ನವದೆಹಲಿ: ಇನ್ಮುಂದೆ ನಿಮ್ಮ ಪೋಸ್ಟ್ ಆಫೀಸ್ ಬ್ಯಾಂಕಿಂಗ್ ಖಾತೆಯಲ್ಲಿ 500 ರೂಪಾಯಿ ಉಳಿತಾಯ ಕಡ್ಡಾಯವಾಗಿದೆ. ಒಂದು ವೇಳೆ ಅಷ್ಟು ಹಣ ಇಲ್ಲದಿದ್ರೆ ದಂಡ ಕಟ್ಟಬೇಕಾಗಿದೆ.

ನಿಮ್ಮ ಖಾತೆಯಲ್ಲಿ 500 ರೂಪಾಯಿ ಹಣ ಇಡುವುದು ಕಡ್ಡಾಯ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ನಿಮ್ಮ ಖಾತೆಯಲ್ಲಿ 500 ರೂಪಾಯಿ ಇಲ್ಲವಾದಲ್ಲಿ, ನಿಮ್ಮ ಖಾತೆಯಿಂದ 100 ರೂಪಾಯಿ ಕಡಿತ ಮಾಡಲಾಗುವುದು. ಡಿಸೆಂಬರ್​​ 11ರಿಂದಲೇ ಈ ನಿಯಮ ಜಾರಿಯಾಗುವುದಾಗಿ ತಿಳಿಸಲಾಗಿದೆ.

ಇನ್ನು ಮುಂದೆ ಹಣ ತೆಗೆಯುವಾಗ ಕನಿಷ್ಟ ಉಳಿತಾಯ 500 ರೂಪಾಯಿ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಪೋಸ್ಟ್​ ಆಫೀಸ್​ ಬ್ಯಾಂಕ್​ ತಿಳಿಸಿದೆ. ಪೋಸ್ಟ್​ ಆಫೀಸ್​ ಬ್ಯಾಂಕಿನಲ್ಲಿ ಪ್ರಸ್ತುತ ಉಳಿತಾಯಕ್ಕೆ ಶೇ.4 ಬಡ್ಡಿದರದಲ್ಲಿ ಬಡ್ಡಿ ನೀಡಲಾಗುತ್ತಿದೆ. ಹೊಸ ಖಾತೆ ತೆರೆಯಲು ಕನಿಷ್ಠ 500 ರೂಪಾಯಿ ಠೇವಣಿ ಮಾಡಬೇಕು. ನಂತರ ಕನಿಷ್ಠ 10 ರೂಪಾಯಿ ಠೇವಣಿ ಮತ್ತು ಕನಿಷ್ಠ 50 ರೂಪಾಯಿ ವಾಪಾಸಾತಿ ಪಡೆಯಬಹುದಾಗಿದೆ.

Leave a Reply

Your email address will not be published. Required fields are marked *

You May Also Like

ಮದ್ಯಾಹ್ನದ ಬಿಸಿಊಟದ ಬದಲು ವಿದ್ಯಾರ್ಥಿಗಳ ಖಾತೆಗೆ ಸರ್ಕಾರದ ಹಣ

ನವದೆಹಲಿ: ಮಕ್ಕಳ ಪೌಷ್ಠಿಕಾಂಶದ ಮಟ್ಟವನ್ನು ಕಾಪಾಡಲು ಸಹಾಯ ಮಾಡುವ ಸಲುವಾಗಿ, ಮಧ್ಯಾಹ್ನದ ಊಟ ಯೋಜನೆಯಡಿ ಮಕ್ಕಳಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಆರ್ಥಿಕ ಸಹಾಯವನ್ನು ಕಳುಹಿಸಲಾಗುವುದು. ಸರ್ಕಾರದ ಈ ಯೋಜನೆಯಿಂದ ಸುಮಾರು 11.8 ಕೋಟಿ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ ಎನ್ನಲಾಗಿದೆ.

ಅನ್ನ ನೀರಿಲ್ಲದೆ ನಿತ್ರಾಣನಾದ ಆ ವೃದ್ಧ ಮನೆ ತಲುಪಿದ್ದು ಹೇಗೆ?

ಲಾಕ್ ಡೌನ್ ಹಿನ್ನೆಲೆ ಅದೆಷ್ಟೋ ಜನ ಒಂದಲ್ಲ ಒಂದು ಕಾರಣಕ್ಕೆ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ವೃದ್ಧನೊಬ್ಬ ಗೋಳಾಟ ಇದಕ್ಕೊಂದು ಉದಾಹರಣೆ.

ಪ್ರತಾಪಗೌಡ ಪಾಟೀಲ ಉಪ ಚುನಾವಣೆಯಲ್ಲಿ ಗೆದ್ದರೆ ಸಚಿವ ಸ್ಥಾನ

ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ವಿರುದ್ಧ ಹೈಕೋರ್ಟಿನಲ್ಲಿ ದಾಖಲಾಗಿದ್ದ ಚುನಾವಣೆ ತಕರಾರು ಅರ್ಜಿ ವಜಾಗೊಂಡಿದೆ. ಇದೀಗ ಪ್ರತಾಪಗೌಡ ಅವರು ಉಪ ಚುನಾವಣೆಯಲ್ಲಿ ಜಯಶಾಲಿ ಆದರೆ ಸಚಿವ ಸ್ಥಾನ ಸಿಗಲಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಮೌನೇಶ ಮುರಾರಿ ಹೇಳಿದರು.

ಗದಗ ಜಿಲ್ಲೆಯಲ್ಲಿಂದು ಮತ್ತೆ 6 ಕೊರೊನಾ ಪಾಸಿಟಿವ್!: ಒಂದು ಸಾವು

ಜಿಲ್ಲೆಯಲ್ಲಿಂದು 06 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 322 ಕ್ಕೆ ಏರಿಕೆಯಾಗಿದೆ. ಇಂದು 05 ಜನ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು