರುಪೇರುಗಳಾದ ಸಂದರ್ಭದಲ್ಲಿ ಧ್ವನಿ ಇಲ್ಲದೇ ಯಾರೂ ಏನನ್ನೂ ಕೊಡಲ್ಲ. ಕುಣಿಗಲ್‌ನ ಇಂದಿನ ಒಕ್ಕಲಿಗ ಧರ್ಮ ಸಮಾವೇಶದಿಂದಲೇ ಒಕ್ಕಲಿಗರ ಧ್ವನಿ ಕೇಳತೊಡಗಲಿದೆ. ಆಡಳಿತ ನಡೆಸುವ ವರ್ಗ, ಒಕ್ಕಲಿಗ ಸಮುದಾಯಕ್ಕೆ ಧಕ್ಕೆ ಉಂಟು ಮಾಡುವ ಯಾವುದೇ ನಿರ್ಧಾರ ಕೈಗೊಂಡಿದ್ದು, ಸರ್ಕಾರ ಇಂತಹ ದುಸ್ಸಾಹಸಕ್ಕೆ ಕೈಹಾಕುವುದು ಬಿಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನAದನಾಥ ಸ್ವಾಮೀಜಿ, ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ, ಒಕ್ಕಲಿಗ ಮಹಾ ಸಭಾದ ಅಧ್ಯಕ್ಷ ಕೃಷ್ಣೆಗೌಡ ಮುಂತಾದವರಿದ್ದರು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಸೋಂಕು!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇಂದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3,014ರಷ್ಟು ದಾಖಲಾಗಿದೆ.

ಗದಗ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ ಕ್ವಾರಂಟೈನ್ ಕೇಂದ್ರ..!

ನಿನ್ನೆಯಷ್ಟೆ ರಾಜ್ಯದ ಉಡುಪಿ ಜಿಲ್ಲೆಯ ಕೊರೋನಾ ಸೋಂಕು ವ್ಯಾಪಕವಾಗುವುದರಲ್ಲಿ ಕ್ವಾರಂಟೈನ್ ಕೇಂದ್ರಗಳ ಪಾತ್ರ ಹಾಗೂ ಅವ್ಯವಸ್ಥೆ ಕುರಿತು ಉತ್ತರಪ್ರಭ ವಿಶೇಷ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೆ ಇದೀಗ ಗದಗ ಜಿಲ್ಲೆಯಲ್ಲಿನ ನಿನ್ನೆಯ ಪ್ರಕರಣದ ಟ್ರಾವೆಲ್ ಹಿಸ್ಟರಿ ಬೆನ್ನತ್ತಿದಾಗ ತಾಲೂಕು ಆಡಳಿತದ ನಿರ್ಲಕ್ಷ್ಯ ಎದ್ದು ತೋರುತ್ತಿದೆ.

ಜಿಮ್ಸನಲ್ಲಿ ಘಟಿಕೋತ್ಸವ : ಸಚಿವ ಪಾಟೀಲ ಹೇಳಿಕೆ

ವೈದ್ಯ ವೃತ್ತಿ ಪವಿತ್ರ ವೃತ್ತಿಯಾಗಿದ್ದು ವೈದ್ಯ ನಾರಾಯಣ ಭವೋ ಎಂಬ ಗಾದೆಗೆ ತಕ್ಕಂತೆ ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುವಂತೆ ವೈದ್ಯ ಪದವಿ ಪಡೆದ ವಿಧ್ಯಾರ್ಥಿಗಳಿಗೆ ರಾಜ್ಯ ಸಣ್ಣ ಕೈಗಾರಿಕೆ, ವಾರ್ತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ರಾಜ್ಯದಲ್ಲಿಂದು 2496 ಪಾಸಿಟಿವ್, ಸಾವಿನ ಸಂಖ್ಯೆಯಲ್ಲೂ ಏರಿಕೆ: ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು 2496 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 44077 ಕ್ಕೆ ಏರಿಕೆಯಾದಂತಾಗಿದೆ.