ಲಕ್ಷ್ಮೇಶ್ವರ: ಸರಕಾರದ ಮೂಲಕ ಅನುದಾನ ತಂದು ಎಲ್ಲಾ ನಾಗರಿಕರಿಗೂ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಅವರು, ತಾಲೂಕಿನ ಬಾಲೇಹೊಸೂರಿನ ಪ್ರಗತಿ ಕಾಲೋನಿಯಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಈಗಾಗಲೇ ಗ್ರಾಮದ ಎಲ್ಲಡೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಚರಂಡಿ ವ್ಯವಸ್ಥೆ, ಸಮರ್ಪಕವಾಗಿದ್ದು ಇನ್ನೂ ಹೆಚ್ಚಿನ ಮಟ್ಟದಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಕುರಿತಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಕಾಮಗಾರಿ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡುವಂತೆ ತಿಳಿಸಲಾಗಿದೆ.

ಯಾವುದೇ ಹಂತದಲ್ಲೂ ಕಾಮಗಾರಿಯ ಗುಣಮಟ್ಟದ ಕಳಪೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಫಕ್ಕೀರೇಶ ಹುಲ್ಲೂರ, ದೇವಣ್ಣ, ಮಲ್ಲೇಶ, ಬಸವರಾಜ ಹಿರೇಕೆರಿ, ಶಿವರಾಜ, ಫಕ್ಕಿರೇಶ ಕಟ್ಟಿಮನಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

You May Also Like

ರಸ್ತೆ ಅಪಘಾತ ಮಗು ಸೆರಿ ಇಬ್ಬರ ದುರ್ಮರಣ

ಮುಂಡರಗಿ: ಮುಂಡರಗಿ ತಾಲೂಕಿನ ಡಂಬಳ ಮತ್ತು ಮೇವುಂಡಿ ಮಾರ್ಗ ಮಧ್ಯೆ ಮೆಕ್ಕೆ ಜೋಳ ತುಂಬಿಕೊಂಡು ಹೊರಟಿದ್ದ ಟ್ರಾಕ್ಟರಗೆ ಹಿಂದಿನಿಂದ ಬಂದ ಕಾರು ಟ್ರಾಕ್ಟರಗೆ ಡಿಕ್ಕಿ ಹೊಡೆದಿದ್ದು ಕಾರಿನಲ್ಲಿದ್ದ ಮಗು ಸೆರಿ ಇಬ್ಬರ ಸಾವು, ಉಳಿದವರ ಪರಿಸ್ಥಿಥಿ ಗಂಭಿರ. ಮುಂಡರಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಗೊಂಡಿದೆ.

ಕೊರೊನಾ ಕಾರಣದಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ- ಸಿ.ಸಿ.ಪಾಟೀಲ್

ಕೊರೋನಾದ ಪರಿಣಾಮದಿಂದ ಕಂಗಾಲಾದ ನಾವು ನೀವೆಲ್ಲರೂ ಇದೀಗ ಹೊರಗಡೆ ಬಂದಂತಾಗಿದೆ, ಸುಮಾರು ದಿನಗಳಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಪೂಜೆ ಮಾಡದೇ ಇರುವುದಕ್ಕೆ ಕಾರಣ ಈ ಮಹಾಮಾರಿ ಕರೋನ. ಇದರಿಂದ ದೇಶದ ಬೊಕ್ಕಸ, ರಾಜ್ಯದ ಬೊಕ್ಕಸ, ವ್ಯಾಪಾರಸ್ಥರಿಗೆ ಹಿನ್ನೆಡೆ ಮತ್ತು ಉದ್ಯಮಿಗಳಿಗೆ ಭಾರೀ ತೊಂದರೆ ಉಂಟಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ರಾಜ್ಯ ಸರ್ಕಾರದಿಂದ ವಾಹನ ಸವಾರರಿಗೆ ಬಿಗ್ ಶಾಕ್ : ಉಚಿತ ಪಾರ್ಕಿಂಗ್ ರದ್ದು

ವಾಹನ ಸವಾರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ಬೆಂಗಳೂರಿನಲ್ಲಿ ಪ್ರಸ್ತುತ ಇರುವ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ರದ್ದು ಮಾಡಲು ಗ್ರೀನ್ ಸಿಗ್ನಲ್ ನೀಡಿದೆ.ಪ್ರಸ್ತುತ ಬೆಂಗಳೂರಿನಲ್ಲಿ ಇರುವ ಬಹುತೇಕ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಪಾವತಿ ಪಾರ್ಕಿಂಗ್ ವ್ಯವಸ್ಥೆಗೆ ಬದಲಾಯಿಸುವುದು ಸೇರಿದಂತೆ ನಗರ ಭೂಸಾರಿಗೆ ನಿರ್ದೇಶನಾಲಯ ಸಿದ್ಧಪಡಿಸಿರುವ ಪರಿಷ್ಕೃತ ಪಾರ್ಕಿಂಗ್ ನೀತಿ 2.0 ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.