ಮುಂಡರಗಿ: ಸರ್ಕಾರದ ಯೋಜನೆಗಳು ಹಾಗು ಸೌಲಭ್ಯಗಳು ಸಾಕಷ್ಟು ಇವೆ. ಆದರೆ ಅವುಗಳ ಸದ್ಭಳಕೆಯಾಗಬೇಕು. ಮುಖ್ಯವಾಗಿ ಸಶಕ್ತಿಕರಣದ ಮೂಲ ಉದ್ದೇಶ ಸಾಕಾರವಾಗಬೇಕು ಎಂದು ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.

ಅವರು ತಾಲೂಕಿನ ಬಸಾಪೂರ ಗ್ರಾಮದಲ್ಲಿ ಎಸ್.ಬಿ.ಐ ಗ್ರಾಮಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ಇಂದು ಯೋಜನೆಗಳ ಸದ್ಭಳಕೆಗೆ ಅವುಗಳನ್ನು ಪಡೆದುಕೊಳ್ಳು ಮತ್ತು ಸೌಲಭ್ಯ ಒದಗಿಸುವವರು ಕೂಡ ಸರಿಯಿಲ್ಲ ಎಂದು ಅನಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಎಲ್ಲಿಯವರೆಗೆ ಜನಸಾಮಾನ್ಯರಲ್ಲಿ ಸಾಮಾಜಿಕ ಹೊಣೆಗಾರಿಕೆ ಬಂದಾಗ ಮಾತ್ರ ಯೋಜನೆಗಳು ಸದ್ಭಳಕೆ ಹಾಗು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಅಭಿವೃದ್ಧಿ ಹಾಗು ಸೌಲಭ್ಯ ಪಡೆದುಕೊಳ್ಳಲು ಪ್ರತಿಯೊಬ್ಬರಲ್ಲಿ ವ್ಯವಧಾನದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮಸ್ಥರು ಸಹಭಾಗಿತ್ವ ಪಡೆದುಕೊಳ್ಳುವ ಮೂಲಕ ಸುಂದರ ಹಾಗು ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.

ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಹೆಚ್ಚು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಪ್ರಯತ್ನಿಸಬೇಕು ಎಂದರು.

ಯಾರು ಕೂಡ ನಮ್ಮ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನಮ್ಮ ಅಭಿವೃದ್ಧಿಯನ್ನು ನಾವೇ ಮಾಡಿಕೊಳ್ಳಬೇಕು ಎಂದರು.

SBI ಗ್ರಾಮ ಸೇವಾ ಕೇಂದ್ರದಿಂದ ಬಸಾಪೂರ ಗ್ರಾಮಕ್ಕೆ ನೀಡಲಾದ ಒಕ್ಕುಯಂತ್ರಕ್ಕೆ ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಅಧ್ಯಕ್ಷ ಈಶ್ವರಪ್ಪ ನಾಡಗೌಡ್ರ, ಗ್ರಾಮ ಪಂಚಾಯತಿಯಿಂದ ಹಿಡಿದು ರಾಜ್ಯ ಹಾಗು ಕೇಂದ್ರ ಸರ್ಕಾರದ ಯೋಜನೆಗಳ ಸದ್ಭಳಕೆ ಮಾಡಿಕೊಳ್ಳಬೇಕು. ಯಾವುದೇ ಕೆಲಸವಾದರೂ ಸರ್ಕಾರವೇ ಮಾಡಬೇಕು ಎನ್ನುವ ಭಾವನೆ ಸರಿಯಲ್ಲ.

ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ವಚ್ಛತೆ ಪಾತ್ರ ಮುಖ್ಯವಾಗಿದೆ. ಗ್ರಾಮದ ಸ್ವಚ್ಛತೆಯಲ್ಲಿ ಪ್ರತಿಯೊಬ್ಬ ಗ್ರಾಮಸ್ಥರ ಪಾತ್ರವೂ ಮಹದ್ದಾಗಿದೆ. ಬಹಳಷ್ಟು ಗ್ರಾಮಗಳಲ್ಲಿ ಚರಂಡಿ ಸ್ವಚ್ಛತೆಯೇ ಇರುವುದಿಲ್ಲ. ಗ್ರಾಮ ಪಂಚಾಯತಿಯಲ್ಲಿ ಚರಂಡಿ ಸ್ವಚ್ಛತೆ ನಿರ್ವಹಣೆಗೆ ಸಿಬ್ಬಂದಿಗಳ ಕೊರತೆ ಇದೆ. ಪ್ರತಿಯೊಬ್ಬರು ನಾವು ನಮ್ಮ ಪಾಲಿನ ಕರ ಸೂಕ್ತ ಸಮಯದಲ್ಲಿ ತುಂಬಿದರೆ ಹೆಚ್ಚು ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಬಸಾಪೂರ ಗ್ರಾಮದಲ್ಲಿ ನಡೆದ SBI ಗ್ರಾಮ ಸೇವಾ ಕೇಂದ್ರದ ಉದ್ಘಾಟನೆಯನ್ನು ಜಿಪಂ ಅಧ್ಯಕ್ಷ ನಾಡಗೌಡ್ರ ನೆರವೇರಿಸಿದರು.

ಗ್ರಾಮಗಳ ಅಭಕವೃದ್ಧಿ ವಿವಾರದಲ್ಲಿ ಪಕ್ಷ ಹಾಗು ರಾಜಕೀಯ ಬೆರೆಸಬಾರದು. ರಾಜಕೀಯ ರಹಿತವಾಗಿ ಊರಿನ ಬಗ್ಗೆ ಕಾಳಜಿ ತೋರಿದಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಸಂಪನ್ಮೂಲ ವ್ಯಕ್ತಿ ನವೀನ್ ಝಾ ಮಾತನಾಡಿ ನಮ್ಮೆದುರಿಗೆ ನೈರ್ಮಲ್ಯವಿದ್ದರೂ ನಾವು ಕಾಳಜಿ ತೋರದೆ ಇದ್ದರೆ ಆಡಳಿತ ವ್ಯವಸ್ಥೆಯಷ್ಟೆ ನಾವು ಕೂಡ ತಪ್ಪಿನ ಹೊಣೆ ಹೊರಬೇಕಾಗುತ್ತದೆ. ಹೀಗಾಗಿ ಗ್ರಾಮದ ಸ್ವಚ್ಛತೆ ಹಾಗು ಅಭಿವೃದ್ಧಿ ವಿಚಾರದಲ್ಲಿ ಪ್ರತಿಯೊಬ್ಬರು ಕಾಳಜಿ ತೋರಬೇಕಿದೆ ಎಂದರು.

ಸಂಕಲ್ಪ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಸಿಕಂದರ್ ಮೀರಾನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನ ಐದು ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುವ ಉದ್ದೇಶ ಹೊಂದಲಾಗಿದ್ದು, ಗ್ರಾಮ ಸೇವಾ ಕೇಂದ್ರದ ಮೂಲಕ ಆನ್ ಲೈನ್ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದ್ದು, ಸಂಜೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಯೋಜನೆ ರೂಪಿಸಲಾಗಿದೆ. ಇನ್ನು ಗ್ರಾಮಕ್ಕೊಂದರಂತೆ ಒಕ್ಕುವ ಯಂತ್ರ ನೀಡಲಾಗಿದ್ದು, ಗ್ರಾಮಸ್ಥರು ಸೇವಾ ಕೇಂದ್ರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಈ ವೇಳೆ ಗ್ರಾಮದ ಯುವಕರಿಗೆ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಶಾಂತವ್ವ ಭರಮಪ್ಪನವರ್ ಅಧ್ಯಕ್ಷತೆ ವಹಿಸಿದ್ದರು.
ಪಿಡಿಓ ಮಹೇಶ್ ಅಲ್ಲಿಪುರ ಹಾಗು ವೀರುಪಾಕ್ಷಯ್ಯ ತಾಮ್ರಗುಂಡಿ ಮಾತನಾಡಿದರು‌.

ಭೀಮಣ್ಣ ಕೆಲೂರ, ಬಸಾಪೂರ, ಕೆಲೂರ್, ಹಾರೊಗೇರಿ, ಪೇಠಾಲೂರ, ತಾಮ್ರಗುಂಡಿ ಗ್ರಾಮಗಳ ಗ್ರಾಪಂ ಸದಸ್ಯರು, ಹಿರಿಯರು ಭಾಗವಹಿಸಿದ್ದರು‌.

Leave a Reply

Your email address will not be published. Required fields are marked *

You May Also Like

ಪೋಸ್ಟ್ ಆಫೀಸ್ ಬ್ಯಾಂಕಿಂಗ್ ನಲ್ಲಿ : 500 ರೂ, ಬ್ಯಾಲೆನ್ಸ್​ ಕಡ್ಡಾಯ!

ಇನ್ಮುಂದೆ ನಿಮ್ಮ ಪೋಸ್ಟ್ ಆಫೀಸ್ ಬ್ಯಾಂಕಿಂಗ್ ಖಾತೆಯಲ್ಲಿ 500 ರೂಪಾಯಿ ಉಳಿತಾಯ ಕಡ್ಡಾಯವಾಗಿದೆ. ಒಂದು ವೇಳೆ ಅಷ್ಟು ಹಣ ಇಲ್ಲದಿದ್ರೆ ದಂಡ ಕಟ್ಟಬೇಕಾಗಿದೆ.

ಗದಗ ಜಿಲ್ಲೆಯಲ್ಲಿಂದು 99 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು ಕೂಡ 99 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಈವರೆಗೆ…

ಕಪ್ಪತ್ತಗುಡ್ಡ ಸಂರಕ್ಷಣೆಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಜನಾಂದೋಲನವೇ ಪರಿಹಾರ : ಜಾರಕಿಹೊಳಿ

ಕಪ್ಪತ್ತಗುಡ್ಡ ರಕ್ಷಣೆ ಮಾಡುವ ವಿಚಾರದಲ್ಲಿ ನಮ್ಮ ಅವಧಿಯಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಆದರೆ ಈಗೀನ ಬಿ.ಎಸ್.ವೈ ಸರ್ಕಾರ ಗಣಿಗಾರಿಕೆ ಮುಕ್ತ ಮಾಡುವಲ್ಲಿ ಬಹುತೇಕ ಕೆಲಸ ಮುಗಿಸಿದೆ.

ಆಕಸ್ಮಿಕ ಬೆಂಕಿಗೆ ಬಣಿವೆ ಭಸ್ಮ

ವರದಿ: ವಿಠಲ ಕೆಳೂತ್ಮಸ್ಕಿ: ತಾಲೂಕಿನ ಜಕ್ಕೇರಮಡು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮೇವಿನ ಬಣಿವೆ ಸುಟ್ಟು…